ಬಾಲಿವುಡ್ ಸೆಲಿಬ್ರಿಟಿಗಳಂತೂ ಸಾಲು ಸಾಲಾಗಿ ಹಸೆಮಣೆ ಏರುತ್ತಿದ್ದಾರೆ. ಇಷ್ಟು ದಿನ ಬ್ರೇಕ್ ಅಪ್‌ನಿಂದ ಹೊರ ಬರಲಾಗದೇ, ಅನೇಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕತ್ರಿನಾಗೆ ಮದುವೆ ಆಗೋ ಆಸೆಯಾಗಿದೆಯಂತೆ!
ಬಿ-ಟೌನ್ ಹಾಟ್ ಗರ್ಲ್ಸ್ ತಮ್ಮ ಬೆಸ್ಟ್ ಫ್ರೆಂಡ್‌ಗಳನ್ನು ಮದುವೆಯಾಗುತ್ತಿದ್ದಾರೆ. 2017ರಲ್ಲಿ ಕೊಹ್ಲಿ ವರಿಸಿದ ಅನುಷ್ಕಾ ಶರ್ಮಾನಿಂದ ಹಿಡಿದು ಪ್ರಿಯಾಂಕಾ ಚೋಪ್ರಾ, ಅಮೆರಿಕದ ನಿಕ್ ಅವರನ್ನು ಈ ವರ್ಷದ ಆದಿಯಲ್ಲಿ ಮದುವೆಯಾಗುವವರೆಗೆ ಹಲವರು ಹಸೆಮಣೆ ಏರಿದ್ದಾರೆ. ಇದನ್ನೆಲ್ಲ ಕಂಡ ಬಾಲಿವುಡ್ ವೈಲ್ಡ್ ಕ್ಯಾಟ್ ಮನಸ್ಸಲ್ಲಿ ಏನಾಟ ನಡೆಯುತ್ತಿದೆ ಗೊತ್ತಾ?
'ಎಲ್ಲರೂ ಮದುವೆಯಾಗುತ್ತಿದ್ದಾರೆ. ತಡಿರೀ ನನ್ನನ್ನು ಹಿಂದಿಕ್ಕಿ ಹೋಗಬೇಡಿ...' ಎಂದು ಕಿರುತೆರೆಯ ಟಾಕ್ ಶೋವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶೀಲಾ ಕೀ ಜವಾನಿ ಖ್ಯಾತಿಯ ಕ್ಯಾಟ್ ಅವಲತ್ತುಕೊಂಡಿದ್ದಾರೆ.
2016ರಲ್ಲಿ ಚಾಕೋಲೆಟ್ ಬಾಯ್ ರಣಬೀರ್ ಕಪೂರ್ ಜೊತೆ ಬ್ರೇಕ್ ಅಪ್ ಆದ ನಂತರ ಕತ್ರೀನಾ ತುಸು ಅಪ್‌ಸೆಟ್ ಆಗಿದ್ದರು. ಒಂಟಿತನವನ್ನು ಹೋಗಲಾಡಿಸಿಕೊಳ್ಳಲು ಕೈ ತುಂಬಾ ಸಾಕಷ್ಟು ಸಿನಿಮಾಗಳನ್ನು ಇಟ್ಕೊಂಡಿದ್ದರು. ಅಲ್ಲದೇ ಪೋಷಕರೊಂದಿಗೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಆದರೆ, ಅತ್ತ ರಣ್‌ಬೀರ್ ಮಾತ್ರ ಆಲಿಯಾ ಭಟ್ ಜತೆ ಸದ್ದಿಲ್ಲದೇ ಡೇಟಿಂಗ್ ಆರಂಭಿಸಿದ್ದರು.
ಸದ್ಯಕ್ಕೆ 'ಅಲಿ ಅಬ್ಬಾಸ್ ಜಾಫರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಬ್ಯುಸಿಯಾಗಿದ್ದಾರೆ. ಯಾರೊಂದಿಗೆ, ಯಾವಾಗ ಮದುವೆ ಆಗುತ್ತಾರೋ ಕಾದು ನೋಡಬೇಕು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 12, 2019, 3:58 PM IST