ಚಿತ್ರ ವಿಮರ್ಶೆ: ನಾನು ನಮ್ಮುಡ್ಗಿ ಖರ್ಚ್ ಗೊಂದ್ ಮಾಫಿಯಾ
ನಮ್ಮ ಸುತ್ತಲೂ ಗೊತ್ತೋ ಗೊತ್ತಿಲ್ಲದೋ ಹತ್ತಾರು ಕ್ರೈಮ್‌ಗಳನ್ನು ನಡೆಯುತ್ತಿವೆ. ಆ ಕತ್ತಲ ಘಟನೆಗಳ ಹಿಂದೆ ಒಂದೊಂದು ಕತೆ ಇರುತ್ತದೆ. ಜತೆಗೆ ಒಂದು ಮಾಫಿಯಾನೂ ಇರುತ್ತದೆ. ಅಂಥ ಮಾಫಿಯಾ ಸ್ಟೋರಿಗಳು ಆಗಾಗ ಸಿನಿಮಾ ಪರದೆ ಬರುತ್ತಿರುತ್ತವೆ ಎಂಬುದನ್ನು ಮತ್ತೆ ನೆನಪಿಸಿದ್ದು ‘ನಾನು ನಮುಡ್ಗಿ ಖಚ್‌ರ್‍ಂಗೊಂದ್ ಮಾಫಿಯಾ’ ಎನ್ನುವ ಸಿನಿಮಾ. ಚಿತ್ರದ ಹೆಸರಿನಂತೆ ಇದೊಂದು ಭಿನ್ನ ಕತೆ ಎಂಬುದರಲ್ಲಿ ಅನುಮಾನವಿಲ್ಲ.
ಹೆಣ್ಣು, ಹೊನ್ನು ಮತ್ತು ಆಡಂಬರದ ಜೀವನ ಶೈಲಿಯೂ, ವೈಯಕ್ತಿಕ ತೆವಲುಗಳು ಸೇರಿಕೊಂಡಾಗ ಮಾತ್ರ ಜೀವ ಪಡೆಯುವ ಈ ಕ್ರಿಮಿನಲ್ ಘಟನೆಗಳನ್ನು ಸಾಧ್ಯವಾದಷ್ಟುಸಹಜವಾಗಿಯೇ ನಿರೂಪಿಸುತ್ತ ಹೋಗುತ್ತಾರೆ ಇಬ್ಬರು ನಿರ್ದೇಶಕರು. ಇಲ್ಲಿ ಯಾವ ಪಾತ್ರ ನಟನೆ ಮಾಡಿಲ್ಲ, ಯಾವ ನಟ, ನಟಿಯೂ ನಿಮಗೆ ನಾಯಕ, ನಾಯಕಿ ಅನಿಸಲ್ಲ. ಇದು ಸಿನಿಮಾದ ಪ್ಲಸ್ ಹೌದು, ಮೈನಸು ಹೌದು. ವೈಭವೀಕರಣದ ಹೊರತಾಗಿ ಮೂಡಿ ಬಂದಿರುವ ಕತೆಯಲ್ಲಿ ಒಂದಿಷ್ಟುತಿರುವುಗಳಿವೆ. ಜತೆ ತಾನು ಮಾತ್ರ ಚೆನ್ನಾಗಿದ್ದರೆ ಸಾಕು ಎನ್ನುವ ಸ್ವಾರ್ಥವಿದೆ. ಹೈಫೈ ಜೀವನದ ಕನಸುಗಳು ಇವೆ. ದುಡ್ಡೇ ದೊಡ್ಡದು ಎನ್ನುವ ಭ್ರಮೆ ಉಂಟು. ಎಲ್ಲಕ್ಕಿಂತ ಮುಖ್ಯವಾಗಿ ‘ಸಮಾಜ ಏನಾದರೆ ನನಗೇನು’ ಎನ್ನುವ ನಿರ್ಲಕ್ಷತನದ ಪರಮಾವದಿಯೂ ಸೇರಿಕೊಂಡು ಒಂದು ಮಾಫಿಯಾ, ಒಂದು ಹುಡುಗಿ, ಜತೆಗೊಂದಿಷ್ಟುಕ್ರಿಮಿನಲ್‌ಗಳ ಗುಂಪು ಹುಟ್ಟುಕೊಂಡು ‘ನಾನು ನಮುಡ್ಗಿ ಖಚ್‌ರ್‍ಂಗೊಂದ್ ಮಾಫಿಯಾ’ ಚಿತ್ರದ ಪಿಲ್ಲರ್‌ಗಳಾಗುತ್ತಾರೆ.
