ಬಿಗ್'ಬಾಸ್'ನಲ್ಲಿ ಇವರೆಲ್ಲ ಇರ್ತಾರೆ ?

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಶೋ ಸ್ಟಾರ್ಟ್​ ಆಗೋದಿಕ್ಕೆ ಡೇಟ್ ಫಿಕ್ಸ್ ಆಗಿದೆ. ಅಕ್ಟೊಬರ್ 15ರಿಂದ ಶೋ ಶುರುವಾಗುತ್ತೆ ಸ್ವಾಮಿ ಎನ್ನುತ್ತಿದ್ದಾರೆ ಕಾರ್ಯಕ್ರಮ ಮುಖ್ಯಸ್ಥರು.

Add Asianetnews Kannada as a Preferred SourcegooglePreferred

ಈ ಬಿಗ್ ಬಾಸ್ ಸೀಸನ್ 5ರಲ್ಲಿ, ಯಾರೆಲ್ಲಾ ಸೆಲೆಬ್ರಿಟಿಗಳು ಇರ್ತಾರೆ ಅನ್ನೋದು ರಿವೀಲ್ ಆಗಿದ್ದು,ಇಷ್ಟಕಾಮ್ಯ ಚಿತ್ರದ ನಾಯಕಿ ಕಾವ್ಯಾಶೆಟ್ಟಿ, ನಟ ಕೋಮಲ್, ನಟಿ ತಾರಾ, ನಟ ಸುನಿಲ್ ರಾವ್, ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್, ನಟ ದಿಗಂತ್, ಹಾಸ್ಯ ನಟ ರಾಜು ತಾಳಿಕೋಟೆ, ಒಗ್ಗರಣೆ ಡಬ್ಬಿ ಕಾರ್ಯಕ್ರಮ ನಿರೂಪಕ ಮುರಳಿ ಸೇರಿದಂತೆ ಹಲವು ಗಣ್ಯರ ಹೆಸರುಗಳು ಕೇಳಿಬರುತ್ತಿವೆ.

ಒಟ್ಟು 16 ಮಂದಿ ಸ್ಪರ್ಧಿಗಳ ಪೈಕಿ 7 ಅಥವಾ 8 ಮಂದಿ ಸ್ಪರ್ಧಿಗಳು ಸೆಲೆಬ್ರಿಟಿಗಳಾದರೆ. ಉಳಿದ 7 ಅಥವಾ 8 ಮಂದಿ ಜನಸಾಮಾನ್ಯರು ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿರಲಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಬಿಗ್'ಹೌಸ್'ನಲ್ಲಿ ಈ ಸ್ಪರ್ಧಿಗಳ 100 ದಿನಗಳ ಸಂಸಾರ ಶುರುವಾಗಲಿದೆ.