ಅಜಯ್‌ ರಾವ್‌ ಹೊಸದೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ರೊಮ್ಯಾಂಟಿಕ್‌ ಹಾಗೂ ಕಾಮಿಡಿ ಜಾನರ್‌ನ ಈ ಸಿನಿಮಾವನ್ನು ಟಿ.ಆರ್‌. ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ‘ಕೆಜಿಎಫ್‌’ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ತಿಮ್ಮೇಗೌಡ.

ನಾಯಕಿ ಸೇರಿದಂತೆ ಪೋಷಕ ಕಲಾವಿದರ ಆಯ್ಕೆಯಲ್ಲಿ ಬ್ಯುಸಿ ಆಗಿರುವ ಚಿತ್ರ ತಂಡ, ಮೇ ತಿಂಗಳ ಎರಡನೇ ವಾರದಿಂದ ಚಿತ್ರೀಕರಣ ಶುರು ಮಾಡುತ್ತಿದೆ. ಕನ್ನಡ ಚಿತ್ರೋದ್ಯಮದಲ್ಲಿ ಅಜಯ ರಾವ್‌ ಅಂದ್ರೆ ರೊಮ್ಯಾಂಟಿಕ್‌, ಆ್ಯಕ್ಷನ್‌ ಹಾಗೂ ಕಾಮಿಡಿ ಚಿತ್ರಗಳಲ್ಲೂ ಹೆಸರು ಮಾಡಿದವರು. ವಿಶೇಷವಾಗಿ ಅವರಿಗೆ ಜನಪ್ರಿಯತೆ ಸಿಕ್ಕಿದ್ದು ರೊಮ್ಯಾಂಟಿಕ್‌ ಸಿನಿಮಾಗಳ ಮೂಲಕವೇ. ಅದಕ್ಕೆ ತಕ್ಕಂತೆಯೇ ಅಜಯ್‌ ಅವರನ್ನು ತಮ್ಮ ಚಿತ್ರದಲ್ಲಿ ರೊಮ್ಯಾಂಟಿಕ್‌ ಹೀರೋ ಆಗಿಯೇ ತೋರಿಸಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ನಿರ್ದೇಶಕ ತಿಮ್ಮೇಗೌಡ.

ನಿರ್ದೇಶಕನಾಗಿ ತಿಮ್ಮೇಗೌಡರಿಗೆ ಇದು ಮೊದಲ ಸಿನಿಮಾ. ಸುಮಾರು ಹತ್ತು ವರ್ಷಗಳ ಕಾಲ ಚಿತ್ರೋದ್ಯಮದಲ್ಲಿ ದುಡಿದ ಅನುಭವ ಇದೆ. ತಮ್ಮದೇ ಸಿನಿಮಾ ಶುರು ಮಾಡಿದ್ದರಿಂದ ಅವರು ‘ಕೆಜಿಎಫ್‌ ಚಾಪ್ಟರ್‌ 2’ನಲ್ಲಿ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ.