. ಇದೇ ವಾರ ‘ರಿಚ್ಚೀ’ ತೆರೆಗೆ ಬರುತ್ತಿದೆ. ಅಲ್ಲದೇ ಕರುಣಾನಿಧಿ ಮೊಮ್ಮಗ ಉದಯನಿಧಿ ಸ್ಟಾಲಿನ್ ಜತೆಗೆ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳ ಹಿಂದೆಯೇ ಕೇಳಿ ಬಂದಿತ್ತು. ಈಗ ಕಾಲಿವುಡ್ ಕಡೆಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬಂದಿದೆ.
ಅದರಲ್ಲೂ ‘ವಿಕ್ರಂ ವೇದ’ ರಿಲೀಸ್ ಆದ ನಂತರವಂತೂ ಕಾಲಿವುಡ್‌ನ ಹಾಟ್ ಫೇವರಿಟ್ ಆಗಿದ್ದಾರೆ ಶ್ರದ್ಧಾ. ಅವರ ಹೆಸರು ದಿನಕ್ಕೊಂದು ಸ್ಟಾರ್ ನಟರ ಜತೆಗೆ ತಳುಕು ಹಾಕಿಕೊಳ್ಳುತ್ತಿದೆ. ಇದೇ ವಾರ ‘ರಿಚ್ಚೀ’ ತೆರೆಗೆ ಬರುತ್ತಿದೆ. ಅಲ್ಲದೇ ಕರುಣಾನಿಧಿ
ಮೊಮ್ಮಗ ಉದಯನಿಧಿ ಸ್ಟಾಲಿನ್ ಜತೆಗೆ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳ ಹಿಂದೆಯೇ ಕೇಳಿ ಬಂದಿತ್ತು. ಈಗ ಕಾಲಿವುಡ್ ಕಡೆಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬಂದಿದೆ. ಇಳಯ ದಳಪತಿ ವಿಜಯ್ ಹೊಸ ಸಿನಿಮಾಕ್ಕೆ ಶ್ರದ್ಧಾ ನಾಯಕಿಯಂತೆ. ಸದ್ಯಕ್ಕದು ಅಧಿಕೃತವಲ್ಲದಿದ್ದರೂ ವ್ಯಾಪಕವಾಗಿ ಕೇಳಿ ಬರುತ್ತಿರುವ ಮಾತು. ದಕ್ಷಿಣ ಭಾರತದ ಸ್ಟಾರ್ ನಟ ವಿಜಯ್ ಸಿನಿಮಾಕ್ಕೆ ಶ್ರದ್ಧಾ ನಾಯಕಿ ಎನ್ನುವ ಅಚ್ಚರಿಯೇ ಈ ಸುದ್ದಿಯ ಹಿಂದಿನ ವಿಶೇಷ. ವಿಜಯ್ ಸಿನಿಮಾಗಳಿಗೆ ನಾಯಕಿ ಆಗುವುದು ಅದೃಷ್ಟ ಎನ್ನುವ ನಾಯಕಿಯರಿಗೆ ಲೆಕ್ಕವೇ ಇಲ್ಲ. ಇಂತಹವರ ನಡುವೆ ಆ ಅದೃಷ್ಟ ಶ್ರದ್ಧಾ ಪಾಲಾಗಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಹಾಗಾದ್ರೆ ಇದು ನಿಜವೇ? ಇದಕ್ಕೆ ನಟಿ ಶ್ರದ್ಧಾ ಹೇಳುವುದೇನು? ಅವರ ಪ್ರತಿಕ್ರಿಯೆ ಇಲ್ಲಿದೆ.

‘ಈ ಸುದ್ದಿ ನನಗೆ ಗೊತ್ತಿಲ್ಲ. ಎಲ್ಲಿಂದ ಬಂತು, ಹೇಗೆ ಬಂತು ನಂಗಂತೂ ತಿಳಿದಿಲ್ಲ. ಅಂತಹ ಯಾವುದೇ ಪ್ರಕ್ರಿಯೆ ಈ ತನಕ ನಡೆದಿಲ್ಲ. ನನ್ನನ್ನು ಯಾರೂ ಸಂಪರ್ಕ ಕೂಡ ಮಾಡಿಲ್ಲ. ಆದರೂ, ನನ್ನ ಬಗ್ಗೆ ಇಂಥ ರೂಮರ್ಸ್‌ಗಳು ಕೇಳಿ ಬರುತ್ತಿರುವುದಕ್ಕೆ ಖುಷಿ ಆಗುತ್ತಿದೆ. ರೂಮರ್ಸ್‌ಗಳು ನಿಜವಾದರೆ ಮತ್ತಷ್ಟು
ಖುಷಿ ಆಗಲಿದೆ’ ಎನ್ನುತ್ತಾರೆ ಶ್ರದ್ಧಾ. ಹಾಗಾದ್ರೆ ನಟಿ ಶ್ರದ್ಧಾಗೆ ಏನು ಗೊತ್ತಿಲ್ಲವೇ? ಬೆಂಕಿ ಇಲ್ಲದೆ ಹೊಗೆ ಬರಲು ಹೇಗೆ ಸಾಧ್ಯ? ಕಾಲಿವುಡ್ ಪ್ರೊಜೆಕ್ಟ್'ಗಳ ಮಟ್ಟಿಗೆ ಶ್ರದ್ಧಾ ಸಿಕ್ಕಾಪಟ್ಟೆ ಗುಟ್ಟು ಮಾಡುತ್ತಾರೆ. ಪ್ರತಿ ಪ್ರಾಜೆಕ್ಟ್ ಗ್ಯಾರಂಟಿ ಆಗಿ, ಕಾಲ್‌ಶೀಟ್‌ಗೆ ಸಹಿ ಹಾಕಿದ ನಂತರವೇ ಮಾಧ್ಯಮಕ್ಕೆ ಬ್ರೇಕಿಂಗ್ ನ್ಯೂಸ್ ಕೊಡುತ್ತಾರೆ. ಸದ್ಯಕ್ಕವರು ವಿಜಯ್ ಜತೆ ಅಭಿನಯಿಸುವುದು ರೂಮರ್ಸ್ ಎನ್ನುತ್ತಿದ್ದರೂ, ಅದು ನಿಜವೂ ಎನ್ನುತ್ತಿವೆ ಮೂಲಗಳು
