ಮಣಿಕರ್ಣಿಕಾ-ದ ಕ್ವೀನ್ ಆಫ್ ಝಾನ್ಸಿ ಚಿತ್ರದ ಚಿತ್ರೀಕರಣ ವೇಳೆ ನಟಿ ಕಂಗನಾ ರಾಣಾವತ್ ಹಣೆಗೆ ಆಕಸ್ಮಿಕವಾಗಿ ಖಡ್ಗ ತಾಗಿ ಗಾಯವಾಗಿದೆ. ಅವರ ಹಣೆಗೆ 15 ಹೊಲಿಗೆ ಹಾಕಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಂಬೈ (ಜು.21): ಮಣಿಕರ್ಣಿಕಾ-ದ ಕ್ವೀನ್ ಆಫ್ ಝಾನ್ಸಿ ಚಿತ್ರದ ಚಿತ್ರೀಕರಣ ವೇಳೆ ನಟಿ ಕಂಗನಾ ರಾಣಾವತ್ ಹಣೆಗೆ ಆಕಸ್ಮಿಕವಾಗಿ ಖಡ್ಗ ತಾಗಿ ಗಾಯವಾಗಿದೆ. ಅವರ ಹಣೆಗೆ 15 ಹೊಲಿಗೆ ಹಾಕಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೈದರಾಬಾದ್’ನಲ್ಲಿ ಸಹನಟ ನಿಹಾರ್ ಪಾಂಡ್ಯಾ ಜೊತೆ ಕತ್ತಿವರಸೆ ಸಾಹಸ ದೃಶ್ಯದಲ್ಲಿ ಪಾಲ್ಗೊಂಡಿದ್ದ ವೇಳೆ ಕಂಗನಾ ಹಣೆಗೆ ಆಕಸ್ಮಿಕವಾಗಿ ಖಡ್ಗ ತಾಗಿದ್ದು ಆಳವಾದ ಗಾಯಗಳಾಗಿವೆ. ಹಣೆಗೆ 15 ಹೊಲಿಗೆ ಹಾಕಲಾಗಿದೆ. 5 ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

(ಪೋಟೋ ಕೃಪೆ:ಇಂಡಿಯನ್ ಎಕ್ಸ್'ಪ್ರೆಸ್)