ಹೆಸರು ಸೋನು ಪಾಟಿಲ್. ಉತ್ತರ ಕರ್ನಾಟಕದಿಂದ  ಬಂದ ಪ್ರತಿಭೆ. ಪತ್ರಿಕೋದ್ಯಮದಲ್ಲಿ ಮಾಸ್ಟರ್  ಡಿಗ್ರಿ ಮಾಡಿಕೊಂಡು ಕೆಲಸ ಹುಡುಕುತ್ತ ಬೆಂಗಳೂರಿಗೆ  ಬಂದವರು ಮುಂದೆ ಸಿನಿಮಾ ನಟಿ ಆದವರು. ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಲೇ ಈಗ ತಮಿಳಿನ ಪ್ರಸಿದ್ಧ ರಿಯಾಲಿಟಿ ಶೋನ ಸ್ಪರ್ಧಿಯೂ ಆಗಿದ್ದಾರೆ.

ಮುಂದಿನ ವಾರ ತೆರೆಗೆ ಬರಲಿರುವ ಶ್ರೀನಿ ನಿರ್ದೇಶನದ  ‘ಕೆಲವು ದಿನಗಳ ನಂತರ’ ಎನ್ನುವ ಹಾರರ್ ಚಿತ್ರದಲ್ಲಿ ನಟಿಸಿರುವ ಸೋನು ಪಾಟೀಲ್‌ರ ಸಿನಿ ಡೇಟಾ ಇದು. ತಮಿಳು ರಿಯಾಲಿಟಿ ಶೋನಲ್ಲಿ ಸೋನು ಕನ್ನಡದ ಕಿರುತೆರೆಯಲ್ಲಿ ‘ಪ್ಯಾಟೇ ಹುಡ್ಗೀರ ಹಳ್ಳಿ ಲೈಫು’ ರೀತಿಯಲ್ಲೇ ತಮಿಳಿನಲ್ಲಿ ‘ಒರು ನಾಳ್ ಗ್ರಾಮತ್ತಿಲ್’  ಎನ್ನುವ ರಿಯಾಲಿಟಿ ಶೋ ಬರುತ್ತಿದೆ. ಇದರಲ್ಲಿ ಸಿನಿಮಾ  ಹಾಗೂ ಕಿರುತೆರೆ ನಟ, ನಟಿಯರೇ ಸ್ಪರ್ಧಿಗಳು. ಇಂಥ ಶೋನಲ್ಲಿ ಸೋನು ಪಾಟೀಲ್ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.

7 ತಿಂಗಳು ಇದೇ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದು, ಪ್ರತಿ ಭಾನುವಾರ ರಾತ್ರಿ 9. 30 ಕ್ಕೆ ಈ ಶೋ ತಮಿಳಿನ ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ನಟಿ ಪದ್ಮಜಾ ರಾವ್ ಮೂಲಕ ತಮಿಳು ಕಿರುತೆರೆಯಲ್ಲಿ ಅವಕಾಶ ಪಡೆದುಕೊಂಡು ಸೋನು, ಈಗ ಕನ್ನಡದ ಜತೆಗೆ ತಮಿಳಿನಲ್ಲೂ ತಮ್ಮ ಪಯಣ ಶುರು ಮಾಡಿದ್ದಾರೆ.

ಹಾಸ್ಯ ನಟಿಯಾಗುವ ಕನಸು ಟಿವಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು ಪಾಟೀಲ್ ಸಿನಿಮಾಗಳಲ್ಲಿ ನಟಿಸುವ ಆಸೆಯಿಂದ ಕಿರುತೆರೆಗೆ ಕಾಲಿಟ್ಟರು. ‘ಮೊಗ್ಗಿನ ಮನಸು’, ‘ಗಾಂಧಾರಿ’, ‘ಅಮೃತವರ್ಷಿಣಿ’ ಹಾಗೂ ‘ಪಂಚಕಜ್ಜಾಯ’ ಧಾರಾವಾಹಿಗಳಲ್ಲಿ  ನಟಿಸುತ್ತಿರುವಾಗಲೇ ಸಾಧು ಕೋಕಿಲಾ ಜತೆ ಸಿನಿಮಾದಲ್ಲಿ ಕಾಣಿಸಿಕೊಂಡರು. ಮೊದಲು ನಟಿಸಿದ ಚಿತ್ರ ‘ಧರ್ಮಸ್ಯ’. ಈ ಚಿತ್ರದಲ್ಲಿ ಸಾಧು ಕೋಕಿಲ ಅವರೊಂದಿಗೆ ಹಾಸ್ಯ ನಟಿಯಾಗಿ ಕಾಣಿಸಿಕೊಂಡ ಮೇಲೆ ಚಿತ್ರೀಕರಣ ಮುಗಿಸಿದ ಕೊನೆಯ ಚಿತ್ರವೇ ಮೊದಲು ಬಿಡುಗಡೆಯಾಗುತ್ತಿದೆ.

ಸಾಕಷ್ಟು ಭರವಸೆ ಇಟ್ಟುಕೊಂಡು ನಟಿಸಿರುವ ಸಿನಿಮಾ ಏಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. ಎಂಟು ಚಿತ್ರಗಳ ಈ ಪೈಕಿ ಮೊದಲು ಬಿಡುಗಡೆಯಾಗುತ್ತಿರುವುದು ‘ಕೆಲವು ದಿನಗಳ ನಂತರ’ ಸಿನಿಮಾ. ಶ್ರೀನಿ ನಿರ್ದೇಶನದ ಈ ಚಿತ್ರದಲ್ಲಿ ಸೋನು ಪಾಟೀಲ್ ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರದಲ್ಲಿ ನಟಿಸಿದ್ದಾರೆ. ‘ಹಾರರ್ ಚಿತ್ರವಾದರೂ ಯುವ ಜನರಿಗೆ ಸಂದೇಶ ಸಾರುವತಂಹ ನಿಟ್ಟಿನಲ್ಲಿ ಈ ಸಿನಿಮಾ ಬಂದಿದೆ. ಜೂನ್. 22 ರಂದು ತೆರೆಗೆ ಬರುತ್ತಿದೆ. ನಾನು ಚಿತ್ರೀಕರಣ  ಮುಗಿಸಿದ ಕೊನೆಯ ಚಿತ್ರವೇ ಮೊದಲು ಬಿಡುಗಡೆಯಾಗುತ್ತಿದೆ. ಸಾಕಷ್ಟು ಭರವಸೆ ಇಟ್ಟುಕೊಂಡು ನಟಿಸಿರುವ ಸಿನಿಮಾ’ ಎಂಬುದು ಸೋನು ಮಾತು.