ಕಿಚ್ಚ ಸುದೀಪ್ ದಬಾಂಗ್ -3 ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ಜೊತೆ ಫೈಟ್ ಮಾಡುತ್ತಿರುವ ಸುದೀಪ್ ಫೈಟನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. 

ದಬಾಂಗ್-3 ಯಿಂದ ಹೊರಬಂದ್ರಾ? ಎಂದು ಯೋಚಿಸಬೇಡಿ. ಕಿಚ್ಚ ಬೆಂಗಳೂರಿಗೆ ಬಂದಿದ್ದು ಮುದ್ದು ಮಗಳು ಸಾನ್ವಿ ಬರ್ತಡೇಗಾಗಿ. ಇಂದು ಸಾನ್ವಿ ಹುಟ್ಟುಹಬ್ಬದ ಸಂಭ್ರಮ. ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ ಸುದೀಪ್. 

ಮಗಳ ಜೊತೆಗಿನ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡು ವಿಶ್ ಮಾಡಿದ್ದಾರೆ. 

 

‘ನನ್ನ ಏಂಜಲ್, ನನ್ನ ಖುಷಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಾನು ಬೇಬಿ ಯಾವಾಗಲೂ ಖುಷಿಯಾಗಿರು. ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ’ ಎಂದಿದ್ದಾರೆ.