ಮಣಿ ಕರ್ಣಿಕಾ ವಿರುದ್ಧದ ಗಾಳಿ ಸುದ್ದಿಯಿಂದ ಬೇಸರ: ಕಂಗನಾ

Kangana Talk About Manikarnika controversy
Highlights

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಚರಿತ್ರೆ ಆಧರಿಸಿದ ‘ಮಣಿ ಕರ್ಣಿಕಾ’ ಚಿತ್ರದಲ್ಲಿ ರಾಣಿಯ ಕುರಿತು ಯಾವುದೇ ಆಕ್ಷೇಪಾರ್ಹ ಪ್ರಸ್ತಾಪ ಇಲ್ಲ ಎಂದು ನಟಿ ಕಂಗನಾ ರಾಣಾವತ್‌ ಸ್ಪಷ್ಟನೆ ನೀಡಿದ್ದಾರೆ.

ಮುಂಬೈ: ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಚರಿತ್ರೆ ಆಧರಿಸಿದ ‘ಮಣಿ ಕರ್ಣಿಕಾ’ ಚಿತ್ರದಲ್ಲಿ ರಾಣಿಯ ಕುರಿತು ಯಾವುದೇ ಆಕ್ಷೇಪಾರ್ಹ ಪ್ರಸ್ತಾಪ ಇಲ್ಲ ಎಂದು ನಟಿ ಕಂಗನಾ ರಾಣಾವತ್‌ ಸ್ಪಷ್ಟನೆ ನೀಡಿದ್ದಾರೆ.

ಇಂಥ ಗಾಳಿ ಸುದ್ದಿ ಪ್ರಚಾರ ಮಾಡುವುದು ರಾಣಿಗೆ ಅವಮಾನ ಮಾಡಿದಂತೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಈ ಚಿತ್ರದ ವಿರುದ್ಧ ರಾಜಸ್ಥಾನದ ಸರ್ವ ಬ್ರಾಹ್ಮಣ ಮಹಾಸಭಾ ಮಾಡುತ್ತಿರುವ ಆರೋಪದಿಂದ ನೋವಾಗಿದೆ.

 ರಾಣಿ ಕುರಿತು ಆ ರೀತಿಯಾಗಿ ಯೋಚಿಸುವುದು ಕೂಡಾ ನೀಚತನವಾಗುತ್ತದೆ. ಈ ರೀತಿಯ ಗಾಳಿಸುದ್ದಿ ಮೂಲಕ ಅವರೇ ರಾಣಿಯ ತೇಜೋವಧೆ ಮಾಡುತ್ತಿದ್ದಾರೆ ಎಂದು ಕಂಗನಾ ಹೇಳಿದ್ದಾರೆ.

loader