ಬಾಲಿವುಡ್  ಬೇಬೋ ಕರೀನಾ ಕಪೂರ್,​ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಮುಂಬಯಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕರೀನಾಗೆ ಇವತ್ತು ಬೆಳಗ್ 7. 30 ಕ್ಕೆ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಅಂತ ಕಪೂರ್ ಕುಟುಂಬ ಹೇಳಿದೆ..

ಮುಂಬೈ(ಡಿ.20): ಬಾಲಿವುಡ್ ಬೇಬೊ ಕರೀನಾ ಕಪೂರ್ ತಾಯಿಯಾಗಿದ್ದಾರೆ. ಇಂದು ಬೆಳಿಗ್ಗೆ ಕರೀನಾ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಸೈಫ್ ಅಲಿ ಖಾನ್ ಅಧಿಕೃತ ಹೇಳಿಕೆ ನೀಡಿದ್ದಾರೆ.

ತಾನು ತಂದೆ ತಾಯಿಯಾದ ಖುಷಿಯಲ್ಲಿರುವ ಬಾಲಿವುಡ್ ದಂಪತಿ ಸೈಫ್ ಮತ್ತು ಕರೀನಾ ಕಪೂರ್ ಈ ಕುರಿತಾಗಿ ಹೇಳಿಕೆಯೊಂದನ್ನು ನೀಡಿದ್ದು, 'ನಾವಿಬ್ಬರೂ ನಿಮ್ಮೊಂದಿಗೆ ನಮ್ಮ ಮಗ ತೈಮುರ್ ಅಲಿ ಖಾನ್ ಪಟೌಡಿ ಜನಿಸಿರುವ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ಖುಷಿ ಪಡುತ್ತೇವೆ. ಕಳೆದ 9 ತಿಂಗಳಲ್ಲಿ ನಮಗೆ ಬೆಂಬಲ ನೀಡಿ, ಅರ್ಥ ಮಾಡಿಕೊಂಡ ಮಾಧ್ಯಮ, ಹಿತೈಷಿಗಳು ಹಾಗೂ ಅಭಿಮಾನಿಗಳೆಲ್ಲರಿಗೂ ಧನ್ಯವಾದಗಳು. ಎಲ್ಲರಿಗೂ ಕ್ರಿಸ್ ಮಸ್ ಮತ್ತು ಹೊಸ ಹಬ್ಬದ ಶುಭಾಷಯಗಳು. ನಿಮ್ಮ ಪ್ರೀತಿಯ ಸೈಫ್ ಮತ್ತು ಕರೀನಾ' ಎಂದು ಹೇಳಿದ್ದಾರೆ.

ಬಾಲಿವುಡ್'ನಲ್ಲಿ ಅಚ್ಚಳಿಯದಂತೆ ತನ್ನ ಛಾಪು ಮೂಡಿಸಿರುವ ಕರೀನಾ ಗರ್ಭಿಣಿಯಾಗಿದ್ದಾಗಲೂ ತನ್ನ ಕೆಲಸದಿಂದ ವಿರಾಮ ತೆಗೆದುಕೊಂಡಿರಲಿಲ್ಲ. ಒಂಭತ್ತನೇ ತಿಂಗಳಿನವರೆಗೆ ಲವ ಲವಿಕೆಯಿಂದ ತನ್ನ ಕೆಲಸದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇನ್ನು ಈ ಗಂಡು ಮಗು ಕರೀನಾ ಕಪೂರ್'ಗೆ ಮೊದಲ ಮಗುವಾಗಿದ್ದರೂ ಸೈಫ್'ಗೆ ಮೂರನೇ ಮಗು. ತನ್ನ ಮೊದಲ ಪತ್ನಿಯಿಂದ ಸಾರಾ ಹಾಗೂ ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿಗೆ ಈಗಾಗಲೇ ಸೈಫ್ ತಂದೆಯಾಗಿದ್ದಾರೆ.

Scroll to load tweet…