ಮೇಘ

ರಾಜ ರವಿವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಜಯೇದ್‌, ಮಹೇಶ್‌ ನಿಜವಾಗಿಯೂ ಎಂಡೋಸಲ್ಫಾನ್‌ ಕಾಯಿಲೆಗೆ ಒಳಗಾದ ಮಕ್ಕಳನ್ನೇ ಮುಖ್ಯ ಪಾತ್ರದಲ್ಲಿ ತೋರಿಸಿದ್ದಾರೆ. ಈ ಕಾಯಿಲೆಯಿಂದಲೇ ಮನೆಯಲ್ಲಿ ಎದುರಾದ ಬಡತನ, ತಾಯಿ ದಿನಗೂಲಿ ಕೆಲಸ, ಪಾಶ್ರ್ವವಾಯುಗೆ ಒಳಗಾದ ತಂದೆ. ಹೀಗಿರುವಾಗ ಮನೆ ನಿರ್ವಹಣೆಯ ಜವಾಬ್ದಾರಿ ಈ ಇಬ್ಬರು ಸಹೋದರರ ಮೇಲೆ. ಅದಕ್ಕಾಗಿ ಚಿಂದಿ ಆಯುವ, ಮನೆಗಳಿಗೆ ಪೇಪರ್‌ ಹಾಕುತ್ತಾ, ಬೀದಿ ಬೀದಿ ಅಲೆದು ಹಾಡು, ಚಿತ್ರಬಿಡಿಸುತ್ತಾ ಸಂಪಾದನೆ. ಪುಟ್ಟಜೋಪಡಿಯ ಕೆಳಗೆ ತೆರೆಮರೆಯಲ್ಲಿರುವ ಪ್ರತಿಭೆ ಗುರುತಿಸುವವರಿಲ್ಲ. ಈ ನಡುವೆ ಕೈಲಾಗದವರು ಎನ್ನುವ ಮಾತುಗಳ ನಡುವೆ ತನ್ನಲ್ಲೇ ಹುದುಗಿದ್ದ ಪ್ರತಿಭೆಯನ್ನು ಹೊರತರಲು ಹಪಹಪಿಸುವ ಜಕಣಚಾರಿ. ಎದುರಾಗುವ ಎಲ್ಲಾ ಕಷ್ಟಗಳನ್ನು ಸಾಧಿಸುವ ಛಲ ಹೊತ್ತು ಹೇಗೆ ಮುಂದೆಬರುತ್ತಾನೆ ಎಂದು ಹೇಳಲಾಗಿದೆ. ಪ್ರತಿಭೆಗೆ ಶ್ರೀಮಂತಿಕೆ, ಹೇಗೆ ಇದ್ದೇವೆ ಎಂಬುದು ಬೇಡ, ಆತ್ಮವಿಶ್ವಾಸ, ಛಲ, ಕಲಿಯುವ ಹಂಬಲ ಇದ್ದರೆ ಸಾಕು ಎಂದು ಹೇಳಲಾಗಿದೆ.

ಚಿತ್ರ: ಜಕ್ಕಣಚಾರಿ ಅವನ ತಮ್ಮ ಶುಕ್ಲಾಚಾರಿ

ತಾರಾಗಣ: ಜಯೇದ್‌, ಮಹೇಶ್‌, ಮೂಗು ಸುರೇಶ್‌, ಗಿರಿಶ್‌ ಜಟ್ಟಿ, ಮುನಿ, ನಿನಾಸಂ ಅಶ್ವಥ್‌, ಮೀನಾ, ಪಂಕಜ

