ಬೆಂಗಳೂರು (ಜೂ. 23): ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ  ಬಹುನಿರೀಕ್ಷಿತ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮ ಇದೇ ಜೂನ್ 25 ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. 

ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ರಿಂದ 9 ಗಂಟೆವರೆಗೆ ಈ ಕಾರ್ಯಕ್ರಮ  ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಕುರಿತು ರಮೇಶ್ ಅರವಿಂದ್, ‘ಕನ್ನಡದ ಕೋಟ್ಯಧಿಪತಿ ಹೃದಯ ಮತ್ತು ಮೆದುಳಿಗೂ ಹತ್ತಿರವಾದ ಗೇಮ್ ಶೋ. ಜನ ಸಾಮನ್ಯರ ಕನಸುಗಳನ್ನು ನನಸಾಗಿಸುವ ಕಾರ್ಯಕ್ರಮದ ಸಾರಥಿಯಾಗಿರುವುದು ಬಹಳ ಸಂತೋಷ ತಂದಿದೆ’ಎನ್ನುತ್ತಾರೆ.