ಪ್ರದರ್ಶನ ನಿಲ್ಲಿಸಿದ ಕಪಾಲಿ‌: ಏಷ್ಯಾದಲ್ಲೇ ದೊಡ್ಡ ಚಿತ್ರಮಂದಿರವೆಂಬ ಖ್ಯಾತಿ

First Published 12, Oct 2017, 8:43 PM IST
Kapali theatre shut down
Highlights

ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾ 30 ಬಾರಿ ಪ್ರದರ್ಶನ ಕಂಡು ಅತೀ ಹೆಚ್ಚು ಬಾರಿ ಪ್ರದರ್ಶನ ಕಂಡಿತ್ತು. ಹುಲಿರಾಯ ಸಿನಿಮಾ ಅ.11 ರಂದು ರಾತ್ರಿ ಕೊನೆಯದಾಗಿ ಪ್ರದರ್ಶನಗೊಂಡ ಸಿನಿಮಾವಾಗಿದೆ.  

ಬೆಂಗಳೂರು(ಅ.12): ಏಷ್ಯಾದಲ್ಲಿಯೇ ದೊಡ್ಡ ಚಿತ್ರಮಂದಿರವೆಂಬ ಖ್ಯಾತಿ ಹೊಂದಿದ್ದ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿದ್ದ ಕಪಾಲಿ ಚಿತ್ರಮಂದಿರ ಇನ್ನು ಇತಿಹಾಸ ಮಾತ್ರ.

1465 ಆಸನಗಳೊಂದಿಗೆ ಏಷ್ಯಾದಲ್ಲೇ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ 'ಕಪಾಲಿ'ಯನ್ನು 1968ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರು ಉದ್ಘಾಟಿಸಿದ್ದರು. ಮಾತೆಯೆ ಮಹಾ ಮಂದಿರ ಎಂಬ ಕನ್ನಡ ಸಿನಿಮಾದಿಂದ ಪ್ರದರ್ಶನ ಆರಂಭವಾಗಿತ್ತು. ಡಾ. ರಾಜ್'ಕುಮಾರ್ ಅಭಿನಯದ ಮಣ್ಣಿನ ಮಗ ಈ ಚಿತ್ರಮಂದಿರದಲ್ಲಿ ಮೊದಲ ಶತದಿನೋತ್ಸವ ಆಚರಿಸಿತ್ತು.

ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾ 30 ಬಾರಿ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು. ಹುಲಿರಾಯ ಸಿನಿಮಾ ಅ.11 ರಂದು ರಾತ್ರಿ ಕೊನೆಯದಾಗಿ ಪ್ರದರ್ಶನಗೊಂಡ ಸಿನಿಮಾವಾಗಿದೆ.  ಈ ಪ್ರದೇಶದಲ್ಲಿ ಇನ್ನು ಕೆಲವು ತಿಂಗಳಲ್ಲಿ ಬೃಹತ್ ಸಂಕೀರ್ಣ ನಿರ್ಮಾಣಗೊಳ್ಳಲಿದೆ. 1983 ರ ಸೆ.12 ರಂದು ಈ ಚಿತ್ರಮಂದಿರದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿದ್ದ 7 ಅಂತಸ್ತಿನ  ಗಂಗಾರಾಮ್ ಕಟ್ಟಡ ಕುಸಿತಗೊಂಡು 123 ಮಂದಿ ಮೃತಪಟ್ಟಿದ್ದರು. ಆಗ ಸಿನಿಮಾ ವೀಕ್ಷಿಸಲು ಬಂದಿದ್ದ ಒಂದಿಬ್ಬರೂ ಕೂಡ ಮೃತಪಟ್ಟಿದ್ದರು.

loader