ಚಿತ್ರ: ನಾನು ನಮುಡ್ಗಿ ಖಚ್‌ರ್‍ಗೊಂದ್ ಮಾಫಿಯಾ
ತಾರಾಗಣ: ಶ್ಯಾಂಸುಂದರ್, ಶ್ರದ್ಧಾ ಬೆಣಗಿ, ಅಮರ್ ಸಾಳ್ವ, ಅಶ್ವಿನಿ, ಡಾ. ಮಹದೇವ್, ಕಿರಣ್, ಆಶಿಕಾ ಗೌಡ
ನಿರ್ದೇಶನ: ಅಮರ್ ಸಾಳ್ವ , ಚಲ
ನಿರ್ಮಾಣ: ಶ್ರೀನಿವಾಸ ಗೌಡ
ಛಾಯಾಗ್ರಾಹಣ: ಕುಮಾರ್ ಎಂ
ಸಂಗೀತ: ವಿಕ್ರಂ ವರ್ಮನ್, ಗೌತಮ್ ಶ್ರೀವಾಸ್ತವ್
ಇದರ ಜತೆಗೆ ತೀರಾ ಸಹಜ ಎನ್ನುವ ಒಂದು ಪ್ರೇಮ ಕತೆಯೂ ಇದೆ. ಎಲ್ಲ ಪ್ರೇಮ ಕತೆಗಳು ಯಶಸ್ವಿಯಾಗಬೇಕೆಂಬ ನಿಯಮ ಮೀರಿರುವುದೇ ನಿರ್ದೇಶಕನ ಹೊಸತನ. ದುಡ್ಡು ಮಾಡಲೆಂದೇ ಹುಟ್ಟಿಕೊಂಡ ಪುಂಡರ ಗುಂಪು ಸೇರಿಕೊಂಡು ಅಶ್ಲೀಲ ವಿಡಿಯೋಗಳನ್ನು ಮಾಡಿಕೊಂಡು ಇಟರ್‌ನೆಟ್‌ಗೆ ಬಿಡುವ ಮೂಲಕ ದುಡ್ಡು ಮಾಡುತ್ತಿರುತ್ತಾರೆ. ಮತ್ತೊಂದು ಕಡೆ ಹೆಣ್ಣು ಮಕ್ಕಳನ್ನು ವೇಶ್ಯವಾಟಿಕೆಗೆ ದೂಡುವ ದಂಧೆ ಬೇರೆ. ಇಂಥ ಎರಡು ಟ್ರ್ಯಾಕ್‌ಗಳಲ್ಲಿ ಸಾಗುತ್ತಿರುವ ಕತೆಯಲ್ಲಿ ಕೈಯಲ್ಲಿ ನಯಾ ಪೈಸೆಯೂ ಇಲ್ಲದ ಹುಡುಗ ಮತ್ತು ಹುಡುಗಿಯ ಪ್ರೇಮ ಕತೆ. ಈ ಹುಡುಗಿಗೆ ಹೆತ್ತವರು ನೋಡಿದ ಹುಡುಗನಿಗಿಂತ ಪ್ರೀತಿಸಿದ ಹುಡುಗನೇ ಬೇಕು. ಆ ಹುಡುಗನಿಗೆ ಈಕೆಯನ್ನು ಮನೆಯಿಂದ ಆಚೆ ಕರೆದುಕೊಂಡು ಹೋಗುವಷ್ಟುಆರ್ಥಿಕವಾಗಿ ಗಟ್ಟಿಯಾಗಿಲ್ಲ. ತನ್ನ ಪ್ರೀತಿಯನ್ನು ಉಳಿಸಿಕೊಳ್ಳಕ್ಕೆ ದುಡ್ಡು ಬೇಕು. ದುಡ್ಡಿನ ಅಗತ್ಯ ಇರುವವನು ತನಗೆ ಗೊತ್ತಿಲ್ಲದಂತೆ ಈ ವಿಡಿಯೋ ಗ್ಯಾಂಗ್‌ಗೆ ಜತೆಯಾಗುತ್ತಾನೆ. ಮುಂದೆ ಹುಡುಗಿ ಕಿಡ್ನಾಪ್ ಮತ್ತು ಹುಡುಕಾಟ, ಕ್ರೈಮ್ ಜಗತ್ತಿನ ಮುಖವಾಡಗಳು ತೆರೆದುಕೊಳ್ಳುತ್ತ ಹೋಗುತ್ತವೆ.
