ಸಿನಿಮಾದಲ್ಲಿ ಹೀರೋ -ಹೀರೋಯಿನ್'ಗಳಷ್ಟೆ ಸ್ಕೋಪ್ ಇರುವುದು ಪೋಷಕ ಪಾತ್ರಗಳಿಗೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಪೋಷಕ ಪಾತ್ರದಲ್ಲಿ ಮಿಂಚುವ ನಟರು ಒಂದು ಸಿನಿಮಾಕ್ಕೆ ಲಕ್ಷ ಲಕ್ಷ ಸಂಭಾವನೆ ಪಡೆಯುವ ಮೂಲಕ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಬೆಂಗಳೂರು(ಡಿ.01): ಸಿನಿಮಾದಲ್ಲಿ ನಾಯಕ ನಾಯಕಿಯರಿಗಿರುವಷ್ಟೆ ಸ್ಕೋಪ್ ಪೋಷಕ ಪಾತ್ರಗಳಿಗೆ ಇದೆ. ಸದ್ಯ ಸ್ಯಾಂಡಲ್ ವುಡ್'ನಲ್ಲಿ ಪೋಷಕ ಪಾತ್ರದಲ್ಲಿ ಮಿಂಚುವ ನಟರು ಒಂದು ಸಿನಿಮಾಕ್ಕೆ ಲಕ್ಷ ಲಕ್ಷ ಸಂಭಾವನೆ ಪಡೆಯುವ ಮೂಲಕ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ರವಿಶಂಕರ್'ಗೆ ಒಂದು ದಿನಕ್ಕೆ ಮೂರು ಲಕ್ಷ..!: ಕೇಂಪೆಗೌಡ ಸಿನಿಮಾ ಮೂಲಕ ಸ್ಯಾಂಡಲ್ ವುಡ್`ನಲ್ಲಿ ಬೇಡಿಕೆಯ ಖಳ ನಟನಾಗಿರುವ ರವಿಶಂಕರ್, ಸದ್ಯಕ್ಕೆ ಗಾಂಧಿನಗರದಲ್ಲಿ ಬೇಡಿಕೆಯ ಪೋಷಕ ನಟ.ಇವರು ಒಂದು ದಿನಕ್ಕೆ ಮೂರು ಲಕ್ಷ ಚಾರ್ಜ್ ಮಾಡ್ತಾರಂತೆ. ದೊಡ್ಮನೆ ಹುಡುಗ ಚಿತ್ರದಲ್ಲಿ ಖಡಕ್'ಆಗಿ ಆಬ್ಬರಿಸಿದ ರವಿಶಂಕರ್ ಹೆಬ್ಬುಲಿ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಸಾಧು ಕೋಕಿಲ ಪಡೀತಾರೆ 1.50 ಸಾವಿರ.!: ಗಾಂಧಿನಗರದ ಕಾಮಿಡಿ ಮಹಾರಾಜ ಅಂತಾ ಬ್ರಾಂಡ್ ಆಗಿರುವ ಸಾಧುಕೋಕಿಲ ಒಂದು ದಿನಕ್ಕೆ 1.50 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಇನ್ನು ನಿರ್ದೇಶನ ಹಾಗೂ ಸಂಗೀತ ಸಾಧು ಬೇರೆ ಬೇರೆ ರೀತಿ ಚಾರ್ಜ್ ಮಾಡ್ತಾರೆ ಅನ್ನೋದು ಬಲ್ಲವರು ಹೇಳುವ ಮಾತು.
ರಂಗಾಯಣ ರಘುಗೆ ಕೋಡಬೇಕು 1 ಲಕ್ಷ.!: ಸಕಲಕಲಾವಲ್ಲಭ ಅಂತಾ ಕರಿಸಿಕೊಂಡಿರುವ ರಂಗಾಯಣ ರಘು ಕೂಡ ದಿನಕ್ಕೆ ಸಖತ್ ಚಾರ್ಜ್ ಮಾಡ್ತಾರೆ. ಅದು ಖಳ ನಟ, ಕಾಮಿಡಿ ಹಾಗೂ ತಂದೆ ಪಾತ್ರ ಹೀಗೆ ಯಾವುದೇ ಇರಲಿ ರಂಗಾಯಣ ರಘು ಒಂದು ದಿನಕ್ಕೆ 1 ಲಕ್ಷದಿಂದ 50 ಸಾವಿರ ರೂಪಾಯಿಯಷ್ಟು ಸಂಭಾವನೆ ಪಡೆಯುತ್ತಾರೆ.
