ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಳೆದ 5 ದಿನಗಳ ಹಿಂದೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು.

ಕನ್ನಡ ಸಿನಿಮಾದ ಜನಪ್ರಿಯ ಪೋಷಕ ನಟ, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ಲಂಬು ನಾಗೇಶ್ ನಿಧನರಾಗಿದ್ದಾರೆ.

1992ರಲ್ಲಿ ಪೃಥ್ವಿರಾಜ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಗೊಂಡ ಅವರು ಗಜ, ಹುಲಿಯಾ, ಪೊಲೀಸ್ ಸ್ಟೋರಿ-2, ಬಾಡಿಗಾರ್ಡ್,ಅಭಿಜಿತ್ ಸೇರಿದಂತೆ ನೂರಾರು ಚಿತ್ರಗಳಲ್ಲಿ ಪೋಷಕ ಹಾಗೂ ಖಳ ನಟರಾಗಿ ಅಭಿನಯಿಸಿದ್ದರು. ಅಶ್ವಿನಿ ನಕ್ಷತ್ರ ಸೇರಿದಂತೆ 50 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಳೆದ 5 ದಿನಗಳ ಹಿಂದೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸೆ.1 ರಂದು ವಿಧವಶರಾಗಿದ್ದಾರೆ. ಹನುಮಂತ ನಗರದ ನಿವಾಸದಲ್ಲಿ ಲಂಬು ನಾಗೇಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹುಟ್ಟೂರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅಂತಿಮ ಸಂಸ್ಕಾರ ನೆರವೇರಸಲಾಗುತ್ತದೆ.