ಕನ್ನಡದ 'ಡಿವೈನ್ ಸ್ಟಾರ್' ಖ್ಯಾತಿ ನಟ ರಿಷಬ್ ಶೆಟ್ಟಿ ನಟನೆಯ ಹೊಸ ಟಾಲಿವುಡ್ ಸಿನಿಮಾ ಇದೀಗ ಘೋಷಣೆ ಆಗಿದೆ. ಟಾಲಿವುಡ್ ಸಿನಿಮಾ ಅಂದಾಕ್ಷಣ ಅದು ಕೇವಲ ತೆಲುಗು ಭಾಷೆಯಲ್ಲಿ ಇರೋದಿಲ್ಲ. ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ. ದಕ್ಷಿಣ ಭಾರತದ 4 ಭಾಷೆಗಳ ಜೊತೆಗೆ ಹಿಂದಿಯಲ್ಲೂ ಆಗೋದು ಪಕ್ಕಾ.

ಪ್ಯಾನ್ ಇಂಡಿಯಾ ಸ್ಟಾರ್, ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಕಾಂತಾರ ಪ್ರೀಕ್ವೆಲ್ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಜೊತೆಜೊತೆಗೇ 'ಜೈ ಹುನುಮಾನ್' ಹಾಗೂ 'ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಆದರೆ, ಇಷ್ಟಕ್ಕೇ ಅವರ ನಾಗಾಲೋಟ ನಿಂತಿಲ್ಲ. ಇದೀಗ ಮತ್ತೊಂದು ಹೊಸ ಸಿನಿಮಾ ಘೋಷಣೆ ಆಗಿದೆ. ಅದು ಕನ್ನಡದ ಸಿನಿಮಾ ಅಲ್ಲ, ಟಾಲಿವುಡ್ ಸಿನಿಮಾ. ಅಂದರೆ, ಅಪ್ಪಟ ತೆಲುಗು ಮೇಕಿಂಗ್!

ಹೌದು, ಕನ್ನಡದ 'ಡಿವೈನ್ ಸ್ಟಾರ್' ಖ್ಯಾತಿ ನಟ ರಿಷಬ್ ಶೆಟ್ಟಿ ನಟನೆಯ ಹೊಸ ಟಾಲಿವುಡ್ ಸಿನಿಮಾ ಇದೀಗ ಘೋಷಣೆ ಆಗಿದೆ. ಟಾಲಿವುಡ್ ಸಿನಿಮಾ ಅಂದಾಕ್ಷಣ ಅದು ಕೇವಲ ತೆಲುಗು ಭಾಷೆಯಲ್ಲಿ ಇರೋದಿಲ್ಲ. ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ. ದಕ್ಷಿಣ ಭಾರತದ 4 ಭಾಷೆಗಳ ಜೊತೆಗೆ ಹಿಂದಿಯಲ್ಲೂ ಆಗೋದು ಪಕ್ಕಾ. ಅಷ್ಟೇ ಅಲ್ಲ, ವಿದೇಶಗಳ ಬೇರೆ ಭಾಷೆಗಳಲ್ಲೂ ಆಗಬಹುದು. ಕಾದು ನೋಡಬೇಕು. ಅದಿರಲಿ, ಹಾಗಿದ್ದರೆ ರಿಷಬ್ ಶೆಟ್ಟಿ ನಟನೆಯಲ್ಲಿ ಮುಂಬರುವ ಸಿನಿಮಾ ಯಾವುದು?

ತೆಲುಗು ನಿರ್ಮಾಣ ಸಂಸ್ಥೆ 'ಸಿತಾರಾ ಎಂಟರ್‌ಟೈನ್‌ಮೆಂಟ್ ಅಧೀಕೃತವಾಗಿ ಐತಿಹಾಸಿಕ/ ಪೌರಾಣಿಕ ನಾಟಕದ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ ಎಂದು ಘೋಷಿಸಿದೆ. ಇದರ ಜೊತಗೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತನ್ನ ಘೋಷಣೆಗೆ ಸಾಕ್ಷಿ ಸಹ ನೀಡಿದೆ. ಜೊತೆಗೆ, 'ಎಲ್ಲಾ ಬಂಡಾಯಗಾರರೂ ಯುದ್ಧದಲ್ಲಿ ಹುಟ್ಟುವುದಿಲ್ಲ. ವಿಧಿ ಕೆಲವರನ್ನು ಆಯ್ಕೆ ಮಾಡುತ್ತದೆ. ಇದು ಬಂಡಾಯಗಾರನ ಕಥೆ' ಎಂದು ಪೋಸ್ಟರ್‌ಗೆ ಶೀರ್ಷಿಕೆ ನೀಡಲಾಗಿದೆ.

