Asianet Suvarna News Asianet Suvarna News

ಚಿನ್ನು ಮತ್ತೆ ಸೀರಿಯಲ್'ಗೆ ಬಂದಿದ್ದೇಕೆ ಗೊತ್ತಾ?: ಲಕ್ಷೀ ಬಾರಮ್ಮಾ ಮಾಜಿ ನಾಯಕಿ ಕವಿತಾ ವ್ಯಥೆ

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಚಿನ್ನು ಅಲಿಯಾಸ್ ಕವಿತಾ ಕಿರುತೆರೆ ಬಿಟ್ಟು ಬೆಳ್ಳಿತೆರೆಗೆ ಜಾಸ್ತಿ ಸಮಯವಾಗಿಲ್ಲ. ಎರಡು ಸಿನಿಮಾದಲ್ಲಿ ನಟಿಸಿ ಆ ಸಿನಿಮಾಗಳು ಬಿಡುಗಡೆಯಾದ ನಂತರ ಮತ್ತೆ ಕಿರುತೆರೆಗೆ ವಾಪಸ್ ಬಂದಿದ್ದಾರೆ. ಝೀ ಕನ್ನಡದಲ್ಲಿ ನೂತನವಾಗಿ ಬರುತ್ತಿರುವ ‘ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ಕವಿತಾ ನಾಯಕಿ. ಈ ಚಿನ್ನು ಅಲಿಯಾಸ್ ಕವಿತಾ ಧಾರಾವಾಹಿ ಬಿಟ್ಟು ಸಿನಿಮಾಗೆ ಹೋಗಿದ್ದೇಕೆ? ಮತ್ತೆ ಮರಳಿ ಧಾರಾವಾಹಿಗೆ ಬಂದಿದ್ದೇಕೆ? 

Kavita of lakshmi baramma again started her serial journey

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಚಿನ್ನು ಅಲಿಯಾಸ್ ಕವಿತಾ ಕಿರುತೆರೆ ಬಿಟ್ಟು ಬೆಳ್ಳಿತೆರೆಗೆ ಜಾಸ್ತಿ ಸಮಯವಾಗಿಲ್ಲ. ಎರಡು ಸಿನಿಮಾದಲ್ಲಿ ನಟಿಸಿ ಆ ಸಿನಿಮಾಗಳು ಬಿಡುಗಡೆಯಾದ ನಂತರ ಮತ್ತೆ ಕಿರುತೆರೆಗೆ ವಾಪಸ್ ಬಂದಿದ್ದಾರೆ. ಝೀ ಕನ್ನಡದಲ್ಲಿ ನೂತನವಾಗಿ ಬರುತ್ತಿರುವ ‘ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ಕವಿತಾ ನಾಯಕಿ. ಈ ಚಿನ್ನು ಅಲಿಯಾಸ್ ಕವಿತಾ ಧಾರಾವಾಹಿ ಬಿಟ್ಟು ಸಿನಿಮಾಗೆ ಹೋಗಿದ್ದೇಕೆ? ಮತ್ತೆ ಮರಳಿ ಧಾರಾವಾಹಿಗೆ ಬಂದಿದ್ದೇಕೆ? 

1. ಮತ್ತೆ ಸೀರಿಯಲ್‌ಗೆ ಬಂದಿದ್ದೀರಿ? 

ಹೌದು. ‘ವಿದ್ಯಾ ವಿನಾಯಕ’ ಅನ್ನೋದು ಆ ಸೀರಿಯಲ್ ಹೆಸರು. ಇಲ್ಲಿ ನಾನೇ ವಿದ್ಯಾ. ಅಂದ್ರೆ, ಕಥಾ ನಾಯಕಿ. ಟೆಲಿಕಾಸ್ಟ್ ಡೇಟ್ ಫಿಕ್ಸ್ ಆಗಿಲ್ಲ. ಶೂಟಿಂಗ್ ಶುರುವಾಗಿದೆ. 

2. ಸಿನಿಮಾ ಸಹವಾಸ ಸಾಕಾಗಿ  ಹೋಯಿತಾ?

ಹಾಗೇನೂ ಇಲ್ಲ. ಸೀರಿಯಲ್‌ನಿಂದ ಹೊರ ಬಂದ ಸಂದರ್ಭದಲ್ಲಿ ಸಾಕಷ್ಟು ಸಿನಿಮಾ ಆರ್ ಬಂದವು. ಆಗ ಪಾತ್ರಗಳನ್ನು ನೋಡಿ ‘ಶ್ರೀನಿವಾಸ ಕಲ್ಯಾಣ’ ಹಾಗೂ ‘ಫಸ್ಟ್ ಲವ್’ ಚಿತ್ರಗಳನ್ನು ಒಪ್ಪಿಕೊಂಡಿದ್ದೆ. ಅವು ಏನಾದವು ಎನ್ನುವ ಬಗ್ಗೆ ಯಾವುದೇ ರೀತಿಯಲ್ಲೂ ನಾನು ಕಾಮೆಂಟ್ ಮಾಡೋದಿಲ್ಲ. ಹಾಗೆಂದ ಕಾರಣಕ್ಕೆ ನಾನು ಸೀರಿಯಲ್ ಕಡೆ ಬಂದಿಲ್ಲ. ಪಾತ್ರ ಚೆನ್ನಾಗಿತ್ತು, ಅಭಿನಯಿಸಲು ಒಪ್ಪಿಕೊಂಡೆ.

3. ಸಿನಿಮಾ, ಸೀರಿಯಲ್ ಒಂದೇ ಅಂತೀರಿ. ಹಾಗಾದ್ರೆ  ‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ನಿಂದ ಯಾಕೆ ಹೊರ ಬಂದ್ರಿ?