ನಿರ್ದೇಶನ: ರಾಜ ರವಿವರ್ಮಾ

ನಿರ್ಮಾಣ: ಎಚ್‌.ಸೋಮಶೇಖರ್‌

ಛಾಯಾಗ್ರಹಣ: ಸಾಮ್ರಾಟ್‌ ಎಸ್‌

ಸಂಗೀತ: ಸಿ.ಜೆ ಅನಿಲ್‌

‘ಕಣ್ಣು ಕಾಲು ಇಲ್ಲದ ನಿಯತ್ತಾಗಿ ದುಡಿದು ತಿನ್ನುವ ನಾವೇ ಹೀಗಿರುವಾಗ, ಇನ್ನು ಗಟ್ಟಿಮುಟ್ಟಗಿ ಎಲ್ಲಾ ಇದ್ದು ಅಪ್ಪ ನೆಟ್ಟಆಲದ ಮರದಿಂದ ಮಜಾ ಮಾಡುವ ನಿಮಗೆ ತಪ್ಪು ದಾರಿಗೆ ಹೋಗುವ ಬದಲು ನಿಯತ್ತಾಗಿ ದುಡಿದು ತಿನ್ನೋಕ್ಕೆ ಏನು ರೋಗ’ ಎನ್ನುವ ಶುಕ್ಲಾಚಾರಿಯ ಮಾತು ಮನಮುಟ್ಟುತ್ತದೆ. ಇಲ್ಲಿ ಶುಕ್ಲಾಚಾರಿಯ ಪಾತ್ರದಲ್ಲಿ ಮಹೇಶ್‌ ನಟನೆ ತುಂಬಾ ಸುಂದರವಾಗಿದೆ. ಚಿತ್ರದಲ್ಲಿನ ಅವನ ನೇರ ಮಾತುಗಳೇ ಪ್ರೇಕ್ಷಕನಲ್ಲಿ ತಮ್ಮೊಳಗೊಂದು ಆಲೋಚನೆ ಕರೆದೊಯ್ಯುತ್ತದೆ.

ತ್ರಿಮೂರ್ತಿಗಳ ಮಧುರ ತಾಪ‘ತ್ರಯ’!

ಎಲ್ಲರೂ ನೋಡಬಹುದಾದ ಸಿನಿಮಾ ಇದಾಗಿದ್ದು, ಅನಿಲ್‌ ಸಿ.ಜೆ ಅವರ ಸಂಗೀತ ಕತೆಗೆ ತಕ್ಕಂತೆ ಸುಂದರವಾಗಿ ಮೂಡಿಬಂದಿದೆ. ಇದು ಮಕ್ಕಳ ಕತೆ ಜೊತೆಗೆ ದಿನ ನಿತ್ಯ ನಮ್ಮ ಬದುಕಿನ ಸುತ್ತ ನಡೆಯುವ ದೊಡ್ಡವರು ನೋಡಬಹುದಾದ ಪಾತ್ರಗಳು ಇಲ್ಲಿ ಕಾಣಬಹುದು. ಮೂಗು ಸುರೇಶ್‌, ಗಿರೀಶ್‌ ಜಟ್ಟಿ, ಮುನಿ, ನಿನಾಸಂ ಅಶ್ವಥ್‌ ಪಾತ್ರಗಳು ಒಂದೊಂದು ಮೆಸೇಜ್‌ ನೀಡುತ್ತವೆ. ಒಳ್ಳೆಯತನದ ಜೊತೆಗೆ ಕೆಟ್ಟಗುಣಗಳೂ ಮನಷ್ಯನಲ್ಲಿ ಹೇಗೆ ಅಡಕವಾಗಿರುತ್ತದೆಯೋ ಅದೇ ರೀತಿ ಒಳ್ಳೆ ವ್ಯಕ್ತಿಗಳ ಜೊತೆ ಕೆಟ್ಟಮನಸ್ಸುಗಳೂ ಇಲ್ಲಿ ಕಾಣಬಹುದು. ಆದರೆ ಈ ಚಿತ್ರಕ್ಕೆ ಎಂಡೋಸಲ್ಫಾನ್‌ ಮಕ್ಕಳನ್ನೇ ಏಕೆ ಬಳಸಿಕೊಂಡಿದ್ದಾರೆ ಎನ್ನುವುದಕ್ಕೆ ನೀವು ಚಿತ್ರ ನೋಡಿಯೇ ತಿಳಿಯಬೇಕು.