ಕತೆಗಾಗಿ ಮುಂದಿನ ಭಾಗ ನೋಡಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 2:26 PM IST
Kannada movie Review Arkavath
Highlights

ಆದಿಯಿಂದ ಅಂತ್ಯದವರೆಗೂ ಇಲ್ಲಿ ಏನಾಗುತ್ತಿದೆ ಎನ್ನುವುದೇ ಗೊತ್ತಾಗದು. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆ. ಅಂದರೆ ಅರ್ಕಾವತ್ ಎಂಬ ಕನ್ನಡ ಚಿತ್ರದ ಬಗ್ಗೆ. ಹಾಗಾದ್ರೆ ನೀವು ಇದರ ಮುಂದಿನ ಭಾಗ ನೋಡಬೇಕು. 

ಆದಿಯಿಂದ ಅಂತ್ಯದವರೆಗೂ ಇಲ್ಲಿ ಏನಾಗುತ್ತಿದೆ ಎನ್ನುವುದೇ ಗೊತ್ತಾಗದು. ತಾಳಮೇಳವಿಲ್ಲದ ದೃಶ್ಯಗಳು, ಹೊಸ ಕಲಾವಿದರ ಅಸಹಜ ನಟನೆ, ಅಪೂರ್ಣವಾದ ಅಪಾರ್ಟ್‌ಮೆಂಟ್‌ನ ಕತ್ತಲ ರಾತ್ರಿಯಲ್ಲೇ ಸಾಗುವ
ಕ್ಯಾಮರಾ, ಹಾರರ್ ಎಂದು ಹೇಳಿಕೊಂಡರೂ ಅದಕ್ಕೆ ತಕ್ಕಂತೆ ಮೂಡಿಬರದ ಅಪೂರ್ಣ ಚಿತ್ರ ‘ಅರ್ಕಾವತ್ ರ್’. ಇಡೀ ಚಿತ್ರವನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡು ಆವಾಹಿಸಿಕೊಳ್ಳಬೇಕು ಎಂದರೆ ಮುಂದೆ ಬರಲಿರುವ
‘ಅರ್ಕಾವತ್ 2’ ಚಿತ್ರವನ್ನು ನೋಡಬೇಕಂತೆ.

ಹೀಗಂತ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಹಾಗಾಗಿ ಇದು ಚಿತ್ರದ ಮೊದಲ ಭಾಗವಷ್ಟೇ. ನಾಯಕಿ ಆಶಾ ಫೋಟೋ ತೋರಿಸಿ ಇವರು ನಿಮಗೆ ಗೊತ್ತಾ ಎಂದು ಪೊಲೀಸ್ ಅಧಿಕಾರಿ ನಾಲ್ಕು ಜನರನ್ನು ಇನ್ವೆಸ್ಟಿಗೇಷನ್ ಮಾಡಿದಾಗ ಆ ನಾಲ್ವರೂ ಹೇಳುವ ಕತೆಯ ಒಟ್ಟಾರೆ ಸಂಗ್ರಹ ಈ ಚಿತ್ರ. ಒಂದು ಜೋಡಿ ಅಪಾರ್ಟ್‌ಮೆಂಟ್ ಒಂದರಲ್ಲಿ ಫ್ಲಾಟ್ ತೆಗೆದುಕೊಂಡು ಸಂಸಾರ ಹೂಡುವ ಹಂತದಲ್ಲಿಯೇ ದೆವ್ವಗಳ ಉಪಟಳ ಶುರುವಾಗುತ್ತೆ. ಇದಕ್ಕೆ ಕಾರಣವೇನು?
ಎನ್ನುವುದೇ ಯುಕ್ಷ ಪ್ರಶ್ನೆ. ಎಡಿಟಿಂಗ್, ಮ್ಯೂಸಿಕ್, ಡೈಲಾಗ್, ಕ್ಯಾಮರಾ ಎಲ್ಲವೂ ಸಾಧಾರಣ ಮಟ್ಟಕ್ಕಷ್ಟೇ ನಿಲ್ಲುತ್ತವೆ. ಇದರ ಜೊತೆಗೆ ಅಸಮರ್ಥ ಚಿತ್ರಕತೆಯೂ ಸೇರಿ ನೋಡುಗನ ಪ್ರಾಣ ಹಿಂಡುವುದು ಗ್ಯಾರೆಂಟಿ.

ಕೆಂಡಪ್ರದಿ

loader