ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ಹೊಸ ನಟನ ಮೊದಲ ಚಿತ್ರಕ್ಕೆ ಭಾರೀ ಮೊತ್ತದ ಡಬ್ಬಿಂಗ್ ರೈಟ್ಸ್ ಸಿಕ್ಕಿರುವುದನ್ನು ಸ್ವತಃ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ಅವರೇ ಹೇಳಿದ್ದಾರೆ. ‘ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳಿಗೆ ಡಬ್ಬಿಂಗ್ ರೈಟ್ಸ್ ಹಾಗೂ ಟೀವಿ ರೈಟ್ಸ್‌ನಲ್ಲಿ ಹೆಚ್ಚು ಬೇಡಿಕೆ ಇರುತ್ತದೆ. ಆದರೆ, ಪಡ್ಡೆಹುಲಿ ಶ್ರೇಯಸ್ ಅವರಿಗೆ ಮೊದಲ ಸಿನಿಮಾ. ಚಿತ್ರದ ಮೇಕಿಂಗ್ ಹಾಗೂ ಹಾಡುಗಳನ್ನು ನೋಡಿಯೇ ಚೆನ್ನೈನ ಎಸ್‌ಪಿಎಂ ಆರ್ಟ್ಸ್ ಎಲ್‌ಎಲ್‌ಬಿ ಎನ್ನುವ ಸಂಸ್ಥೆ 2.36 ಕೋಟಿ ಕೊಟ್ಟು ಡಬ್ಬಿಂಗ್ ಹಕ್ಕುಗಳನ್ನು ಖರೀದಿ ಮಾಡಿದೆ.

ಹೊಸ ಹುಡುಗನ ಚಿತ್ರವೊಂದು ಮೊದಲ ಬಾರಿಗೆ ಕನ್ನಡದಲ್ಲಿ ಭಾರೀ ಮೊತ್ತಕ್ಕೆ ಸೇಲ್ ಆಗಿ ದಾಖಲೆ ನಿರ್ಮಿಸಿದೆ’ ಎಂಬುದು ನಿರ್ದೇಶಕರ ಸಂಭ್ರಮದ ಮಾತು. ರಮೇಶ್ ರೆಡ್ಡಿ ನಂಗ್ಲಿ ನಿರ್ಮಿಸಿರುವ ಈ ಚಿತ್ರ ಇನ್ನೇನು ಏಪ್ರಿಲ್ 19ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ಬರುವುದಕ್ಕೆ ಸಿದ್ದವಾಗಿದೆ.

ಆರ್‌ಸಿಬಿಗೆ ಸೋಲು, ಫ್ಯಾನ್ಸ್‌ಗೆ ಫೀಲ್, ’ಪಡ್ಡೆಹುಲಿ’ಯಿಂದ ಕಪ್ ನಮ್ದೆ ಹಾಡು!