ಕಿಚ್ಚ ಸುದೀಪ್ ಈಗ ಹೊಸ ದಾಖಲೆ ಮಾಡಿದ್ದಾರೆ. ಆದರೆ, ಇದು ಗಿನ್ನಿಸ್ ದಾಖಲೆ ಅಲ್ಲ. ಯಾವುದೇ ಟಾಸ್ಕ್ ಗೆದ್ದ ಅಚೀವ್ ಮೆಂಟೂ ಅಲ್ಲ. ಸಿನಿಮಾಗಳಲ್ಲಿ ಹೆಚ್ಚು ಡೈಲಾಗ್ ಹೊಡೆದಿದ್ದ ಸಾಧನೆನೂ ಅಲ್ಲ. ಲುಕ್ಕು ಹೇರ್ ಸ್ಟೈಲೂ. ಈ ವಿಚಾರಕ್ಕೆ ಸಂಬಂಧಿಸಿದ ಸಂಗತಿನೂ ಅಲ್ಲ. ಇದು ಜನರ ಪ್ರೀತಿ ಗಳಿಸಿದ ಅಚೀವ್ ಮೆಂಟ್.
ಕಿಚ್ಚ ಸುದೀಪ್ ಹೊಸ ದಾಖಲೆ ಮಾಡಿದ್ದಾರೆ. ಕನ್ನಡದ ಬೇರೆ ಯಾವುದೇ ನಟ ಮಾಡದ ಸಾಧನೆ ಇದು. ಕನ್ನಡದ ಮಟ್ಟಿಗೆ ಈ ಹಂತ ತಲುಪಿದ ಏಕೈಕ ನಟ ಕಿಚ್ಚ ಸುದೀಪ್.
ಕಿಚ್ಚ ಸುದೀಪ್ ಈಗ ಹೊಸ ದಾಖಲೆ ಮಾಡಿದ್ದಾರೆ. ಆದರೆ, ಇದು ಗಿನ್ನಿಸ್ ದಾಖಲೆ ಅಲ್ಲ. ಯಾವುದೇ ಟಾಸ್ಕ್ ಗೆದ್ದ ಅಚೀವ್ ಮೆಂಟೂ ಅಲ್ಲ. ಸಿನಿಮಾಗಳಲ್ಲಿ ಹೆಚ್ಚು ಡೈಲಾಗ್ ಹೊಡೆದಿದ್ದ ಸಾಧನೆನೂ ಅಲ್ಲ. ಲುಕ್ಕು ಹೇರ್ ಸ್ಟೈಲೂ. ಈ ವಿಚಾರಕ್ಕೆ ಸಂಬಂಧಿಸಿದ ಸಂಗತಿನೂ ಅಲ್ಲ. ಇದು ಜನರ ಪ್ರೀತಿ ಗಳಿಸಿದ ಅಚೀವ್ ಮೆಂಟ್.
ಹಿಂಬಾಲಕರ ಲೆಕ್ಕ ಈಗ 5 ಲಕ್ಷ ದಾಟ್ತಿದೆ
ಮುರಾರಿ ಫಾಲೋವರ್ಸ್ ಹೆಚ್ಚಿದ್ದಾರೆ. ಸಾವಿರವಲ್ಲ. 10 ಸಾವಿರವೂ ಅಲ್ಲ. ಅದು 5 ಲಕ್ಷ ದಾಟ್ತಿದೆ. ಫಾಲೋರ್ಸ್ ಅಂದ್ರೆ ಯಾರೂ. ಇದರಲ್ಲಿ ತಪ್ಪು ತಿಳಿಯೋ ಪ್ರಶ್ನೆನೇ ಇಲ್ಲ. ಟ್ವಿಟರ್ ಜಗತ್ತಿನಲ್ಲಿರೊರಿಗೆ ಇದು ಬೇಗ ಅರ್ಥ ಆಗುತ್ತದೆ. ಸುದೀಪ್ ರನ್ನ ಇಷ್ಟಪಟ್ಟು ಅವರ ಅಕೌಂಟಿಗೆ ಹೋಗಿ ಫಾಲೋವಿಂಗ್ ಅಂತ ಹೇಳೋರೆ ಫಾಲೋವರ್ಸ್ .
ಸುದೀಪ್ ಫಾಲೋ ಮಾಡ್ತಿರೋ ಸಂಖ್ಯೆ ತೀರಾ ಕಡಿಮೆ. ಅದು ಸೆಲೆಕ್ಟೆಡ್ ಅನಿಸುತ್ತದೆ. ಆ ಲೆಕ್ಕವನ್ನ ನೋಡಿದರೆ. ಕೇವಲ 27 ಜನರನ್ನ ಸುದೀಪ್ ಫಾಲೋ ಮಾಡ್ತಿರೋದು. ಅವರಲ್ಲಿ ಜನ ಸಾಮಾನ್ಯರೂ ಇದ್ದಾರೆ. ದೊಡ್ಡ ಡೈರೆಕ್ಟರೂ ಇದ್ದಾರೆ. ಜೀವದ ಗೆಳೆಯರೂ ಇದ್ದಾರೆ.
