’ನಾಗಮಂಡಲ’ ಚಿತ್ರ ’ಕಂಬದ ಮ್ಯಾಲಿನ ಬೊಂಬೆಯೇ.... ಹಾಡು ಕೇಳಿದಾಕ್ಷಣ ಇವರ ಅಭಿನಯವೇ ಕಣ್ಣ ಮುಂದೆ ಬಂದಂತಾಗುತ್ತದೆ. ಅಂತಹ ಅದ್ಭುತ ನಟಿ ವಿಜಯಲಕ್ಷ್ಮೀ ಸಂಕಷ್ಟದಲ್ಲಿದ್ದಾರೆ.

 

ಗುರುವಾರ ಸಂಜೆ ತ್ರೀವ ಆನಾರೋಗ್ಯಗೊಂಡು ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರ ಹಾಗೂ ಹೈ ಬೀಪಿ ಹೆಚ್ಚಾಗಿದ್ದು ಸಿಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

‘ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಅವರ ಚಿಕಿತ್ಸೆಗೆಂದು ಖರ್ಚು ಮಾಡಿದ್ದೇವೆ. ವಿಜಯಲಕ್ಷ್ಮಿ ಅನಾರೋಗ್ಯದಿಂದ ಮಲ್ಯ ಆಸ್ಪತ್ರೆಗೆ ಸೇರಿಸಿದ್ದೇವೆ. ಸದ್ಯಕ್ಕೆ ಸಿಸಿಯುನಲ್ಲಿ ಇದ್ದಾರೆ. ಇಂದು ಕಾರ್ಡಿಯೋಲಜಿಸ್ಟ್ ತಪಾಸಣೆ ನಡೆಸುತ್ತಾರೆ. ಬಳಿಕ ಸಮಸ್ಯೆ ಗೊತ್ತಾಗಲಿದೆ. ನಮಗೆ ಇಂಡಸ್ಟ್ರಿಯಿಂದ ಹಾಗೂ ಮಾಧ್ಯಮದವರಿಂದ ಸಹಾಯಬೇಕೆಂದು‘ ಸುವರ್ಣ ನ್ಯೂಸ್ ವೆಬ್ ಸೈಟ್ ಜೊತೆ ವಿಜಯಲಕ್ಷ್ಮೀ ಅಕ್ಕ ಮಾತನಾಡಿದ್ದಾರೆ.