Asianet Suvarna News Asianet Suvarna News

ಮದುವೆಯಾದ ಮೇಲೆ ಬಾಲ್ಯದ ಕ್ರಶ್ ಬಗ್ಗೆ ಬಾಯ್ಬಿಟ್ಟ ಕರೀನಾ ಕಪೂರ್!

ಬಾಲ್ಯದ ಕ್ರಶ್ ಬಗ್ಗೆ ಮೊದಲ ಬಾರಿಗೆ ಬಾಯ್ಬಿಟ್ಟ ಕರೀನಾ ಕಪೂರ್ |  ಕರೀನಾ ಹೇಳಿರುವ ಹೆಸರು ಕೇಳಿ ಅಭಿಮಾನಿಗಳು ಶಾಕ್ | ಕರೀನಾ ಮಾತುಗಳನ್ನು ಕೇಳಿ Im speechless ಎಂದ ಆಶಿಕಿ ನಟ 

Kareena Kapoor Khan calls Rahul Roy her first crush
Author
Bengaluru, First Published Aug 30, 2019, 3:31 PM IST
  • Facebook
  • Twitter
  • Whatsapp

’ಕ್ರಶ್’ ಅನ್ನುವ ಪದದ ಮಾಯೆಯೇ ಅಂತದ್ದು. ಪ್ರತಿಯೊಬ್ಬರೂ ಈ ಮಾಯೆಯ ಒಳಗೆ ಬೀಳುವವರೇ. ಜೀವನದ ಒಂದಲ್ಲಾ ಒಂದು ಒಂದು ಹಂತದಲ್ಲಿ  ಕ್ರಶ್ ನ್ನು ಅನುಭವಿಸಿರುತ್ತಾರೆ. ಜೀರೋ ಸೈಜ್ ನಟಿ ಕರೀನಾ ಕಪೂರ್ ತಮ್ಮ ಬಾಲ್ಯದ ಕ್ರಶ್ ಬಗ್ಗೆ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 

ಕರೀನಾ ಕಪೂರ್ ಗೆ ಬಾಲ್ಯದಲ್ಲಿ ಆಶಿಕಿ ನಟ ರಾಹುಲ್ ರಾಯ್ ಮೇಲೆ ಸಿಕ್ಕಾಪಟ್ಟೆ ಕ್ರಶ್ ಇತ್ತಂತೆ! ಈ ವಿಚಾರ ಬರೀ ಅಭಿಮಾನಿಗಳು ಮಾತ್ರವಲ್ಲ, ಸ್ವತಃ ರಾಹುಲ್ ರನ್ನು ಸ್ಟನ್ ಆಗುವಂತೆ ಮಾಡಿದೆ. 

ಇದಕ್ಕೆ ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್  "i'm Speechless' ಎಂದಿದ್ದಾರೆ.

 

’ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಕರೀನಾಗೆ ನಿಮ್ಮ ಕ್ರಶ್ ಬಗ್ಗೆ ಹೇಳಿ ಎಂದು ಕೇಳಲಾಗಿತ್ತು. ಆಗ ಕರೀನಾ ರಾಹುಲ್ ರಾಯ್ ಬಗ್ಗೆ ಹೇಳಿದ್ದಾರೆ. ಚಿಕ್ಕಂದಿನಿಂದಲೇ ರಾಹುಲ್ ಮೇಲೆ ಕ್ರಶ್ ಇತ್ತು. ಹಾಗಾಗಿಯೇ ಅವರ ಆಶಿಕಿ ಸಿನಿಮಾವನ್ನು 8 ಬಾರಿ ನೋಡಿದ್ದರಂತೆ! 

ಇದಕ್ಕೆ ಇನ್ಸ್ಟಾಗ್ರಾಮ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಕಷ್ಟು ಜನ ಮಹಿಳೆಯರು ನನಗೂ ಅವರ ಮೇಲೆ ಕ್ರಶ್ ಇತ್ತು ಎಂದಿದ್ದಾರೆ. ಇನ್ನು ಕೆಲವರು ನೀವಿಬ್ಬರೂ ಒಟ್ಟಿಗೆ ಯಾಕೆ ಸಿನಿಮಾ ಮಾಡಬಾರದು ಎಂದಿದ್ದಾರೆ. 

ಕೆಲವು ದಿನಗಳಿಂದ ಕರೀನಾ ನನ್ನ ಬಗ್ಗೆ ಹೇಳಿರುವುದನ್ನು ನ್ಯೂಸ್ ನಲ್ಲಿ ನೋಡಿದ್ದೇನೆ. ನನಗೇನು ಹೇಳಬೇಕು ಎಂದು ತೋಚುತ್ತಿಲ್ಲ. ಅವರ ಪ್ರಾಮಾಣಿಕ ಉತ್ತರವನ್ನು ನಾನು ಶ್ಲಾಘಿಸುತ್ತೇನೆ. ಕರೀನಾನಂತಹ ಪ್ರತಿಭಾನ್ವಿತ ನಟಿಯ ಜೊತೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ಆಕೆಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ. 

 

Follow Us:
Download App:
  • android
  • ios