ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಡೇಟಿಂಗ್ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕರೀನಾ ಕಪೂರ್

ಮುಂಬೈ(ಸೆ.27): ಕಾಲ ಬದಲಾದಂತೆ ಸಂಬಂಧಗಳಲ್ಲಿ ಬಿರುಕು ಮೂಡಿದರೆ ಪ್ರತಿಕ್ರಿಯೆಗಳಲ್ಲಿ ಹೇಗೆ ವ್ಯತ್ಯಾಸ ಕಾಣುತ್ತೆ ಎಂಬುವುದಕ್ಕೆ ಬಾಲಿವುಡ್ ನಟಿ ಕರಿನಾ ಕಪೂರ್ ತಾಜಾ ಉದಾಹರಣೆಯಂತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2013ರಲ್ಲಿ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಡೇಟಿಂಗ್ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕರೀನಾ ಕಪೂರ್, ಕತ್ರೀನಾ ನನ್ನ ಅತ್ತಿಗೆ ಎಂದು ಹೇಳಿದ್ದರು. ಆದರೆ, ಇದೀಗ ಕಾಲ ಬದಲಾಗಿದೆ. ಕತ್ರೀನಾ ಮತ್ತು ರಣಬೀರ್ ನಡುವಿನ ಸಂಬಂಧ ಹಳಸಿದೆ. 10 ತಿಂಗಳಿಂದ ದೂರವೇ ಉಳಿದಿರುವ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಗಾಢ ಮೌನಕ್ಕೆ ಶರಣಾಗಿದ್ದಾರೆ. ಇದರ ಮಧ್ಯೆ ಪತ್ರಕರ್ತರು ಅವರಿಬ್ಬರ ಸಂಬಂಧ ಬಗ್ಗೆ ಕರೀನಾ ಮುಂದಿಟ್ಟ ಪ್ರಶ್ನೆಗೆ ಬಂದಿರುವ ತ್ತರ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.

ಒಂದೇ ಎಲಿವೇಟರ್`ನಲ್ಲಿ ಕತ್ರೀನಾ ಮತ್ತು ರಣಬೀರ್ ಜೊತೆ ನೀವು ಸಿಲುಕಿಕೊಂಡರೆ ಏನು ಮಾಡುತ್ತೀರಾ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕರೀನಾ, ಓ ದೇವರೇ.. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ಧಾರೆ.