ಚಿತ್ರತಂಡ ಅಂದುಕೊಂಡಂತಾದರೆ ಮೇ ತಿಂಗಳಲ್ಲಿ ಈ ಚಿತ್ರ ತೆರೆಗೆ ಬರುವುದು ಖಚಿತ. ಸದ್ಯಕ್ಕೀಗ ಚಿತ್ರತಂಡವು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಚಿತ್ರದ ಒಂದು ಡ್ಯುಯೆಟ್ ಸಾಂಗ್ ಲಾಂಚ್ ಮಾಡಿದೆ. ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಹಿತಿ ಕೆ. ಕಲ್ಯಾಣ್ ರಚನೆಯ ‘ಒಮ್ಮೆ ನನ್ನವಳು ನಕ್ಕರೆ ಸಾಕು...’ಎನ್ನುವ ಸಾಲುಗಳ ಯುಗಳ ಗೀತೆಗೆ ಯುವ ಪ್ರತಿಭೆ ಹರ್ಷ ವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗಾಯಕರಾದ ಟಿಪ್ಪು ಹಾಗೂ ಸುಪ್ರಿಯಾ ಲೋಹಿತ್ ಧ್ವನಿ ನೀಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋವನ್ನು ಶ್ರೀಮುರುಳಿ ಬಿಡುಗಡೆ ಮಾಡಿದರು. ಈ ಡ್ಯುಯೆಟ್ ಗೀತೆಗೆ ಅಪಾರ ಮೆಚ್ಚುಗೆ ಹೇಳಿರುವ ಅವರು, ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು. ‘ತಂಡದ ಶ್ರಮ ಸಾರ್ಥಕವಾಗ ಬೇಕಾದರೆ, ಚಿತ್ರಕ್ಕೆ ಕನ್ನಡಿಗರ ಬೆಂಬಲ ಸಿಗಬೇಕಿದೆ’ ಎಂದರು.