ಅಪ್ಪನನ್ನು ನೆನದು ಆಟೋ ಡ್ರೈವರ್ ಆದ ಜಗ್ಗೇಶ್ | ಬೆಂಗಳೂರಿನ ರಸ್ತೆಗಳಲ್ಲಿ ಆಟೋ ಡ್ರೈವ್ ಮಾಡುತ್ತಾ ಅಪ್ಪನನ್ನು ನೆನೆದಿದ್ದಾರೆ |  ಅಂದು ಮಾಡಿದ ತಪ್ಪಿಗೆ ಇಂದು ಕ್ಷಮೆ ಕೇಳಿದ್ದಾರೆ. 

ನವರಸನಾಯಕ ಜಗ್ಗೇಶ್ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಬೇರೆ ಬೇರೆ ವಿಚಾರಗಳಲ್ಲಿ ಗಮನ ಸೆಳೆಯುತ್ತಾರೆ. ಸದ್ಯ ಪ್ರೀಮಿಯರ್ ಪದ್ಮಿನಿ ಯಶಸ್ಸಿನ ಖುಷಿಯಲ್ಲಿರುವ ಜಗ್ಗೇಶ್ ಇದ್ದಕ್ಕಿದ್ದಂತೆ ಆಟೋ ಹಿಡಿದು ರಸ್ತೆಗಿಳಿದಿದ್ದಾರೆ. 

ಬೆಂಗಳೂರಿನ ರಸ್ತೆಯಲ್ಲಿ ಆಟೋ ಡ್ರೈವ್ ಮಾಡುತ್ತಾ ಅಪ್ಪನನ್ನು ನೆನೆಸಿಕೊಂಡಿದ್ದಾರೆ. 1979/80 ರ ದಶಕಕ್ಕೆ ಜಾರಿದ್ದಾರೆ. ‘ನಿನ್ನ ಅನ್ನ ನೀನೇ ತಿನ್ನು, ಆಗ ಬದುಕಿನ ಅರ್ಥ ನಿನಗಾಗುವುದು ಎಂದು ಅಪ್ಪ ಹೇಳಿದಾಗ ನನಗೆ ಮೈಯೂರ ಚಿತ್ರದ ರಾಜಣ್ಣನಂತೆ ಶಪಥ ಮಾಡಿ ಮನೆಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿದ್ದೆ’ ಎಂದು ಅಪ್ಪನ ಜೊತೆಗಿನ ದಿನಗಳನ್ನು ನೆನೆಸಿಕೊಂಡಿದ್ದಾರೆ. 

View post on Instagram

ಇಂದು ಆಕಸ್ಮಿಕ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ ಅವನ ಅನುಮತಿ ಪಡೆದು ಆಟೋ ಓಡಿಸಿದೆ!ಅಪ್ಪ ಹಾಗು ನನ್ನ ಮನಸ್ಥಾಪದ ದಿನಗಳು ನೆನಪಾಗಿ #ಅಪ್ಪ ಎಂಥ ಶ್ರೇಷ್ಟ.. ಮಗ ನಾನು ಎಂಥ ಅಧಮ.!ವ್ಯೆತ್ಯಾಸ ನನ್ನ ತಲೆತಗ್ಗಿಸುವಂತೆ ನಾಚಿಕೆಯಾಯಿತು..! ಎಂದು ಪಶ್ಚಾತ್ತಾಪಪಟ್ಟಿದ್ದಾರೆ.