ಈಹಿಂದೆ ‘ಶುದ್ದಿ’ ಮೂಲಕ ಗಮನ ಸೆಳೆದವರು ನಿರ್ದೇಶಕ ಆದರ್ಶ್ ಈಶ್ವರಪ್ಪ. ಮೊದಲ ಹೆಜ್ಜೆಯಲ್ಲೇ ಮಹಿಳಾ ಪ್ರಧಾನ ಚಿತ್ರದ ಮೂಲಕ ಗಮನ ಸೆಳೆದವರು. ಈಗ ಅವರು ಸದ್ದಿಲ್ಲದೆ ಮಾಡುತ್ತಿರುವ ‘ಭಿನ್ನ’ ಕೂಡ ಮಹಿಳಾ ಪ್ರಧಾನ ಚಿತ್ರವೇ.
ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ ‘ಭಿನ್ನ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ನಟಿ ಪಾಯಲ್ ರಾಧಾಕೃಷ್ಣ ಅವರನ್ನುಒಳಗೊಂಡ ಚಿತ್ರದ ಫೋಟೋಗಳು ಒಂದಿಷ್ಟು ಕುತೂಹಲ ಮೂಡಿಸುತ್ತಿವೆ. ಎರಡನೇ ಸಲವೂ ಮಹಿಳಾ ಪ್ರಧಾನ ಚಿತ್ರ ಮಾಡುವುದಕ್ಕೆ ಕಾರಣ ಮತ್ತು ಪ್ರೇರಣೆಯಾಗಿದ್ದು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ಶರಪಂಜರ’ ಸಿನಿಮಾ. ‘ಶರಪಂಜರ ಸಿನಿಮಾವನ್ನು ಹಲವು ಬಾರಿ ನೋಡಿದ್ದೇನೆ. ಪ್ರತಿ ಬಾರಿಯೂ ಆ ಸಿನಿಮಾದ ಕಾವೇರಿ ಪಾತ್ರ ನನ್ನನ್ನು ಕಾಡಿದೆ. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ‘ಭಿನ್ನ’ ಚಿತ್ರಕ್ಕೆ ಕತೆ ಮಾಡಿದೆ. ಮಹಿಳಾ ಪ್ರಧಾನ ಎನ್ನುವ ಜತೆಗೆ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಹೆಣ್ಣು ಈ ಮೂರು ಚಿತ್ರದ ಪ್ರಮುಖ ಅಂಶಗಳು. ಹಾಗಂತ ‘ಶರಪಂಜರ’ ಚಿತ್ರದ ಆ ಪಾತ್ರವನ್ನು ನಕಲು ಮಾಡಿಲ್ಲ.
ಕಾವೇರಿ ಪಾತ್ರಕ್ಕೆ ಸಕಾರಾತ್ಮಕ ಅಂಶಗಳನ್ನು ಸೇರಿಸಿಕೊಂಡು ಹೊಸ ಬಗೆಯಲ್ಲಿ ಯೋಚಿಸಿದ್ದೇನೆ. ಈ ಕಾರಣಕ್ಕೆ ‘ಭಿನ್ನ’ ಹೆಸರಿಗೆ ತಕ್ಕಂತೆ ಹೊಸ ಅನುಭವವನ್ನು ನೀಡಲಿದೆ’ ಎಂಬುದು ನಿರ್ದೇಶಕರ ಮಾತು. ಈ ಚಿತ್ರದಲ್ಲಿ ಪಾಯಲ್ ರಾಧಾಕೃಷ್ಣ, ಶಶಾಂಕ್ ಪುರುಷೋತ್ತಮ್, ಸಿದ್ಧಾರ್ಥ್ ಮಾಧ್ಯಮಿಕ, ಸೌಮ್ಯ ನಟಿಸಿದ್ದಾರೆ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 12, 2019, 11:10 AM IST