ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಗುರುದತ್ತ್ ಗಾಣಿಗ ನಿರ್ದೇಶಿಸುತ್ತಿದ್ದಾರೆ. ಇವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುದೀಪ್ ಕಾಂಬಿನೇಷನ್'ನಲ್ಲಿ ಸೆಟ್ಟೇರಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರಕ್ಕೆ ಶ್ರುತಿ ಹರಿಹರನ್ ನಾಯಕಿಯಾ? ಹೀಗೊಂದು ಸುದ್ದಿ ಗಾಂಧೀನಗರದಲ್ಲಿ ಅಡ್ಡಾಡುತ್ತಿದೆ. ಅದಕ್ಕೆ ಕಾರಣ ಚಿತ್ರತಂಡ ಈಗಾಗಲೇ ಶ್ರುತಿ ಹರಿಹರನ್ ಅವರನ್ನು ಭೇಟಿ ಮಾಡಿ ಚಿತ್ರ ಕುರಿತು ಮಾತನಾಡಿರುವುದು. ಶ್ರುತಿ ಹರಿಹರನ್ ಅವರನ್ನು ಕೇಳಿದರೆ ‘ನಾನೇ ಅಂಬಿ ನಿಂಗ್ ವಯಸ್ಸಾಯ್ತೋ’ಚಿತ್ರಕ್ಕೆ ನಾಯಕಿ ಎನ್ನುವ ಸುದ್ದಿ ಬರುತ್ತಿದೆ. ಆದರೆ, ನನಗೆ ಚಿತ್ರತಂಡ ಇದುವರೆಗೂ ಅಧಿಕೃತವಾಗಿ ಹೇಳಿಲ್ಲ. ಮಾತನಾಡಿಕೊಂಡು ಹೋಗಿರುವುದು ನಿಜ. ಮಿಕ್ಕ ಸುದ್ದಿ ಗೊತ್ತಿಲ್ಲ’ ಎನ್ನುತ್ತಾರೆ.
ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಗುರುದತ್ತ್ ಗಾಣಿಗ ನಿರ್ದೇಶಿಸುತ್ತಿದ್ದಾರೆ. ಇವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ತಮಿಳಿನ ‘ಪವರ್ ಪಾಂಡಿ’ ಚಿತ್ರದ ರೀಮೇಕ್ ಆಗಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಹಿರಿಯ ನಟ ಅಂಬರೀಶ್ ಅವರೇ ನಾಯಕ. ಅಂಬರೀಶ್ ಅವರ ತಾರುಣ್ಯದ ಪಾತ್ರದಲ್ಲಿ ಸುದೀಪ್ ನಟಿಸಲಿ ದ್ದಾರೆ. ಆ ಪಾತ್ರದ ಜೋಡಿಯಾಗಿ ಅಭಿನಯಿಸಲು ಶ್ರುತಿ ಹರಿಹರನ್ ಆಯ್ಕೆಯಾಗಿದ್ದಾರೆ ಎಂಬುದು ಸದ್ಯದ ಸುದ್ದಿ. ಇದೀಗ ಶ್ರುತಿ ಹರಿಹರನ್ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ.

