Asianet Suvarna News Asianet Suvarna News

‘ಜೀರೊ ಸೈಜ್’ ರಹಸ್ಯ ಬಿಚ್ಚಿಟ್ಟ ಕರೀನಾ ಕಪೂರ್!

ಮದುವೆಯಾದ್ಮೇಲೆ, ಅದರಲ್ಲಿಯೂ ಮಗುವಾದ ಮೇಲಂತೂ ಫಿಸಿಕ್ ಹಾಳು ಮಾಡಿಕೊಳ್ಳುವ ಎಲ್ಲ ಹೆಣ್ಣು ಮಕ್ಕಳಿಗೆ ಕರೀನಾ ಕಪೂರ್ ಮಾದರಿ. ಮಗುವಿನ ತಾಯಿಯಾದರೂ ಝೀರೋ ಸೈಜ್ ಮೆಂಟೈನ್ ಮಾಡಿದ ಈ ಬಾಲಿವುಡ್ ನಟಿ ಕಡೆಗೂ ಫಿಟ್‌ನೆಸ್ ರಹಸ್ಯ ಬಿಚ್ಚಿಟ್ಟಿದ್ದಾರೆ. 

kareena kapoor revels zero size secret
Author
Bengaluru, First Published Oct 15, 2018, 5:36 PM IST
  • Facebook
  • Twitter
  • Whatsapp

38 ವರ್ಷದ ಕರೀನಾಗೆ 2 ವರ್ಷದ ಮಗನಿದ್ದರೂ, ಫಿಟ್‌ನೆಸ್ ಮಾತ್ರ ಪರ್ಫೆಕ್ಟ್ ಆಗಿ ಮೆಂಟೇನ್ ಮಾಡಿದ್ದಾರೆ. ಒಂದಿನಿತೂ ಫಿಸಿಕ್ ಬಗ್ಗೆ ಇಗ್ನೋರ್ ಮಾಡದೇ  ಕೇರ್ ತೆಗೆದುಕೊಳ್ಳುತ್ತಿದ್ದಾರೆ. ಬಿಕಿನಿ ತೊಟ್ಟರೂ ಬಳಕುವ ಬಳ್ಳಿಯಂತೆ ಕಾಣುವ ಈ ಬೇಬೂ ಫಿಟ್ ಆಗಿರಲು ಮಾಡುವುದಿಷ್ಟೆ.  

ಜೀಮ್‌ನಲ್ಲಿ ದಿನವೂ 55 ನಿಮಿಷ ಮಾತ್ರ ಕಳೆಯುವ ಕರೀನಾ, ಮಗ ತೈಮೂರ್ ಹುಟ್ಟಿದ ಮೇಲೂ 12 ಕೆ.ಜಿ ಕಡಿಮೆಯಾಗಿದ್ದಾಳೆ. ಕೇವಲ ಜಿಮ್ ಮಾತ್ರವಲ್ಲ, ನಿಯಮಿತವಾಗಿ ಪವರ್ ಯೋಗ ಮಾಡುವ ಕರೀನಾ, ತಿನ್ನೋ ವಿಷ್ಯದಲ್ಲಿಯೂ ಸಿಕ್ಕಾಪಟ್ಟೆ ಕಟ್ಟುನಿಟ್ಟು.

ಹಿಂದೆಯೊಮ್ಮೆ ತೂಕ ಹೆಚ್ಚಿಸಿಕೊಂಡ ಕರೀನಾ, ಸಿನಿಮಾ ಅವಕಾಶಗಳನ್ನು ಕಳೆದುಕೊಂಡಿದ್ದರು. ಆಗಿನಿಂದಲೇ ತಮ್ಮ ಝೀರೋ ಸೈಜ್ ಕಡೆ ಗಮನ ಹರಿಸಿದ್ದು, ನಂತರ ಬಿಕಿನಿ ತೊಟ್ಟು ಎಲ್ಲರನ್ನೂ ಅಚ್ಚರಿಗೊಳಿಸಿದ್ದಳು. ಅದೇ ಮಂತ್ರವನ್ನು ಇಂದಿಗೂ ತಪ್ಪದೇ ಪಾಲಿಸುತ್ತಿದ್ದಾರೆ.

ಮಿಸೆಸ್ ಸೈಫ್ ಎಷ್ಟೇ ಬ್ಯುಸಿ ಇದ್ದರೂ, ಜಿಮ್ ಟ್ರೈನರ್ ಸಲಹೆಯಂತೆ ಹಾಲು-ಗುಲ್ಕಂದ್ ಟೈಮ್ ಟೈಮಿಗೆ ಸೇವಿಸುತ್ತಾರಂತೆ. ಆಗಾಗ ನೀರಿಗೆ ಕೇಸರಿ ಹಾಕ್ಕೊಂಡು ಕುಡಿಯುತ್ತಿರುತ್ತಾರಂತೆ. ಅಪ್ಪಿತಪ್ಪಿಯೂ ನಾಲಿಗೆಗೆ ರುಚಿ ಎನಿಸೋ ಫುಡ್ ತಿನ್ನೇದೇ ಇಲ್ವಂತೆ.

ಬೇಬೋ ರೀತಿ ಫಿಸಿಕ್ ಬೇಕೆಂದರೆ ಈಗಿನಿಂದಲೇ ಶ್ರಮ ಹಾಕಿ...

Follow Us:
Download App:
  • android
  • ios