ಬೆಂಗಳೂರು[ಫೆ.07] ಕೆಜೆಎಫ್ 2 ನಲ್ಲಿ ಬಾಲಿವುಡ್‌ನ ಹಿರಿಯ ನಟರೊಬ್ಬರು ಕಾಣಿಸಿಕೊಳ್ಳಲಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿ ಯಶಸ್ವಿಯಾಗಿದ್ದ ಕೆಜೆಎಫ್‌ನ ಎರಡನೆ ಭಾಗ ಹೇಗಿರಲಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ.

21 ವರ್ಷಗಳ ನಂತರ ಸಂಜಯ್ ದತ್ ದಕ್ಷಿಣ ಭಾರತದ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಇದಕ್ಕೂ ಮೊದಲು ಸಂಜಯ್ ದತ್ ತೆಲುಗಿನ ಚಂದ್ರಲೇಖಾದಲ್ಲಿ ಅಭಿನಯಿಸಿದ್ದರು. ನಾಗಾರ್ಜುನ, ರಮ್ಯಾ ಕೃಷ್ಣ ಮತ್ತು ಇಶಾ ಕೊಪ್ಪಿಕರ್ ಪ್ರಮುಖ ಭೂಮಿಕೆಯಲ್ಲಿದ್ದ ಚಿತ್ರ ಇದಾಗಿತ್ತು.

ಅಮೆಜಾನ್ ಪ್ರೈಮ್‌ನಲ್ಲಿ ಹೈ ಬಜೆಟ್ ‘ಕೆಜಿಎಫ್’ ರಿಲೀಸ್ !

ಪ್ರಶಾಂತ್ ನೀಲ್ ಅವರೆ ಕೆಜಿಎಫ್ 2 ನಿರ್ದೇಶನ ಮಾಡಲಿದ್ದಾರೆ. ಯಶ್ ಅಭಿನಯದ ಕೆಜಿಎಫ್ ಕೋಲಾರದ ಚಿನ್ನದ ಗಣಿಯ  ಸುತ್ತಲಿನ ಕತೆ ಆಧರಿತವಾಗಿದ್ದು ಅಪಾರ ಜನ ಮನ್ನಣೆಯೊಂದಿಗೆ ಸಾಕಷ್ಟು ಕಲೆಕ್ಷನ್ ಮಾಡಿತ್ತು.