ಕನ್ನಡ ಚಿತ್ರರಂಗದ ಮೋಸ್ಟ್‌ ಎಲಿಜಿಬಲ್‌ ಬ್ಯಾಚಲರ್ ಬಾಯ್ ಲೂಸ್‌ ಮಾದ ಯೋಗಿ ಮದುವೆ ಆಗ್ತಾರೆ ಅನ್ನುವ ಸುದ್ದಿ ಈ ಹಿಂದನೇ ಸುದ್ದಿಯಾಗಿತ್ತು. ಸದ್ಯ ಲೇಟೆಸ್ಟ್ ನ್ಯೂಸ್ ಪ್ರಕಾರ ಲೂಸ್ ಮಾದ ಯೋಗಿ ಸಾಹಿತ್ಯ ಜೊತೆ ಸಪ್ತಪದಿ ತುಳಿಯೋದಿಕ್ಕೆ ರೆಡಿಯಾಗುತ್ತಿದ್ದಾರೆ. 

ಬೆಂಗಳೂರು (ಮೇ.22): ಕನ್ನಡ ಚಿತ್ರರಂಗದ ಮೋಸ್ಟ್‌ ಎಲಿಜಿಬಲ್‌ ಬ್ಯಾಚಲರ್ ಬಾಯ್ ಲೂಸ್‌ ಮಾದ ಯೋಗಿ ಮದುವೆ ಆಗ್ತಾರೆ ಅನ್ನುವ ಸುದ್ದಿ ಈ ಹಿಂದನೇ ಸುದ್ದಿಯಾಗಿತ್ತು...ಸದ್ಯ ಲೇಟೆಸ್ಟ್ ನ್ಯೂಸ್ ಪ್ರಕಾರ ಲೂಸ್ ಮಾದ ಯೋಗಿ ಸಾಹಿತ್ಯ ಜೊತೆ ಸಪ್ತಪದಿ ತುಳಿಯೋದಿಕ್ಕೆ ರೆಡಿಯಾಗುತ್ತಿದ್ದಾರೆ. ಜೂನ್ 11ಕ್ಕೆ ಎರಡು ಕುಟುಂಬದ ಸಮ್ಮುಖದಲ್ಲಿ ಸಾಹಿತ್ಯ ಕೈಗೆ ಗೋಲ್ಡ್ ರಿಂಗ್ ತೊಡಿಸುವ ಮೂಲಕ ಲೂಸ್ ಮಾದ ಯೋಗೇಶ್ ಸಾಹಿತ್ಯ ಜೊತೆ ಎಂಗೇಜ್’ಮೆಂಟ್ ಮಾಡಿಕೊಳ್ಳಲಿದ್ದಾರೆ. ಇದಾದ ಐದು ತಿಂಗಳ ನಂತರ ನವಂಬರ್ 2ಕ್ಕೆ ಯೋಗೇಶ್ ಸಾಹಿತ್ಯ ಜೊತೆ ಸಪ್ತಪದಿ ತುಳಿಯಲಿದ್ದಾರೆ.

ಕನ್ನಡ ಚಿತ್ರರಂಗಕ್ಕೂ ಯಾವುದೇ ಸಂಬಂಧವೂ ಇಲ್ಲದ ಐಟಿ ಉದ್ಯೋಗಿಯಾಗಿರೋ ಸಾಹಿತ್ಯರನ್ನ ಲೂಸ್ ಮಾದ ಯೋಗೇಶ್ ವರಿಸಲಿದ್ದಾರೆ. ಇವರಿಬ್ಬರ ಮದುವೆ ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಎರಡು ಕುಟುಂಬಗಳು ಹಾಗು ಚಿತ್ರರಂಗದ ತಾರೆಯರು ಹಾಗೂ ರಾಜಕೀಯ ಗಣ್ಯರು ಯೋಗೇಶ್ ಮದುವೆ ಸಾಕ್ಷಿಯಾಗಲಿದ್ದಾರೆ.