ದೇಶಾದ್ರಿ ಹೊಸ್ಮನೆ

ಬಂದ ಥ್ರಿಲ್ಲರ್‌ ಜಾನರ್‌ ಸಿನಿಮಾಗಳಲ್ಲಿ ಇದು ಹೊಸತಾಗಿದೆ. ಆದರೆ, ಥ್ರಿಲ್ಲರ್‌ ಜಾನರ್‌ ಕತೆಗೆ ಮುಖ್ಯವಾಗಿ ಇರಬೇಕಾದ ಟ್ವಿಸ್ಟ್‌ ಆ್ಯಂಡ್‌ ಟರ್ನ್‌ನ ಕೊರತೆ. ಪ್ರಥಮಾರ್ಧ ಸಾಧಾರಣ. ನಂತರದ ಭಾಗ ಕುತೂಹಲಕಾರಿ. ಅದೇ ಈ ಚಿತ್ರಕತೆಯ ಜೀವಾಳ. ಓದು, ಕೆಲಸ ಅಂತ ಬ್ಯುಸಿ ಆಗಿದ್ದ ಐವರು ಗೆಳೆಯರು ಬೆಂಗಳೂರಿನಿಂದ ಕೇರಳಕ್ಕೆ ಪ್ರವಾಸ ಹೋಗುತ್ತಾರೆ. ಆ ಪ್ರವಾಸದಲ್ಲಿ ಅವರಿಗೆ ಭಯಾನಕ ಘಟನೆಗಳ ಅನುಭವ ಆಗುತ್ತವೆ. ಆ ಘಟನೆಗಳ ಹಿಂದೆ ಅಘೋರಿಯ ಕೈವಾಡ ಇರುತ್ತದೆ. ಅಲ್ಲಿಂದ ಅಸಲಿ ಸಿನಿಮಾ ಶುರು ಆಗುತ್ತದೆ. ಉಳಿದಿದ್ದು ಅಘೋರಿಗೂ, ಪ್ರವಾಸ ಹೋದ ಹುಡುಗರಿಗೂ ಕನೆಕ್ಷನ್‌ ಏನು ಎನ್ನುವ ಕುತೂಹಲ. ಅನೇಕ ಕಡೆ ಕತೆಯ ವೇಗ ಚುರುಕಾಗಬೇಕಿತ್ತು, ಅನಗತ್ಯ ದೃಶ್ಯಗಳಿಗೆ ಕಡಿವಾಣ ಹಾಕಬಹುದಿತ್ತು, ಅಘೋರಿ ಎಂಟ್ರಿಗೆ ಇನ್ನಷ್ಟುಭಯಾನಕತೆ ತುಂಬಬೇಕಿತ್ತು ಎನ್ನುವ ಭಾವನೆ ಪ್ರೇಕ್ಷಕರಲ್ಲಿ ಹುಟ್ಟಿಕೊಳ್ಳುತ್ತದೆ. ಆದರೂ ಸಿನಿಮಾ ಹೊಸತಾದ ಕತೆಯೊಂದಿಗೆ ನೋಡಿಸುತ್ತೆ, ರಂಜಿಸುತ್ತೆ ಎನ್ನುವುದಷ್ಟೇ ಸಮಾಧಾನ.

ಚಿತ್ರ ವಿಮರ್ಶೆ: ಯಾನ

ಚಿತ್ರಕ್ಕೆ ಪಾತ್ರವರ್ಗವೂ ಪ್ಲಸ್‌ ಆಗಿದೆ. ಬಿ. ಜಯಶ್ರೀ, ಸುಧಾರಾಣಿ, ದಿಲೀಪ್‌ ರಾಜ್‌ ಅವರಂತಹ ಅನುಭವಿ ನಟರು, ತಮ್ಮ ಪಾತ್ರಗಳಲ್ಲಿ ಸಲೀಸಾಗಿ ಅಭಿನಯಿಸಿದ್ದಾರೆ. ಅವರ ಜತೆಗೆ ಹೊಸಬರು ಕೈಯಲ್ಲಾದಷ್ಟುಪ್ರಯತ್ನ ಹಾಕಿದ್ದಾರೆ. . ವಿಶೇಷವಾಗಿ ಈ ಸಿನಿಮಾ ಗಮನ ಸೆಳೆಯುವುದು ಸುಧಾರಾಣಿ ಮತ್ತು ದಿಲೀಪ್‌ ರಾಜ್‌ ಪಾತ್ರಗಳ ಮೂಲಕ. ಚಿತ್ರದ ಪ್ರಧಾನ ಪಾತ್ರವೇ ದಿಲೀಪ್‌ ರಾಜ್‌ ಅವರದ್ದು. ಅವರೇ ಚಿತ್ರ ಕಲಾವಿದ ಉತ್ತಮ್‌ ವಮ್‌ರ್‍. ಆತನ ಮಗ ಚಿತ್ರದ ಕಥಾ ನಾಯಕ ಗೌತಮ್‌. ಆ ಪಾತ್ರದಲ್ಲಿ ಸುಜಿತ್‌ ರಾಠೋಡ್‌ ಅಭಿನಯ ಚೆನ್ನಾಗಿದೆ. ಥ್ರಿಲ್ಲರ್‌ ಜಾನರ್‌ ಕತೆಗೆ ತಕ್ಕಂತೆ ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿ ಬಂದಿದೆ. ಛಾಯಾಗ್ರಹಣ ಕೂಡ ಅಡ್ಡಿ ಇಲ್ಲ. ಥ್ರಿಲ್ಲರ್‌ ಸಿನಿಮಾ ಇಷ್ಟಪಡುವವರಿಗೆ ಇದು ಮೆಚ್ಚುಗೆ ಆಗುವಂತಹ ಸಿನಿಮಾವಂತೂ ಹೌದು.

ತಾರಾಗಣ: ಸುಜಿತ್‌ ರಾಠೋಡ್‌, ಸುಧಾರಾಣಿ, ಬಿ. ಜಯಶ್ರೀ, ದಿಲೀಪ್‌ ರಾಜ್‌, ಸುಕ್ತಾ, ಮೇಘಾ,

ನಿರ್ದೇಶನ: ಯಶಸ್ವಿ ಬಾಲಾದಿತ್ಯ