ಕನ್ನಡ ಚಿತ್ರರಂಗದತ್ತ ಒಮ್ಮೆ ಭಾರತವೇ ತಿರುಗಿ ನೋಡುವ ಹಾಗೆ ಮಾಡಿದ ಕೆಜಿಎಫ್ ವಿಲನ್ ಜಾನ್ ಕೊಕೇನ್ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಪೂಜಾ 2 ವರ್ಷಗಳಿಂದ ಪ್ರೀತಿಸುತ್ತಿದ್ದು, ಅಧಿಕೃತವಾಗಿ ಕೇರಳದ ವಿಶು ಹಬ್ಬದಂದು ದೇವಾಲಯದಲ್ಲಿ ಸರಳವಾಗಿ ಹಸೆಮಣೆ ಏರಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಯುವರತ್ನ’ ಚಿತ್ರದ ನಯಕಿ!

ಜಾನ್‌ ಕೊಕೇನ್ ಕೆಜಿಎಫ್ ಚಿತ್ರದಲ್ಲಿ ಮಾತ್ರವಲ್ಲದೆ ಶೌರ್ಯ, ಪೃಥ್ವಿ , ಅಣ್ಣಬಾಂಡ್ ಹಾಗೂ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಪೂಜ ರಾಮಚಂದ್ರನ್ ಮೂಲತಃ ಬೆಂಗಳೂರಿನವರು ಮಾಡಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಪ್ರಖ್ಯಾತ ಹೊಂದಿದ್ದು ತೆಲುಗು ಬಿಗ್‌ಬಾಸ್ ಸೀಸನ್ 2 ರಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದರು. ಕೆಲ ವರದಿ ಪ್ರಕಾರ ಜಾನ್ ಹಾಗೂ ಪೂಜಾ ಇಬ್ಬರಿಗೂ ಇದು ಎರಡನೇ ಮದುವೆ ಎನ್ನಲಾಗಿದೆ.