ಬೆಂಗಳೂರು [ಫೆ.01]  ‘ಇದು ಯಾರು? ನನ್ನನ್ನು ಕೆಟ್ಟದಾಗಿ ಭಾವಿಸಬೇಡಿ ಆದರೂ ನನಗೆ ಕುತೂಹಲ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’.

ನಾನು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನೀವು ನನ್ನ ಇಂಡಸ್ಟ್ರಿ ಬಗ್ಗೆ ಬರೆದಿದ್ದೀರಾ. ಕನ್ನಡ ಸಿನಿಮಾ ಉದ್ಯಮ ನನ್ನ ಬಗ್ಗೆ ಸಿಟ್ಟಾಗಿದೆ ಎಂದು ಹೇಳಿದ್ದೀರಾ.. ಆದರೆ ಇದನ್ನು ನಂಬಲು ಸಾಧ್ಯವಿಲ್ಲ. ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರ ಕೊಡಿ ಎಂದು ರಶ್ಮಿಕಾ ಕೇಳಿದ್ದಾರೆ.

ರಕ್ಷಿತ್ ಮತ್ತು ರಶ್ಮಿಕಾ ಬ್ರೇಕ್ ಅಪ್‌ಗೆ ಅಸಲಿ ಕಾರಣ ಏನು?

ಅಷ್ಟಕ್ಕೂ ಆಗಿದ್ದೇನು? ರಶ್ಮಿಕಾ ಮಂದಣ್ಣ ತೆಲಗು ಉದ್ಯಮದಲ್ಲಿ ಹೆಸರು ಮಾಡುತ್ತಿದ್ದಾರೆ. ಆದರೆ ಕನ್ನಡದ ಕೆಲ ಚಿತ್ರಗಳನ್ನು ಕಡೆಗಣಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕನ್ನಡ ಚಿತ್ರೋದ್ಯಮ ಸಹ ಅವರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಇದನ್ನು ರಶ್ಮಿಕಾ ಪ್ರಶ್ನೆ ಮಾಡಿದ್ದಾರೆ.