ಚಿಕ್ಕಣ್ಣ 1 ಲಕ್ಷ ಕಡಿಮೆಗೆ ಸಿಗಲ್ಲ: ಅಧ್ಯಕ್ಷ ಸಿನಿಮಾದಿಂದ ಗಾಂಧಿನಗರದಲ್ಲಿ ತನ್ನ ಬೇಡಿಕೆಯನ್ನ ಹೆಚ್ಚಿಸಿಕೊಂಡಿರುವ ಹಾಸ್ಯ ನಟ ಚಿಕ್ಕಣ್ಣ. ಸ್ಟಾರ್ಸ್ ನಟರಿಂದ ಹಿಡಿದು ಮಾಮೂಲಿ ಸಿನಿಮಾದಲ್ಲಿ ಆಕ್ಟ್ ಮಾಡುವ ಚಿಕ್ಕಣ್ಣ ಒಂದು ದಿನಕ್ಕೆ ಒಂದು ಲಕ್ಷ ಚಾರ್ಜ್ ಮಾಡ್ತಾರಂತೆ.
ಬುಲೆಟ್ ಪ್ರಕಾಶ್'ಗೆ 75 ರಿಂದ 1 ಲಕ್ಷ ಕೊಡಲೇ ಬೇಕು
ತನ್ನ ವಿಭಿನ್ನ ಮ್ಯಾನರಿಸಂನಿಂದ ಮೋಡಿ ಮಾಡುವ ಮತ್ತೊಬ್ಬ ಹಾಸ್ಯ ಕಲಾವಿದ ಅಂದ್ರೆ ಬುಲೆಟ್ ಪ್ರಕಾಶ್. ಈಗಾಗ್ಲೇ ಎಲ್ಲಾ ಸ್ಟಾರ್ ನಟರ ಜೊತೆ ಸ್ಕ್ರಿನ್ ಹಂಚಿಕೊಂಡಿರುವ ಬುಲೆಟ್ ಒಂದು ದಿನಕ್ಕೆ 75 ರಿಂದ 1 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ.
ಅಚ್ಯುತ್ ಕುಮಾರ್ ಸಂಭಾವನೆ ಕೂಡ ಕಡಿಮೆಯೇನಲ್ಲ
ಸದ್ಯ ಸ್ಯಾಂಡಲ್'ವುಡ್ ನಲ್ಲಿ ಬೇಡಿಕೆಯ ಪೋಷಕ ನಟನಾಗಿರೋ ಅಚ್ಯುತ್ ಕುಮಾರ್ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಚಿತ್ರದ ನಂತರ ತಮ್ಮ ಬೇಡಿಕೆಯನ್ನ ಜಾಸ್ತಿ ಮಾಡಿಕೊಂಡಿದ್ದಾರೆ. ಅಚ್ಯುತ್ ಕೂಡ ದಿನಕ್ಕೆ 1 ರಿಂದ 2 ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ.
ಒಟ್ಟಾರೆ ಪೋಷಕ ಪಾತ್ರಗಳಲ್ಲಿ ತೆರೆ ಮೇಲೆ ಮಿಂಚುವ ಈ ಸ್ಟಾರ್ಸ್, ಒಂದು ಸಿನಿಮಾಕ್ಕೆ ಅಥವಾ ಒಂದು ದಿನಕ್ಕೆ ಲಕ್ಷ ಗಟ್ಟಲೆ ಸಂಭಾವನೆ ಪಡೆಯುತ್ತಾರೆ ಅನ್ನೋದು ಗಾಂಧಿನಗರದ ಕೆಲ ಪಂಡಿತರ ಅಂಕಿ ಅಂಶ ಇದು.
ವರದಿ: ರವಿಕುಮಾರ್ ಎಂ.ಕೆ, ಸುವರ್ಣ ನ್ಯೂಸ್
