ಮೊದಲೆರಡು ಟೀಸರ್ ಮೂಲಕ ದರ್ಶನ್-ದುರ್ಯೋಧನ ಹಾಗೂ ನಿಖಿಲ್-ಅಭಿಮನ್ಯು ಎಂದು ಮಾತ್ರ ತಿಳಿದಿತ್ತು. ಆದರೆ ಈಗ ಇನ್ನುಳಿದ ಪಾತ್ರಗಳು ಯಾರೆಂದು ತಿಳಿದಿದೆ. ಪಾತ್ರ ಪರಿಚಯ ಇಲ್ಲಿದೆ.

- ರವಿಚಂದ್ರನ್ (ಸಾರಥಿಯಾಗಿ ಕೃಷ್ಣ)

- ಅರ್ಜುನ್ ಸರ್ಜಾ( ಕರ್ಣ)

- ಅಂಬರೀಶ್ (ಭೀಷ್ಮ)

- ರವಿಶಂಕರ್ (ಶಕುನಿ)

- ಭಾರತಿ ವಿಷ್ಣುವರ್ಧನ್ (ಕುಂತಿ)

- ಶಶಿಕುಮಾರ್ (ಧರ್ಮರಾಯ)

ಈ ಚಿತ್ರಕ್ಕೆ ನಾಗಣ್ಣ ಆ್ಯಕ್ಷನ್ ಕಟ್ ಹೇಳಿದ್ದು ಮುನಿರತ್ನ ನಿರ್ಮಾಣ ಮಾಡಿದ್ದಾರೆ. ಇನ್ನು ಚಿತ್ರವನ್ನು ಅದ್ಧೂರಿಯಾಗಿ ಆಡಿಯೋ ರಿಲೀಸ್ ಮಾಡುವುದಾಗಿ ಚಿತ್ರತಂಡ ನಿರ್ಧಾರ ಮಾಡಿದ್ದು ಸಿನಿಮಾ ವರಮಹಾಲಕ್ಷ್ಮಿ ಹಬ್ಬದಂದು ರಿಲೀಸ್ ಆಗಲಿದೆ.