ರಿಷಬ್ ಶೆಟ್ಟಿ ಸಿನಿಮಾವೆಂದರೆ ಅಲ್ಲಿ ಏನೋ ಒಂದು ವಿಶೇಷವಿರುತ್ತದೆ. ಕ್ರಿಯೆಟಿವಿಟಿ ಇರುತ್ತದೆ. ಹೊಸತನ ಇರುತ್ತದೆ ಎಂಬ ಟ್ರೆಂಡನ್ನು ಹುಟ್ಟು ಹಾಕಿದ ಅಪರೂಪದ ನಿರ್ದೇಶಕ. ಸರ್ಕಾರಿ ಶಾಲೆ ಕಾಸರಗೋಡು ಡೈರಕ್ಟರ್ ಕ್ಯಾಪ್ ಬಿಟ್ಟು ಬೆಲ್ ಬಾಟಂನಲ್ಲಿ ನಾಯಕನಾಗಿ ನಟಿಸಿದ್ದರು. ಇದೀಗ ಮತ್ತೆ ನಿರ್ದೇಶನಕ್ಕೆ ವಾಪಸ್ಸಾಗಿದ್ದು ‘ರುದ್ರಪ್ರಯಾಗ’ ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ. 

‘ರುದ್ರಪ್ರಯಾಗ‘ ಸಿನಿಮಾಗಾಗಿ ರಿಷಬ್ ಶೆಟ್ಟಿ ಹೊಸ ಪ್ರತಿಭೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಲಾವಿದರು ಬೇಕಾಗಿದ್ದಾರೆ. ನಿಮಗೆ ಈ ಕೆಳಗಿನ ಅರ್ಹತೆಗಳಿದ್ದರೆ, ಆಸಕ್ತಿ ಇದ್ದರೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ. 

ರುದ್ರಪ್ರಯಾಗ ಟೈಟಲ್ಲೇ ಡಿಫರೆಂಟಾಗಿದೆ. ಇದು ಉತ್ತರ ಖಂಡ ರಾಜ್ಯದ ಒಂದು ಜಿಲ್ಲಾ ಕೇಂದ್ರ. ಅಲಕಾನಂದ ಹಾಗೂ ಮಂದಾಕಿನಿ ನದಿಗಳ ಸಂಗಮ. ರುದ್ರ ಪ್ರಯಾಗ ಹಿಮಾಲಯದ ಪವಿತ್ರ ನದಿಗಳ 5 ಸಂಗಮ ಕ್ಷೇತ್ರಗಳ ಪೈಕಿ ಒಂದು. 

ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಸುಮಾರು 425 ಕ್ಕೂ ಹೆಚ್ಚು ಜನರನ್ನು ಕೊಂದಿತ್ತೆಂದು ಹೇಳಲಾದ ರುದ್ರಪ್ರಯಾಗ ನರಭಕ್ಷಕ ಎಂದೇ ಖ್ಯಾತಿ ಹೊಂದಿದ ಒಂದು ಚಿರತೆ ಬಗ್ಗೆ ಇಂಗ್ಲೀಷಿನಲ್ಲಿ ಬಂದ Man Eating leopard of Rudraprayag ಎಂಬ ರೋಚಕ ಕತೆಯನ್ನು ಅನುವಾದಿಸಿ ರುದ್ರಪ್ರಯಾಗದ ಭಯಾನಕ ನರಭಕ್ಷಕ ಎನ್ನುವ ಹೆಸರಿನ ಪುಸ್ತಕವನ್ನು ಕೆ ಪಿ ಪೂರ್ಣಚಂದ್ರ ತೇಜಸ್ವಿ ಬರೆದಿದ್ದಾರೆ. 

ಒಟ್ಟಿನಲ್ಲಿ ಈ ಶೀರ್ಷಿಕೆ ಹಿಂದಿನ ಕುತೂಹಲವನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ ರಿಷಬ್ ಶೆಟ್ರು!