ಒಂದು ಕತೆಯಾಗಿ ನಿರ್ದೇಶಕರ ಯೋಚನೆ ಚೆನ್ನಾಗಿದೆ. ಆದರೆ, ಮೊಬೈಲ್ ನೆಟ್‌ವರ್ಕ್, ಸಿಸಿಟಿವಿಗಳ ಮೂಲಕ ಇಂಥ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾಲದಲ್ಲಿ ನಗರದಲ್ಲೇ ಒಂದು ಹುಡುಗಿ ಕಾಣೆಯಾಗುತ್ತಾಳೆ. ಅಪಹರಿಸಿದವರು ಎಟಿಎಂನಿಂದ ಹಣ ತೆಗೆದುಕೊಂಡಿರುವ ಮಾಹಿತಿ ಬರುತ್ತದೆ. ಜತೆಗೆ ಕಿಡ್ನಾಪ್‌ಗೆ ಒಳಗಾದ ಹುಡುಗಿಯ. ಮೊಬೈಲ್ ಆನ್ ಇದೆ. ಆದರೂ ಈ ಪ್ರಕರಣಕ್ಕೆ ಅಂತ್ಯ ಕಾಣಿಸಕ್ಕೆ ಆಗಲ್ಲ ಯಾಕೆ? ಎಂದರು ಇದು ನಾಲ್ಕು ವರ್ಷಗಳ ಹಿಂದಿನ ಸಿನಿಮಾ. ಹೀಗಾಗಿ ನಿರ್ದೇಶಕ ಹೇಳುವ ಕತೆಯ ಘಟನೆಗೆ ಈಗಿನ ಪ್ರೇಕ್ಷಕರಿಗೆ ಪರಿಹಾರ ಗೊತ್ತಾಗುತ್ತದೆ. ನಿರ್ದೇಶಕರಿಗೆ ಮಾತ್ರ ಗೊತ್ತಾಗದೆ ಒಂದೇ ಘಟನೆಯನ್ನು ಕೊನೆಯ ತನಕ ಎಳೆಯುವುದು ಚಿತ್ರದ ದೊಡ್ಡ ಕೊರತೆ. ಜತೆಗೆ ಸಂಕಲನಕಾರನ ಕತ್ತರಿ ಬೇರೆ ಅಮೆ ನಡಿಗೆಗೆ ಮೊರೆ ಹೋಗಿದೆ. ಎರಡು ಮಾಫಿಯಾ, ಎರಡು ಪ್ರೇಮ ಕತೆಗಳ ಈ ಚಿತ್ರ ಕ್ರೈಮ್ ಲೋಕದ ಮತ್ತೊಂದು ಮುಖ ನೋಡಲು ಈ ಚಿತ್ರ ನೋಡಬಹುದು.