ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಪೈಲ್ವಾನ ನಾಗಿ ಕುಸ್ತಿ ಅಖಾಡಕ್ಕೆ ಇಳಿಯಲಿದ್ದಾರೆ. ತೊಡೆ ತಟ್ಟಿ ನಿಲ್ಲಲಿದ್ದಾರೆ. 

ಈಗಾಗಲೇ ಪೈಲ್ವಾನ್ ಟೀಸರ್, ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ’ಪೈಲ್ವಾನ’ ನಾಗಿ ಸುದೀಪ್ ರನ್ನು ತೆರೆ ಮೇಲೆ ನೋಡಬೇಕೆಂದು ಅಭಿಮಾನಿಗಳನ್ನು ಕಾಯುತ್ತಿದ್ದಾರೆ. ಈಗಾಗಲೇ ಎಲ್ಲಾ ಕಡೆ ಪೈಲ್ವಾನ್ ಬಗ್ಗೆ ಪ್ರಮೋಶನ್ ನಡೆಯುತ್ತಿದೆ. ಬಾಲಿವುಡ್ ನಲ್ಲಿ ಪ್ರಮೋಶನ್ ಮಾಡಲು ಖ್ಯಾತ ರಿಯಾಲಿಟಿ ಶೋ ’ಕಪಿಲ್ ಶರ್ಮಾ’ ಶೋನಲ್ಲಿ ಪೈಲ್ವಾನ್ ತಂಡ ಭಾಗವಹಿಸಿತ್ತು. 

ಸುದೀಪ್ ಜೊತೆ ಸುನೀಲ್ ಶೆಟ್ಟಿ ಭಾಗವಹಿಸಿದ್ದರು. Amazing time at the kapil sharma show... Team ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.