ಸೂರ್ಯ ಎಂಬ ಹುಡುಗನ ಸುತ್ತಾ ಸುತ್ತುವ ಕಲರ್‌ಫುಲ್ ಸ್ಟೋರಿ ಈ ಮಳೆಬಲ್ಲು. ತಾನು ಪ್ರೀತಿಸುವ ಹುಡುಗಿ ಮಳೆ ಬಿಲ್ಲಿನಂತೆ ಇರಬೇಕು ಎನ್ನುವುದು ಅವನ ಆಸೆ. ಆದರೆ ವಿಧಿಯಾಟ ಅವನಿಗೆ ಮತ್ತೊಂದನೇ ರೆಡಿ ಮಾಡಿತ್ತು.

2010-2011ರಲ್ಲಿ ನಡೆದ ನೈಜ ಘಟನೆಯಾದ ಈ ಚಿತ್ರ ಈಗಿನ ಯೂಥ್‌ಗೆ ಇಷ್ಟವಾಗುವುದಂತೂ ಗ್ಯಾರಂಟಿ, ಈ ಲವ್‌ಸ್ಟೋರಿ ಕೊಂಚ ಟ್ವಿಸ್ಟ್ ಸೇರಿಕೊಂಡು ಚಿತ್ರಕ್ಕೆ ಹೊಸ ರೂಪವೇ ನೀಡುತ್ತದೆ. ಚಿತ್ರದ ನಿರ್ದೇಶಕ ಸಾಯಿಪ್ರಕಾಶ್ ಹಾಗೂ ಫಿಲ್ಮ್ ಛೇಂಬರ್ ಅಧ್ಯಕ್ಷರಾದ ಚೆನ್ನೇಗೌಡರು ಈ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇನ್ನು ಸಿನಿಮಾದಲ್ಲಿ ಕೆಲವೊಂದು ಪಂಚ್ ಡೈಲಾಗ್‌ಗಳಿದ್ದು, ಜನರ ಮನಸ್ಸು ಗೆದ್ದಿದೆ, 'ಸ್ವಾಭಿಮಾನಿ ಹುಡುಗನ್ನೊಬ್ಬ ಕನ್ನಡ ಅಭಿಮಾನವನ್ನು ಎತ್ತಿಡಿಯುವುದು ಈ ಸೂರ್ಯ' ಎಂದು ಹಾಗೂ 'ಯಾವ ಮಣ್ಣಲ್ಲಿ ಕಸ್ತೂರಿಯ ಕಂಪು ಇರುತ್ತೂ ಅಂತ ಊರನ ಕರುನಾಡು ಅಂತಾರೆ' ಎಂದು ಭಾಷಾಭಿಮಾನವನ್ನು ಎತ್ತಿಡಿದಿದ್ದಾರೆ.

ಅನನ್ಯ ಸಿನಿ ಎಂಟರ್‌ಪ್ರೈಸಸ್ ರವರ ಪ್ರಥಮ ಕಾಣಿಕೆಯಾಗಿ 'ಮಳೆ ಬಿಲ್ಲು' ಚಿತ್ರ ಮೂಡಿ ಬರುತ್ತಿದೆ.