ಮಡಿಕೇರಿ[ಆ.17] ಕೊಡಗಿನ ಜನರ ನೋವಿಗೆ ಸ್ಪಂದಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದರು.ಇದಾದ ಮೇಲೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಅಭಿಮಾನಿಗಳಿಗೆ ಕೊಡಗಿನ ಜನರ ನೆರವಿಗೆ ಧಾವಿಸಲು ಮನವಿ ಮಾಡಿಕೊಂಡಿದ್ದಾರೆ. ಡಾ.ರಾಜ್ ಕುಟುಂಬದ ವಿನಯ್ ರಾಜ್ ಕುಮಾರ್ ಸಹ ಕೇರಳದ ಜನರೊಂದಿಗೆ ನಿಲ್ಲೋಣ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಇನ್ನು ನಟಿಯರಾದ ಹರ್ಷಿಕಾ ಪೂಣಚ್ಚ, ರಶ್ಮಿಕಾ ಮಂದಣ್ಣ ಸಹ ಟ್ವಿಟರ್ ಮೂಲಕ ನೆರವಿಗೆ ಧಾವಿಸಲು ಕೇಳಿಕೊಂಡಿದ್ದಾರೆ. ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವೀಟ್ ಮಾಡಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದು ಕೊಡಗಿನ ಜನರೆ ಎಚ್ಚರಿಕೆ, ಮನೆಯಿಂದ ಹೊರಗೆ ಬರಬೇಡಿ, ಸುರಕ್ಷಿತ ಜಾಗದಲ್ಲಿ ಇರುವುದನ್ನು ಸ್ಪಷ್ಟಪಡಿಸಿಕೊಳ್ಳಿ ಎಂದು ಹೇಳಿದ್ದಾರೆ.

ಸಹಾಯವಾಣಿ ಇಲ್ಲಿದೆ