ಜನ ಗಣ ಮನ’ ಎನ್ನುವುದು ಆ ಚಿತ್ರದ ಹೆಸರು. ಈ ಚಿತ್ರದಲ್ಲಿ ಯಶ್ ಅಭಿನಯಿಸುತ್ತಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ.

ಜನ ಗಣ ಮನ..ಪುರಿ ಜಗನ್ನಾಥ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್

ಸದ್ಯಕ್ಕೆ ಇದು ಎಷ್ಟರ ಮಟ್ಟಿಗೆ ಅಧಿಕೃತ ಎನ್ನುವ ಬಗ್ಗೆ ನಿರ್ದೇಶಕ ಪೂರಿ ಜಗನ್ನಾಥ್ ಅವರಾಗಲಿ, ನಟ ಯಶ್ ಅವರಾಗಲಿ ಎಲ್ಲೂ ಮಾತನಾಡಿಲ್ಲ. ಸೋಷಲ್ ಮೀಡಿಯಾದಲ್ಲೂ ಹೇಳಿಕೊಂಡಿಲ್ಲ. ಪ್ರತಿಕ್ರಿಯೆ ನೀಡುವುದಕ್ಕೂ ಸಿದ್ಧರಿಲ್ಲ. ಆದರೆ ಈ ಚಿತ್ರಕ್ಕೆ ಸಂಬಂಧಿಸಿದಂತೆಯೇ ಪೂರಿ ಜಗನ್ನಾಥ್ ಹಾಗೂ ಯಶ್ ಬೆಂಗಳೂರಿನಲ್ಲೇ ಒಮ್ಮೆ ಮುಖಾಮುಖಿ ಭೇಟಿ ಆಗಿದ್ದಾರೆ. ಆ ಚಿತ್ರಕ್ಕೆ ಸಂಬಂಧಿಸಿದಂತೆಯೇ ಒಂದು ಹಂತದ ಮಾತುಕತೆ ನಡೆಸಿರುವ ಬಗ್ಗೆಯೂ ಮಾಹಿತಿಯಿದೆ. ಸದ್ಯಕ್ಕೆ ಟಾಲಿವುಡ್‌ನಲ್ಲೀಗ ಇದೇ ದೊಡ್ಡ ಸುದ್ದಿ. ಈ ಮುಂಚೆ ಈ ಚಿತ್ರಕ್ಕೆ ಮಹೇಶ್ ಬಾಬು ಅವರ ಹೆಸರು ಕೂಡ ಕೇಳಿ ಬಂದಿತ್ತು.

ವೈರಲ್ ಆಯ್ತು ‘ಅಧೀರ’ ಫಸ್ಟ್ ಲುಕ್; ಬಿ ಟೌನ್‌ನಲ್ಲಿ ಸಂಜುಬಾಬಾಗೆ ಜೈಕಾರ

ಇದೀಗ ಅವರ ಬದಲಿಗೆ ಯಶ್ ಹೆಸರು ಚಾಲ್ತಿಗೆ ಬಂದಿದೆ. ಪೂರಿ ಜಗನ್ನಾಥ್ ಮತ್ತು ಯಶ್ ಕಾಂಬಿನೇಷನ್ ಒಂದಾಗುವ ಬಗ್ಗೆ ಈ ತನಕ ಅಧಿಕೃತತೆ ಇಲ್ಲದಿರಬಹುದು. ಆದರೆ ಈ ಜೋಡಿ ಒಂದಾಗುವ ಸಾಧ್ಯತೆಗಳು ಹೆಚ್ಚಿವೆ ಎನ್ನುವುದಂತೂ ಸತ್ಯ. ಕೆಜಿಎಫ್ ಚಿತ್ರದೊಂದಿಗೆ ನಟ ಯಶ್ ಈಗ ಹಿಂದಿಯೂ ಸೇರಿ ಸೌತ್ ಇಂಡಿಯಾಕ್ಕೆ ಪರಿಚಯವಾದ ನಟ. ಕನ್ನಡದಂತೆಯೇ ಈಗ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಅವರ ಸಿನಿಮಾಗಳಿಗೆ ಮಾರುಕಟ್ಟೆ ಸೃಷ್ಟಿ ಆಗುತ್ತಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು ಪೂರಿ ಜಗನ್ನಾಥ್, ಯಶ್ ಕಾಂಬಿನೇಷನ್ ಮೂಲಕ ಬಹುಭಾಷೆಗಳಲ್ಲಿ ‘ಜನ ಗಣ ಮನ’ಸಿನಿಮಾ ಮಾಡಲು ಹೊರಟಿದ್ದಾರೆಂಬ ಸುದ್ದಿ ಹರಡಿದೆ.