ಮೊದಲ ಮೆಟ್ಟಿಲು ಎನ್ನು​ವಂತೆ ಚಿತ್ರ​ತಂಡ ಮೊನ್ನೆ​ಯಷ್ಟೆಟ್ರೇಲರ್‌ ಬಿಡು​ಗಡೆ ಮಾಡಿತು. ಮಧು ಬಾಲ, ಸುಧಾ​ರಾಣಿ, ಪ್ರಮೋದ್‌, ಜಹಾಂಗೀರ್‌, ಹಿತಾ ಚಂದ್ರ​ಶೇ​ಖರ್‌ ಹೀಗೆ ಹಲವು ಕಲಾ​ವಿ​ದರ ದಂಡು ಈ ಚಿತ್ರ​ದ​ಲ್ಲಿದೆ. ಹಾಸ್ಯಕ್ಕೆ ಮಾತ್ರ ಸೀಮಿತ, ಡಬಲ್‌ ಮೀನಿಂಗ್‌ ಡೈಲಾ​ಗ್‌​ಗ​ಳನ್ನು ಹೇಳು​ವು​ದ​ಕ್ಕಷ್ಟೆಜಗ್ಗೇಶ್‌ ಇದ್ದಾರೆ ಎನ್ನು​ವ​ವ​ರಿಗೆ ಹೊಸ ರೀತಿಯ ಕಿಕ್‌ ಕೊಡುವ ಸಿನಿಮಾ ಇದು. ಅಂಥ​ದ್ದೊಂದು ಕತೆ ಚಿತ್ರ​ಲ್ಲಿದೆಯಂತೆ. ‘ಇದು ಹೊಸ ತಂಡದ, ಹೊಸ ರೀತಿಯ ಸಿನಿಮಾ. ವಿಶಾಲ ಹೃದಯದಿಂದ ಹೊಸಬರ ಚಿತ್ರಗಳನ್ನು ಪೋ›ತ್ಸಾಸಬೇಕು. ಇದರಿಂದ ಹೊಸ ಕಲಾವಿದ ಹುಟ್ಟಿಕೊಳ್ಳುತ್ತಾರೆ. ಚಿತ್ರ​ರಂಗ​ದಲ್ಲಿ ಕೆಲವೇ ಸ್ಟಾರ್‌​ಗಳು ಇದ್ದಾರೆ. ಕೆಲ​ವ​ರನ್ನು ನಂಬಿ ಚಿತ್ರ​ರಂಗ ನಡೆ​ಯಲ್ಲ. ಈ ಕಾರ​ಣಕ್ಕೆ ಇಂಥ ಚಿತ್ರ​ಗ​ಳನ್ನು ಜನ ನೋಡ​ಬೇ​ಕು’ ಎಂದರು ಜಗ್ಗೇಶ್‌.

ಕಿರು​ತೆ​ರೆ​ಯಲ್ಲಿ ಹೆಸರು ಮಾಡಿ​ರುವ ರಮೇಶ್‌ ಇಂದಿರಾ ಹಾಗೂ ಶ್ರುತಿ ನಾಯ್ಡು ಅವ​ರಿಗೆ ಹಿರಿ​ತೆರೆ ಪಯಣ ಹೊಸದು. ಆದರೂ ಒಳ್ಳೆಯ ಚಿತ್ರ ಮಾಡಿ​ರುವ ಸಂತ​ಸ​ದ​ಲ್ಲಿ​ದ್ದರು ಅವರು. ‘ಸಂಬಂದಗಳ ಮೇಲೆ ಬದುಕು ಸಾಗಲಿದೆ. ಆ ಸಂಬಂಧ​ಗಳು ದೂರ​ವಾದ ಮೇಲೆ ಏನಾ​ಗು​ತ್ತ​ದೆ. ಕಥನಾಯಕನ ಬಳಿ ಪ್ರೀಮಿಯರ್‌ ಪದ್ಮಿನಿ ಕಾರು ಇರುತ್ತದೆ. ಸೆಂಟಿಮೆಂಟ್‌ ಸಲುವಾಗಿ ಹೊಸ ಕಾರನ್ನು ಖರೀದಿಸದೆ ಅದರಲ್ಲೇ ಜೀವನ ಸಾಗಿಸುತ್ತಿರುತ್ತಾನೆ. ಎಲ್ಲಾ ಇದ್ದರೂ ಏನು ಇಲ್ಲದಂತೆ ಕೊರಗುತ್ತಾ ಇರುವುದು. ಅದೆಲ್ಲಾವನ್ನು ಬದಿಗಿಟ್ಟು ಇರುವುದರಲ್ಲೆ ಸುಖ ಕಂಡುಕೊಂಡರೆ, ಬಾಳು ಬಂಗಾರವಾಗಿರುತ್ತದೆ. ಎನ್ನುವ ಕತೆ ಈ ಚಿತ್ರ​ದ​ಲ್ಲಿ​ದೆ’ ಎಂದು ಚಿತ್ರದ ಕುರಿತು ಹೇಳಿ​ಕೊಂಡಿದ್ದು ನಿರ್ದೇ​ಶ​ಕರು. ಕಾರು ಚಾಲ​ಕ​ನಾಗಿ ಕಾಣಿ​ಸಿ​ಕೊಂಡಿ​ರುವ ಪ್ರಮೋದ್‌ ತುಂಬಾ ಚೆನ್ನಾಗಿ ನಟಿ​ಸಿ​ದ್ದಾ​ರಂತೆ. ಮದ್ಯಮ ವರ್ಗದ ಸಂಭ್ರ​ಮ​ಗಳೇ ಈ ಸಿನಿಮಾ ತಳ​ಪಾಯ. ಪ್ರತಿ ದೃಶ್ಯಗಳು ನೋಡುಗರಿಗೆ ಅವರದೇ ರೀತಿಯಲ್ಲಿ ಸಂದೇಶ ಇರುವಂತೆ ಭಾಸವಾಗುತ್ತದಂತಂತೆ. ಈ ಸಿನಿಮಾ ಎಲ್ಲ ಪ್ರೇಕ್ಷಕ ವರ್ಗಕ್ಕೆ ತಲು​ಪು​ತ್ತದೆ ಎಂಬ ನಂಬಿಕೆ ವ್ಯಕ್ತ​ಪ​ಡಿ​ಸಿ​ದರು ಶ್ರುತಿ ನಾಯ್ಡು. ಸಂಗೀತ ಅರ್ಜುನ್‌ಜನ್ಯಾ, ಅದ್ವೈತ್‌ ಗುರುಮೂರ್ತಿ ಕ್ಯಾಮೆರಾ ಚಿತ್ರ​ಕ್ಕಿದೆ. ಹಿತಾ ಚಂದ್ರ​ಶೇ​ಖರ್‌ ಅವರು ಇಲ್ಲಿ ನ್ಯೂ ಜನ​ರೇ​ಷನ್‌ ಅನ್ನು ಪ್ರತಿ​ನಿ​ಧಿ​ಸುವ ಪಾತ್ರ​ದಲ್ಲಿ ಕಾಣಿ​ಸಿ​ಕೊಂಡಿ​ದ್ದಾರೆ.

ಪ್ರೀಮಿಯರ್ ಪದ್ಮಿನಿ’ ಕಾರ್ ಕ್ರೇಜ್ ಗೆ ಬೆರಗಾದ ದಚ್ಚು!