ಚಿನ್ನು ಪಾತ್ರದಲ್ಲಿ ನಾನು ಅಭಿನಯಿಸಿದ್ದು ಬರೋಬ್ಬರಿ ಎರಡೂವರೆ ವರ್ಷ. ಒಂದೇ ಪಾತ್ರದಲ್ಲಿ ವರ್ಷಗಟ್ಟಲೆ ಅಭಿನಯಿಸುವುದು ಯಾರಿಗೇ ಆದರೂ ಏಕತಾನತೆ ತರುತ್ತೆ. ಅದು ನನಗೆ ಹೊರತಾಗಿರಲಿಲ್ಲ. ಒಂದಷ್ಟು ಚೇಂಜಸ್ ಬೇಕು ಅಂತ ಎನಿಸಿತು. ಹಾಗಾಗಿ ನಾನೇ ಆ ಪಾತ್ರದಿಂದ ಹೊರ ಬಂದೆನೇ ಹೊರತು, ಸಿನಿಮಾ ಮಾಡುವ ಕಾರಣಕ್ಕಲ್ಲ. 

4. ಸೀರಿಯಲ್‌ನಿಂದ ನಿಮ್ಮನ್ನು ಕಿತ್ತು ಹಾಕಿದ್ರು ಅನ್ನೋ  ಮಾತುಗಳು ಆ ಸಮಯದಲ್ಲಿ ಕೇಳಿ ಬಂದಿದ್ದವು...

ಖಂಡಿತಾ ಇಲ್ಲ. ಎಲ್ಲಾ ಸುಳ್ಳು. ನನಗೆ ಆ ಸೀರಿಯಲ್ ಸೆಟ್ ಮನೆ ಇದ್ದ ಹಾಗಿತ್ತು. ವರ್ಷಗಟ್ಟಲೆ ಕಾಲ ಕಳೆದಿದ್ದೇ ಅಲ್ಲಿ. ಎಲ್ಲರೂ ಒಂದು ಕುಟುಂಬದವರಂತೆ ಇದ್ದೆವು. ಈಗಲೂ ನನಗೆ ಆ ದಿನಗಳು ಕಾಡುತ್ತವೆ. 

5. ಈಗ ಮತ್ತೆ ಸೀರಿಯಲ್ ಒಪ್ಪಿಕೊಂಡಿದ್ದಕ್ಕೆ ಪ್ರಮುಖ  ಕಾರಣ ಏನು?

ಮೊದಲ ಕಾರಣ ಅಂದ್ರೆ ಕ್ಯಾರೆಕ್ಟರ್. ಈ ಸೀರಿಯಲ್ ಕಥಾ ನಾಯಕಿ ವಿದ್ಯಾ ಪಾತ್ರ ತುಂಬಾ ಚೆನ್ನಾಗಿದೆ. ಆಕೆ ಒಳ್ಳೆಯ ಹುಡುಗಿ. ಹೆಸರಿಗೆ ತಕ್ಕಂತೆ ವಿದ್ಯಾವಂತೆ. ಆಕೆಯ ಬದುಕಲ್ಲಿ ಏನಾಗುತ್ತೆ ಅನ್ನೋದು ಒನ್‌ಲೈನ್ ಸ್ಟೋರಿ. ಸದ್ಯಕ್ಕೆ ನನಗೆ ಗೊತ್ತಾಗಿದ್ದು ಇಷ್ಟು ಮಾತ್ರ.

6. ಹೊಸ ಸೀರಿಯಲ್ ತಂಡ ಹೇಗಿದೆ? 

ನಟ ದಿಲೀಪ್ ರಾಜ್ ನಿರ್ಮಾಪಕರು. ಜಯಂತ್ ನಿರ್ದೇಶನ ಮಾಡುತ್ತಿದ್ದಾರೆ. ದಿಲೀಪ್ ನನ್ನ ಕೋ ಸ್ಟಾರ್. ಟೀಮ್ ಚೆನ್ನಾಗಿದೆ.  ಸ್ಟ್ ಲವ್ ಚಿತ್ರದ ಪ್ರಮೋಷನ್‌ಗೆ ನೀವು ಬಂದಿಲ್ಲ  ಅನ್ನೋ ಆರೋಪವಿತ್ತು.

7. ನೀವು ವಿಲನ್ ಆಗಿದ್ರಿ?

ಆ ಚಿತ್ರದ ರಿಲೀಸ್ ದಿನಾಂಕವೇ ಗೊತ್ತಿರಲಿಲ್ಲ. ರಿಲೀಸ್ ಡೇಟ್ ಫಿಕ್ಸ್ ಮಾಡಿದಾಗ ನಾನು ಊರಲ್ಲಿರಲಿಲ್ಲ. ಆಗ ಅವ ರೆಲ್ಲ ನನಗೆ ಫೋನ್ ಮಾಡಿದ್ದಾರೆ. ಫೋನ್ ನಾಟ್‌ರೀಚೆಬಲ್ ಅಂತ ಬಂದಿದೆ. ಅದನ್ನೇ ದೊಡ್ಡ ವಿವಾದ ಮಾಡಿದರು. ಊರಿಗೆ ಬಂದು ಟೀಮ್‌ನವರಿಗೆ ಕಾಲ್ ಮಾಡಿದ್ರೆ, ಅವ್ರೇ  ನನ್ನ ಫೋನ್ ರಿಸೀವ್ ಮಾಡಿಲ್ಲ.

-ದೇಶಾದ್ರಿ ಹೊಸ್ಮನೆ

Follow Us:
Download App:
  • android
  • ios