ಬಿಗ್ ಬಾಸ್ 7 ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಮನೆಯೊಳಗೆ ಯಾರ್ಯಾರು ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ. ಈ ಸಲ ಕೇವಲ ಸೆಲಬ್ರಿಟಿಗಳು ಮಾತ್ರ, ಜನಸಾಮಾನ್ಯರಿಗೆ ಅವಕಾಶವಿಲ್ಲ ಎಂದು ಹೇಳಲಾಗುತ್ತಿದೆ. 

ಬಿಗ್ ಬಾಸ್ ಮನೆ ಎಂಟ್ರಿ ಲೆಟೆಸ್ಟ್ ಲಿಸ್ಟ್, ಹನುಮಂತನ ಜೊತೆ ಟಿಕ್ ಟಾಕ್ ಶೂರರು!

ಈಗಾಗಲೇ ಒಂದು ಪ್ರೋಮೋವನ್ನು ಬಿಡಲಾಗಿದ್ದು ಕಿಚ್ಚ ಸುದೀಪ್ ಸಖತ್ ಫನ್ ಮಾಡಿದ್ದಾರೆ. ಇದು ಮದ್ರಾಸ್ ಐ ಅಲ್ಲ, ಬಿಗ್ ಬಾಸ್ ಐ ಎನ್ನುವ ಡೈಲಾಗ್ ಪಂಚಿಂಗ್ ಆಗಿದೆ. ಈಗ ಕಲರ್ಸ್ ಕನ್ನಡ ಇನ್ನೊಂದು ಪ್ರೋಮೋ ರಿಲೀಸ್ ಮಾಡಿದೆ. ಬಿಗ್ ಬಾಸ್ ಮನೆ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸುದೀಪ್ ಕೊಟ್ಟ ಉತ್ತರ ಮಾತ್ರ ಸಖತ್ ಮಜವಾಗಿದೆ. 

 

ಅಮೂಲ್ಯ, ಸರಿಗಮಪ ಖ್ಯಾತಿಯ ಹನುಮಂತಪ್ಪ, ಶಿವರಾಜ್ ಕೆ ಆರ್ ಪೇಟೆ, ಕುರಿ ಪ್ರತಾಪ್, ರಾಗಿಣಿ ದ್ವಿವೇದಿ, ರಾಧಾ ರಮಣ ಖ್ಯಾತಿಯ ರಾಧಾ ಮಿಸ್, ಸಿತಾರಾ ರಾವಲ್ ಹೆಸರು ಬಹಳ ದಟ್ಟವಾಗಿ ಕೇಳಿ ಬರುತ್ತಿದೆ. ಆದರೆ ಅದಿನ್ನೂ ಅಧಿಕೃತವಾಗಿಲ್ಲ. ಈ ಬಗ್ಗೆ ಕಿಚ್ಚ ಸುದೀಪ್ ಗೇ ಅವರೂ ಕೂಡಾ ಉತ್ತರ ಕೊಟ್ಟಿಲ್ಲ.