ಪತ್ನಿ ಪ್ರಿಯಾರನ್ನ ಫಾಲೋ ಮಾಡ್ತಾರೆ ಸುದೀಪ್,ಕುಚ್ಚುಕ್ಕು ಗೆಳೆಯ ದರ್ಶನ್ ಇದ್ದಾರೆ ಲಿಸ್ಟ್ ನಲ್ಲಿ,ಶಾರುಕ- ಸಲ್ಮಾನ್ ರನ್ನ ಫಾಲೋ ಮಾಡ್ತಿದ್ದಾರೆ ಕಿಚ್ಚ.ರಮ್ಯ ಮತ್ತು ರಕ್ಷಿತ್ ಶೆಟ್ಟಿ ಕೂಡ ಇದ್ದಾರೆ ಲಿಸ್ಟ್ ನಲ್ಲಿ
ಸುದೀಪ್ ಫಾಲೋ ಮಾಡೋರ ಲಿಸ್ಟ್ ನಲ್ಲಿ ಇನ್ನೂ ಹಲವರಿದ್ದಾರೆ. ಬಾಲಿವುಡ್ ನ ಒಂದು ಕಾಲದ ಸ್ಟಾರ್ ರಿಷಿ ಕಪೂರ್ ಇದ್ದಾರೆ. ಡೈರೆಕ್ಟರ್ ರಾಜ ಮೌಳಿ,ಹೆಬ್ಬುಲಿ ಡೈರೆಕ್ಟರ್ ಕೃಷ್ಣ,ರಾಮ್ ಗೋಪಾಲ್ ವರ್ಮಾ,ನಟ ರಿತೇಷ್ ದೇಶಮುಖ್,ವಿವೇಕ್ ಓಬೆರಾಯ್. ಹೀಗೆ ತಮಗೆ ಇಷ್ಟವಾಗೋರನ್ನ ಟ್ವಿಟರ್ನಲ್ಲಿ ಸುದೀಪ್ ಫಾಲೋ ಮಾಡ್ತಿದ್ದಾರೆ. ಆದರೆ, ಇಲ್ಲೂ ತಮ್ಮ ಅಭಿಮಾನಿಗಳನ್ನ ಮರೆತಿಲ್ಲ ಸುದೀಪ್. ಅವರು ಹುಟ್ಟಿ ಹಾಕಿರೋ ಅಭಿಮಾನದ ಸಂಘಗಳ ಫಾಲೋ ಮಾಡಿದ್ದಾರೆ ಕಿಚ್ಚ.
ಅಭಿಮಾನಿಗಳನ್ನು ಫಾಲೋ ಮಾಡ್ತಿದ್ದಾರೆ,ಧನ್ಯವಾದ ತಿಳಿಸ್ತಾರೆ
ಸುದೀಪ್ ತಮ್ಮ ಅಭಿಮಾನಿಗಳನ್ನ ಫಾಲೋ ಮಾಡ್ತಾರೆ. ಟ್ವಿಟರ್ ನಲ್ಲಿ ಸಂಪರ್ಕಕ್ಕೆ ಬರೋ ಎಲ್ಲರಿಗೂ ಪ್ರತಿಕ್ರಿಯೆ ಕೊಡ್ತಾರೆ. ಯಾರೇ ಆಗಲಿ. ಇನ್ಯಾರೇ ಇರಲಿ. ಅವರ ಸಣ್ಣ ಸಣ್ಣ ಖುಷಿಗೂ ಸುದೀಪ್ ರಿಯಾಕ್ಟ್ ಮಾಡ್ತಾರೆ. ತಮ್ಮನ್ನ ಫಾಲೋ ಮಾಡ್ತಿರೋ 5 ಲಕ್ಷ ಜನರಿಗೂ ಧನ್ಯವಾದ ತಿಳಿಸಿದ್ದಾರೆ ಸುದೀಪ್.
ಸುದೀಪ್ ರನ್ನ ಫಾಲೋ ಮಾಡಫೋರ ಸಂಖ್ಯೆ ಇನ್ನೂ ಹೆಚ್ಚಾಗುತ್ತಲೇ ಹೋಗ್ತಿದೆ. 5 ಲಕ್ಷ ದಾಟೊ ಸೂಚನೆನೂ ಸಿಗ್ತಾಯಿದೆ. ಅಷ್ಟು ಫಾಲೋವರ್ಸ್ ಹೊಂದಿದ ಕಿಚ್ಚ, ಟ್ವಿಟರ್ ಮೂಲಕ ನಿರಂತರ ಸಂಪರ್ಕದಲ್ಲಿರುತ್ತಾರೆ. ಜನರ ಪ್ರೀತಿಗೂ ಪಾತ್ರವಾಗುತ್ತಿದ್ದಾರೆ.ಗುಡ್ ಲಕ್ ಸುದೀಪ್.
ವರದಿ: ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಸುವರ್ಣ ನ್ಯೂಸ್
