ಬಣ್ಣ ಯಾರಿಗೆ ತಾನೆ ಇಷ್ಟವಿರಲ್ಲ. ಒಬ್ಬೊಬ್ಬರಿಗೆ ಒಂದೊಂದು ಬಣ್ಣದ ಮೇಲೆ ಪ್ರೀತಿ. ಇದಕ್ಕೆ ತಕ್ಕಂತೆಯೇ ಅವರು ಹಾಕುವ ಉಡುಗೆ ತೊಡುಗೆಯೂ ಇರುತ್ತೆ.
ಹಾಗೆಯೇ ಬಾಲಿವುಡ್ ಚೆಲುವೆ ಕಂಗನಾ ರಾಣಾವತ್ ಈಗ ತಮ್ಮ ಇಷ್ಟದ ಉಡುಪನ್ನೇ ಹೆಚ್ಚು ಧರಿಸಲು ಮುಂದಾಗಿ ಆಧ್ಯಾತ್ಮದತ್ತ ಮುಖ ಮಾಡಿದರಾ ಎನ್ನುವ ಅನುಮಾನ ಹುಟ್ಟುಹಾಕಿದೆ.
ಮೊನ್ನೆ ಮೊನ್ನೆಯಷ್ಟೇ ಇಶಾ ಫೌಂಡೇಶನ್ ನಿರ್ಮಾಣ ಮಾಡಿರುವ ಆದಿ ಯೋಗಿ ಎದುರಲ್ಲಿ ಭಕ್ತಿಯಿಂದ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ಸ್ವತಃ ಕಂಗನಾ ಸೋಷಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದಾದ ಮೇಲೂ ಸಾಕಷ್ಟು ಕಡೆಗಳಲ್ಲಿ ಬಿಳಿಯ ಕಾಟನ್ ಸೀರೆಯಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಈಗ ಮತ್ತೆ ಅದೇ ರೀತಿಯಬಿಳಿಯ ಕಾಟನ್ ಸೀರೆಯಲ್ಲಿರುವ ಫೋಟೋ ಹಂಚಿಕೊಂಡು ‘ನನಗೆ ಪ್ರೀತಿ ಮಾಡಲು ಬಿಳಿಯ ಕಾಟನ್ ಉಡುಪಿಗಿಂತ ಬೇರೆ ಏನು ಬೇಕು’ ಎಂದು ಬರೆದುಕೊಂಡಿದ್ದಾರೆ ಶಾಂತಿ ಪ್ರಿಯೆ ಕಂಗನಾ. ಇದೆಲ್ಲದರಿಂದ ಕಂಗನಾ ಏನಾದರೂ ಆಧ್ಯಾತ್ಮದ ಕಡೆಗೆ ಹೆಚ್ಚು ವಾಲುತ್ತಿದ್ದಾರಾ? ಅವರಿಗೆ ವೈರಾಗ್ಯ ಬಂದಿದೆಯಾ? ಎಂಬ ಅನುಮಾನಗಳು ಸಹಜವಾಗಿಯೇ ಏಳುವಂತೆ ಮಾಡಿದರೂ ಸಿನಿಮಾ ವಿಚಾರ ಬಂದಾಗ ಈ ಬೆಡಗಿ ಸಿಕ್ಕ ಪಾತ್ರಕ್ಕೆ ಜೀವ ತುಂಬಿಯೇ ಸೈ ಎನ್ನುವುದು ಅವರ ಪಾಲಿನ ವಿಶೇಷ.