ರಿಷಬ್ ಶೆಟ್ಟಿ ನಟನೆಯಲ್ಲಿ ಮುಂಬರುವ ತೆಲುಗು ಮೇಕಿಂಗ್ ಚಿತ್ರವನ್ನು ಅಶ್ವಿನ್ ಗಂಗರಾಜು ನಿರ್ದೇಶಿಸುತ್ತಿದ್ದಾರೆ. ಪೋಸ್ಟರ್‌ ನೋಡಿ ಹೇಳುವುದಾದರೆ ಇದು 18ನೇ ಶತಮಾನದಲ್ಲಿ ನಡೆಯುವ ಐತಿಹಾಸಿಕ ಆಕ್ಷನ್ ನಾಟಕ ಎಂಬುದನ್ನು ಸೂಚಿಸುತ್ತದೆ. 18ನೇ ಶತಮಾನದ ಪ್ರಕ್ಷುಬ್ಧ ಬಂಗಾಳದ ಪ್ರಾಂತ್ಯದಲ್ಲಿ ಬಂಡಾಯಗಾರರ ಹೊರಹೊಮ್ಮುವಿಕೆಯ ಚಿತ್ರ ಇದಾಗಿರುತ್ತದೆ ಎನ್ನಲಾಗಿದೆ. ಈ ಸಿನಿಮಾದ ಬಗ್ಗೆ ಮಿಕ್ಕೆಲ್ಲಾ ಮಾಹಿತಿಗಳೂ ಸದ್ಯದಲ್ಲೇ ಹೊರಬೀಳಲಿವೆ ಎನ್ನಲಾಗಿದೆ. ಅಂದಹಾಗೆ, 'ಜೈ ಹನುಮಾನ್' ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದಾರೆ. ಇನ್ನು, 'ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರವನ್ನು ಸಂದೀಪ್ ಸಿಂಗ್ ನಿರ್ದೇಶನಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಹೇಳಬೇಕು ಎಂದರೆ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಂತಾರ ಭಾಗ-1 ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ, ಇನ್ನೂ 3 ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಇದು ನಿಜವಾಗಿಯೂ ಅಚ್ಚರಿಯೇ ಸರಿ! ಏಕೆಂದರೆ, ಕಾಂತಾರ ಪ್ರೀಕ್ವೆಲ್ ಚಿತ್ರವನ್ನು ಸ್ವತಃ ನಿರ್ದೇಶನವನ್ನೂ ಮಾಡುತ್ತಿರುವ ರಿಷಬ್ ಶೆಟ್ಟಿಯವರು ಮಿಕ್ಕ ಮೂರು ಚಿತ್ರಗಳಲ್ಲಿ ನಟರಾಗಿ ಮಾತ್ರ ಇದ್ದಾರೆ. ಆದರೆ ಮುಂಬರುವ ಕಾಂತಾರ ತೆರೆಗೆ ಬರುವ ಮೊದಲು ಪೋಸ್ಟ್ ಪ್ರೊಡಕ್ಷನ್, ಪ್ರಚಾರಕಾರ್ಯ ಸೇರಿದಂತೆ, ಸಾಕಷ್ಟು ಕೆಲಸಗಳಿವೆ. ಎಲ್ಲವನ್ನೂ ಬಿಟ್ಟೂಬಿಡದೇ ಮಾಡುತ್ತಿರುವ ರಿಷಬ್ ಶೆಟ್ಟಿ ನಿಜವಾಗಿಯೂ 'ಸೂಪರ್ ಮ್ಯಾನ್‌' ಎಂದಿದ್ದಾರೆ ಹಲವರು!