ಅಕ್ಷಯ್ ಕುಮಾರ್ ಬಹು ನಿರೀಕ್ಷಿತ ’ಮಿಷನ್ ಮಂಗಲ್’ ಚಿತ್ರದ ಟೀಸರ್ ರಿಲೀಸಾಗಿದೆ. ಈ ಚಿತ್ರದಲ್ಲಿ ಕನ್ನಡದ ಹೆಮ್ಮೆಯ ಹಿರಿಯ ನಟ ದತ್ತಣ್ಣ ಅಭಿನಯಿಸಿದ್ದಾರೆ. 

45 ಸೆಕೆಂಡ್ ಇರುವ ಟೀಸರ್ ನಲ್ಲಿ ದತ್ತಣ್ಣ, ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ನಿತ್ಯಾ ಮೆನನ್, ಕಿರತಿ ಕುಲ್ಹಾರಿ ಅಭಿನಯಿಸಿದ್ದಾರೆ. 

2013, ನವೆಂಬರ್ ನಲ್ಲಿ ಇಸ್ರೋ ಉಡಾವಣೆ ಮಾಡಿದ ಮಂಗಳಯಾನ ರಾಕೆಟ್ ಆಧಾರಿತ ಸಿನಿಮಾ ಇದಾಗಿದೆ. 

ಅಕ್ಷಯ್ ಕುಮಾರ್ ರಾಕೇಶ್ ಧವನ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ಐಯ್ಯರ್ ಎಂಬ ಪಾತ್ರವನ್ನು ದತ್ತಣ್ಣ ನಿರ್ವಹಿಸಿದ್ದಾರೆ. ಟ್ರೇಲರ್ ನ ಮೂರ್ನಾಲ್ಕು ಕಡೆ ಕಾಣಿಸುತ್ತಾರೆ. ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಗೆ ದತ್ತಣ್ಣ ತೆರೆ ಹಂಚಿಕೊಳ್ಳುತ್ತಿದ್ದಾರೆ.

 

ಮಿಷನ್ ಮಂಗಲ್ ಬಗ್ಗೆ ಅಕ್ಷಯ್ ಮಾತನಾಡುತ್ತಾ, ’ನನ್ನ ಮಗಳು ಹಾಗೂ ಅವಳ ವಯಸ್ಸಿನ ಮಕ್ಕಳಿಗಾಗಿ ನಾನು ಈ ಸಿನಿಮಾ ಮಾಡಿದ್ದೇನೆ. ಈ ಸಿನಿಮಾ ಮನರಂಜನೆ ಜೊತೆಗೆ ಸ್ಫೂರ್ತಿ ನೀಡುವಂತದ್ದಾಗಿರುತ್ತದೆ ಎಂದು ಅಕ್ಷಯ್ ಕುಮಾರ್’ ಟ್ವೀಟ್ ಮಾಡಿದ್ದಾರೆ. 

 

ಮುಂದಿನ ತಿಂಗಳು ಅಂದರೆ ಆಗಸ್ಟ್ 15 ರಂದು ಮಿಷನ್ ಮಂಗಲ್ ಬಿಡುಗಡೆಯಾಗಲಿದೆ.