ಬಿಗ್ ಬಾಸ್ ಕನ್ನಡದ 5ನೇ ಸೀಸನ್‌ ವಿಜೇತರಾಗಿ ಗಾಯಕ, ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಹೊರ ಹೊಮ್ಮಿದ್ದಾರೆ. ಮೊದಲಿನಿಂದಲೂ ಸ್ಪರ್ಧೆಯಲ್ಲಿ ಭರವಸೆ ಮೂಡಿಸಿದ್ದ ಚಂದನ್, ಅಂತಿಮ ಹಣಾಯಲ್ಲಿಯೂ ಜಯದ ಪಟ್ಟವನ್ನು ದಕ್ಕಿಸಿಕೊಂಡಿದ್ದಾರೆ. 

ಬಿಗ್ ಬಾಸ್ ಕನ್ನಡದ 5ನೇ ಸೀಸನ್‌ ವಿಜೇತರಾಗಿ ಗಾಯಕ, ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಹೊರ ಹೊಮ್ಮಿದ್ದಾರೆ. ಮೊದಲಿನಿಂದಲೂ ಸ್ಪರ್ಧೆಯಲ್ಲಿ ಭರವಸೆ ಮೂಡಿಸಿದ್ದ ಚಂದನ್, ಅಂತಿಮ ಹಣಾಯಲ್ಲಿಯೂ ಜಯದ ಪಟ್ಟವನ್ನು ದಕ್ಕಿಸಿಕೊಂಡಿದ್ದಾರೆ. 

ಅಂತಿಮವಾಗಿ ಜೆಕೆ ಹಾಗೂ ಚಂದನ್ ಶೆಟ್ಟಿ ನಡುವೆ ಸ್ಪರ್ಧೆ ಏರ್ಪಡಲಿದೆ ಎಂಬ ವೀಕ್ಷಕರ ನಂಬಿಕೆ ಸುಳ್ಳಾಗಿದ್ದು, ಜೆಕೆ ಮೂರನೇ ಸ್ಥಾನ ಪಡೆದುಕೊಂಡಿದ್ದು ಎಲ್ಲರಿಗೂ ಆಶ್ಚರ್ಯ ತಂದಿದೆ. ಮೊದಲಿನಿಂದಲೂ ಸ್ಪರ್ಧೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಜೆಕೆಯೂ ಗೆಲ್ಲಬಹುದೆಂದು ಜನರು ಭಾವಿಸಿದ್ದರು. ಅದೂ ಬಿಗ್ ಬಾಸ್ ನಿರೂಪಕ ಸುದೀಪ್‌ಗೆ ಜೆಕೆ ಆತ್ಮೀಯವಾಗಿರುವುದು, ಜೆಕೆ ಗೆಲುವಿಗೆ ನೆರವಾಗಬಹುದೆಂದು ಭಾವಿಸಲಾಗಿತ್ತು. 

ಬಹುಶಃ ಬಿಗ್‌ಬಾಸ್ ಆರಂಭವಾಗುವುದಕ್ಕೂ ಸ್ವಲ್ಪ ದಿನ ಮುಂಚೆ, ಜಯರಾಮ್ ಕಾರ್ತಿಕ್, ಸ್ಯಾಂಡಲ್‌ವುಡ್‌ನಲ್ಲಿ ಅವಕಾಶ ಸಿಗದಿದ್ದಕ್ಕೆ ಬೇಸರಗೊಂಡು, 'ನಾನು ಬಾಲಿವುಡ್ ಎಂಬ ಸಾಗರದಲ್ಲಿ ಈಜಿದವನು..' ಎಂಬರ್ಥದಲ್ಲಿ ಮಾತನಾಡಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜೆಕೆ ವಿಪರೀತ ಟೀಕೆಗಳಿಗೆ ಗುರಿಯಾಗಿದ್ದರು. ನಂತರ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದರೂ, ಕನ್ನಡಿಗರಿಗೆ ಎಲ್ಲಿಯೋ ಜೆಕೆ ಬಗ್ಗೆ ತುಸು ತಾತ್ಸಾರ ಮೂಡಿದ್ದು ಒಂದಲ್ಲ ಒಂದು ರೀತಿಯಲ್ಲಿಯೇ ಅಭಿವ್ಯಕ್ತಗೊಳ್ಳುತ್ತಿತ್ತು.

ಆದರೆ, ಚಂದನ್ ಕನ್ನಡಿಭಿಮಾನ ಹುಟ್ಟಿಸುವಂಥ ಹಾಡುಗಳನ್ನು ರಚಿಸಿ, ಹಾಡಿ ಜನರಲ್ಲಿ ಹೆಚ್ಚು ಕನ್ನಡಾಭಿಮಾನ ಹುಟ್ಟುವಂತೆ ಮಾಡಿದವರು. ಅದರಲ್ಲಿಯೂ 'ಬೆಂಗಳೂರು, ಬೆಂಗಳೂರು ನಿಮಗೆ ಇಷ್ಟವಿಲ್ವಾ, ಬಿಟ್ಟು ಹೋಯ್ತಾ ಇರಿ....' ಎನ್ನುವ ಹಾಡಿನಿಂದಲೇ ಜನಪ್ರಿಯತೆ ಪಡೆದವರು. ಜನರ ಭಾವನೆಗಳನ್ನು ಅರಳಿಸಿ, ಹೊಸ ರೀತಿಯಲ್ಲಿ ಕನ್ನಡಿಗರು ಯೋಚಿಸುವಂತೆ ಮಾಡಿದ ಇಂಥ ಹಾಡುಗಳಿಂದಲೇ ಚಂದನ್ ಅಪಾರ ಜನರ ವಿಶ್ವಾಸ ಗಳಿಸಿಕೊಂಡವರು. ಇದೇ ಕನ್ನಡಾಭಿಮಾನ, ಕನ್ನಡ ಪ್ರೇಮವೇ ಬಹುಶಃ ಚಂದನ್ ಪರ ಕೆಲಸ ಮಾಡಿದ್ದು. ಇದರಿಂದಲೇ ಚಂದನ್ ಪ್ರಸಿದ್ಧ ರಿಯಾಲಿಟ ಶೋನ ವಿಜಯಿಯಾಗಿದ್ದಾರೆ.

ಯಾರಿಗೆ ಎಷ್ಟು ವೋಟು?


ಚಂದನ್-9.13 ಲಕ್ಷ
ದಿವಾಕರ್-8.29 ಲಕ್ಷ
ಜೆಕೆ- 7.83 ಲಕ್ಷ