ಕೆಂಡಪ್ರದಿ

ಚಿತ್ರನಟನಾಗಬೇಕು ಎನ್ನುವ ಆಸೆ ಹೊತ್ತ ನಾಯಕ ಸಂತೋಷ್‌ಗೆ ನಾಯಕಿ ರಕ್ಷಾ ಶæಣೈ ಆಕಸ್ಮಿಕವಾಗಿ ಭೇಟಿಯಾಗಿ ಆತ್ಮ ಸಂಗಾತಿಯಾಗುತ್ತಾಳೆ. ಇನ್ನೊಂದು ಕಡೆಯಲ್ಲಿ ಬದುಕಿದೆ, ಅದು ಉಜ್ವಲವಾಗಬೇಕಾದರೆ ದುಡ್ಡು ಬೇಕು. ಅದಕ್ಕಾಗಿ ನಾಯಕ ಸಂತೋಷ್‌ ಕಳ್ಳತನ ಮಾಡಲು ಮುಂದಾಗುತ್ತಾನೆ.

ಕಳ್ಳ ಮಾರ್ಗದಲ್ಲಿ ಹೋದ ನಾಯಕ ಕಡೆಗೆ ಸಿಲುಕಿ ಬೀಳುವುದು ಮತ್ತೊಂದು ಸಂಸಾರದ ಗಲಾಟೆಯ ಸುಳಿಯಲ್ಲಿ. ಆ ಸುಳಿಯ ಮುಖ್ಯ ಪಾತ್ರಗಳಾದ ಶ್ರುತಿ ಮತ್ತು ನಕುಲ್‌ ಗೋವಿಂದ್‌ ತಮ್ಮ ಸ್ವಾರ್ಥಕ್ಕಾಗಿ ಇಲ್ಲಿ ನಾಯಕನನ್ನು ದಾಳದಂತೆ ಬಳಸಿಕೊಂಡು ಬಿಸಾಡುವಷ್ಟರಲ್ಲಿ ಚಿತ್ರ ಅರ್ಧ ಹಂತ ಮುಗಿಸಿರುತ್ತದೆ.

ತಾರಾಗಣ: ದಿವಾಕರ್‌, ಸಂತೋಷ್‌, ರಕ್ಷಾ ಶಣೈ, ಶ್ರುತಿ, ನಕುಲ್‌ ಗೊವಿಂದ್‌

ನಿರ್ದೇಶನ: ಹೇಮಂತ್‌ ಕೃಷ್ಣ

ನಿರ್ಮಾಣ: ವೆಂಕಟೇಶ್ವರ ರಾವ್‌ ಸಜ್ಜನ್‌

ಸಂಗೀತ: ರಾಜ ಕಿರಣ್‌

ಛಾಯಾಗ್ರಹಣ: ಚಕ್ರವರ್ತಿ

ಮಿಕ್ಕರ್ಧದಲ್ಲಿ ಬಿಗ್‌ ಬಾಸ್‌ ದಿವಾಕರನ್ನದ್ದೇ ಅಖಾಡ. ಬಲಿಯಾಗಿ ಬಿದ್ದ ನಾಯಕನ ಸಾವಿನ ಹಿಂದಿನ ರಹಸ್ಯವನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ಚಿತ್ರವನ್ನು ಸಸ್ಪೆನ್ಸ್‌ ರೋಡಿಗೆ ಜಾರುವಂತೆ ಮಾಡುತ್ತಾರೆ ದಿವಾಕರ್‌. ಹಾಗಾಗಿ ಸೆಕೆಂಡ್‌ ಆಫ್‌ನಲ್ಲಿ ಚಿತ್ರ ಸ್ವಲ್ಪ ಟೇಕಾಫ್‌ ಆಗುತ್ತದೆ. ಪೊಲೀಸ್‌ ಅಧಿಕಾರಿಯಾಗಿ ದಿವಾಕರ್‌ ಖಡಕ್‌ ಆಗಿದ್ದರೂ ಎಕ್ಸ್‌ಪ್ರೆಷನ್‌ ಇನ್ನಷ್ಟುಬೇಕಿತ್ತು.

ಚಿತ್ರ ವಿಮರ್ಶೆ: ಡಾಟರ್ ಆಫ್ ಪಾರ್ವತಮ್ಮ

ನಿರ್ದೇಶಕ ಹೇಮಂತ್‌ ಕೃಷ್ಣ ಒಳ್ಳೆಯ ಕತೆ ಮಾಡಿಕೊಂಡಿದ್ದರೂ ಅದನ್ನು ಪ್ರಸೆಂಟ್‌ ಮಾಡುವಲ್ಲಿ ಮತ್ತು ಕಲಾವಿದರಿಂದ ನಟನೆ ತೆಗೆಯುವಲ್ಲಿ ಸೋತಿದ್ದಾರೆ. ಸಂಭಾಷಣೆಗೆ ಕನಿಷ್ಟಗಟ್ಟಿತನವನ್ನಾದರೂ ನೀಡಿದ್ದರೆ ಚೆನ್ನಾಗಿತ್ತು. ಹಾಡುಗಳು ಓಕೆ. ಚಕ್ರವರ್ತಿ ಅವರು ಕ್ಯಾಮರಾ ವರ್ಕ್ನಲ್ಲಿ ಇನ್ನಷ್ಟುಸೃಜನಾತ್ಮಕತೆ ತೋರಿಸುವ ಸಾಧ್ಯತೆ ಇತ್ತಾದರೂ ಅದು ಅವರಿಂದ ಸಾಧ್ಯವಾಗಿಲ್ಲ. ನಟನೆಯಲ್ಲಿ ಎಲ್ಲರೂ ಸಾಧಾರಣ ಅಂಕಕ್ಕಷ್ಟೇ ಸೀಮಿತವಾಗಿ ಉಳಿದಿದ್ದಾರೆ.