ಚಿತ್ರ ವಿಮರ್ಶೆ: ಸಿಂಗ
ಮೇರಾ ನಾಮ್ ಸಿಂಗ...
ಹೀಗೆ ಹೇಳಿ ಕಾಲರ್ ಎತ್ತಿ, ದೌಲತ್ತು ತೋರಿದವನ ದವಡೆ ಮುರಿಯುವ ಈತ, ಪರರಿಗೆ ಕಷ್ಟಅಂದ್ರೆ ಸಾಕು ರಕ್ತ ಹರಿಸಕ್ಕೂ ರೆಡಿ. ಇನ್ನೊಬ್ಬರಿಗಾಗಿ ಫೈಟ್ ಮಾಡಿಕೊಂಡಿದ್ದವನಿಗೆ ಸಾವಿನ ರೂಪದಲ್ಲಿ ಶತ್ರುಗಳು ಸುತ್ತುವರಿದಿದ್ದಾರೆ. ಈತನ ತಾಯಿಗೆ ಮಾತ್ರ ತನ್ನ ಮಗ ಮಗ್ಧ. ಅವನು ಏನೇ ಮಾಡಿದರೂ ಒಳ್ಳೆಯದಕ್ಕೆ. ಅವನು ಉಳಿಯಬೇಕು. ಶತ್ರುಗಳ ಕಾಟ ಆತನಿಗೆ ತಪ್ಪಬೇಕು. ಮಚ್ಚು ಕೆಳಗಿಟ್ಟಮಗ, ಜಗ ಮೆಚ್ಚುವಂತೆ ಬದುಕಬೇಕೆಂದು ಕನಸು ಕಾಣುವ ತಾಯಿ ಏನು ಮಾಡುತ್ತಾಳೆ?
ಹೀಗೊಂದು ಕುತೂಹಲ ಮೂಡಿದರೆ ನೀವು ‘ಸಿಂಗ’ನನ್ನು ನೋಡಲು ಹೋಗಬೇಕು. ‘ಹೊಡಿ ಮಗ’ ಹಾಗೂ ‘ಬೇಡ ಮಗ’ ಎನ್ನುವ ರೇಖೆಗಳ ನಡುವೆ ಸಾಗುವ ಈ ಕತೆಯ ಕೊನೆಯಲ್ಲಿ ಬರುವ ತಿರುವು ಯಾರೂ ನಿರೀಕ್ಷೆ ಮಾಡಿರಲ್ಲ. ಈ ಕತೆಯನ್ನು ಸಾಧ್ಯವಾದಷ್ಟುಕಮರ್ಷಿಯಲ್ಲಾಗಿಸಿರುವುದು ರವಿವರ್ಮ, ಪಳನಿರಾಜ್ ಸಾಹಸಗಳು, ರಘು ನಿಡುವಳ್ಳಿ ಅವರ ಖಡಕ್ ಸಂಭಾಷಣೆಗಳು ಹಾಗೂ ಕಿರಣ್ ಹಂಪಾಪುರ ಕ್ಯಾಮೆರಾ.
ಚಿತ್ರ ವಿಮರ್ಶೆ: ಆದಿ ಲಕ್ಷ್ಮಿ ಪುರಾಣ
ಇಲ್ಲಿ ಹೊಡೆದಾಟಗಳೇ ಪ್ರಧಾನ ಅಲ್ಲ. ಬೇರೆಯವರಿಗಾಗಿ ಫೈಟ್ ಮಾಡಿಕೊಂಡಿದ್ದವನ ಜೀವನದಲ್ಲಿ ಒಬ್ಬ ಹುಡುಗಿ ಪ್ರವೇಶವಾಗುತ್ತಾಳೆ. ಆ ಹುಡುಗಿಯ ತಂದೆ ರೌಡಿ ಮುಂದೆ ನಿಲ್ಲುತ್ತಾರೆ. ಆ ರೌಡಿಗೂ ಈ ಸಿಂಗನಿಗೂ ಎಣ್ಣೆ ಸೀಗೆಕಾಯಿ. ಇದರ ನಡುವೆ ರಾಜಕೀಯದ ಆಟ. ಆರಂಭದಿಂದ ಕೊನೆ ಹತ್ತು ನಿಮಿಷಗಳ ವರೆಗೂ ರೌಡಿಯಿಸಂ, ಹೀರೋಯಿಸಂ, ಪ್ರೀತಿ- ಪ್ರೇಮ, ರಾಜಕೀಯ, ತಮಾಷೆ ಹೀಗೆ ಏನೆಲ್ಲ ನಡೆದರೂ ಕೊನೆಗೂ ಹೀರೋ ಎನಿಸಿಕೊಳ್ಳುವುದು ನಾಯಕನ ತಾಯಿ. ಆ ಮಟ್ಟಿಗೆ ನಟಿ ತಾರಾ ಅವರದ್ದು ಈ ಚಿತ್ರದಲ್ಲಿ ಬಲು ತೂಕ ಮತ್ತು ಮಹತ್ವದ ಪಾತ್ರ. ತೆರೆ ಮೇಲೆ ತಾರಾ ಅವರು ತಾಯಿ ಪಾತ್ರದಲ್ಲಿ ಕಾಣಿಸಿಕೊಂಡರೆ ನೋಡುಗನಿಗೆ ಮಾತ್ರವಲ್ಲ, ನಿರ್ದೇಶಕನ ಕಲ್ಪನೆ ಕತೆಗೂ ಆಸ್ಕರ್ ಅವಾರ್ಡ್ ಸಿಕ್ಕಷ್ಟೆಖುಷಿ. ಅಮ್ಮನಾಗಿ ತಾರಾ ಅವರದ್ದು ಮುಗ್ಧತೆಯ ಜತೆಗೆ ಪ್ರಭುದ್ಧ ನಟನೆ. ಹೀರೋಯಿಸಂನಿಂದ ಕೂಡಿದ ಕಮರ್ಷಿಯಲ್ ಚಿತ್ರದಲ್ಲಿ ತಾಯಿ ಪಾತ್ರಕ್ಕೆ ಈ ಮಟ್ಟಿಗೆ ಜಾಗ ಸಿಕ್ಕಿರುವುದು ನಿರ್ದೇಶಕ ವಿಜಯ್ ಕಿರಣ್ ಅವರ ಹೊಸತನಕ್ಕೆ ಸಾಕ್ಷಿ. ತನ್ನ ಹಾಗೆ ಜನ ಸೇವೆಯಲ್ಲಿ ತೊಡಗಿದ್ದ ತಂದೆಯನ್ನು ತೀರಾ ಚಿಕ್ಕಂದಿನಲ್ಲೇ ಕಳೆದುಕೊಂಡ ನಾಯಕನಿಗೆ ಅಮ್ಮನೇ ಅಪ್ಪ ಮತ್ತು ಅಮ್ಮ.
ನಿರ್ದೇಶನ: ವಿಜಯ್ ಕಿರಣ್
ನಿರ್ಮಾಣ: ಉದಯ್ ಕೆ ಮಹ್ತಾ
ಸಂಗೀತ: ಧರ್ಮ ವಿಶ್
ಛಾಯಾಗ್ರಹಣ: ಕಿರಣ್ ಹಂಪಾಪುರ
ಅಮ್ಮನ ಮಡಿಲಲ್ಲಿ ಬೆಳೆಯುವ ಮಗ, ಅಪ್ಪನ ಹಾದಿ ಹಿಡಿದಾಗ ತಾಯಿ ಏನೆಲ್ಲ ಕಳವಳ ಪಡುತ್ತಾಳೆ? ಮಗನಿಗಾಗಿ ತಾಯಿ ಏನೆಲ್ಲ ಮಾಡಬಹುದು? ಹರಕæ ಕಟ್ಟುತ್ತಾಳೆ, ತನ್ನ ಮನೆಗೆ ಒಳ್ಳೆಯ ಸೊಸೆ ಬರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಾಳೆ, ಮಗ ಮದುವೆಯಾಗಿ ಸುಖವಾಗಿರಬೇಕು ಎಂದು ಬಯಸುತ್ತಾಳೆ. ಆದರೆ, ಮಗನಿಗೆ ಅಮ್ಮ ಅಂದ್ರೆ ಪ್ರಾಣ. ಆಕೆಯ ಆಸೆಗಳನ್ನು ಮಾತ್ರ ಹತ್ತಿರಕ್ಕೂ ಸೇರಿಸಲ್ಲ. ಯಾಕೆ ಎನ್ನುವುದೇ ಚಿತ್ರದ ಕತೆ. ಜತೆಗೆ ಅಮ್ಮನ ಆಸೆಯಂತೆ ಮಗ, ಮಗನ ಆಸೆಯಂತೆ ಅಮ್ಮ ದಾರಿ ಬದಲಾಯಿಸಿಕೊಂಡರೆ ಏನಾಗುತ್ತದೆಂದು ತೆರೆ ಮೇಲೆ ನೋಡಬೇಕು. ವಿಲನ್ ಆಗಿ ರವಿಶಂಕರ್, ರಾಜಕಾರಣಿಯಾಗಿ ಬಿ ಸುರೇಶ್ ಹಾಗೂ ಅರುಣಾ ಬಾಲರಾಜ್ ಅವರ ಪಾತ್ರಗಳು ಚಿತ್ರಕ್ಕೆ ಪೂರಕವಾಗಿದೆ. ಧರ್ಮ ವಿಶ್ ಅವರ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿವೆ.