ಸಾಯಿ ಪಲ್ಲವಿ ಹಾಗೂ ಧನುಷ್ ಅಭಿನಯದ ತಮಿಳು ಚಿತ್ರ 'ಮಾರಿ-2' ಹಿಟ್ ಆಗಲು ರೌಡಿ ಬೇಬಿ ಸಾಂಗ್ ಕಾರಣ ಅಂದರೆ ತಪ್ಪಾಗಲಿಕ್ಕಿಲ್ಲ. ಈಗ ಅದೇ ಹಿಟ್ ಸಾಂಗ್‌ಗೆ ಶಿವಣ್ಣ ಹಾಗೂ ಶ್ರದ್ಧಾ ಹೆಜ್ಜೆ ಹಾಕುತ್ತಿದ್ದಾರೆ.

‘ರೌಡಿ ಬೇಬಿ’ ಹಾಡು ಕನ್ನಡದಲ್ಲಿ ಪೊಲೀಸ್ ಬೇಬಿ ಎಂಬ ಹಾಡಾಗಿದೆ. ಈಗಾಗಲೇ ಇದರ ಸಣ್ಣ ಬೀಟ್ ಹೊರ ಬಂದಿದ್ದು ಎಲ್ಲರೂ ಅರೇ ಇದು ರೌಡಿ ಬೇಬಿ ಸಾಂಗ್ ಅಲ್ವಾ? ಅಂತ ಕನ್ಫ್ಯೂಸ್ ಆಗಿದ್ದಾರೆ.

ಶಿವಣ್ಣ ’ರುಸ್ತುಂ’ ಲುಕ್‌ಗೆ ಪುನೀತ್ ಫುಲ್ ಬೋಲ್ಡ್!

ಅನೂಪ್ ಸೀಳಿನ್ ಸಂಗೀತದ ಈ ಹಾಡು ನಾಳೆ ಅಂದರೆ ಮೇ 14 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಜೆ 5 ಗಂಟೆಗೆ ರಿಲೀಸ್ ಆಗುತ್ತಿದೆ. ಇನ್ನು ಜಯಣ್ಣ ಕಂಬೈನ್ಸ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು ಸಾಂಗ್ ಮೇಕಿಂಗ್ ಹಾಗೂ ಟ್ರೈಲರ್ ನೋಡಿದರೆ ಹ್ಯಾಟ್ರಿಕ್‌ ಆಗೋದು ಗ್ಯಾರಂಟಿ.