ಮೋದಿ ಅಭಿಮಾನಿ ನಟಿ ಕಂಗನಾ ರಾಣಾವತ್  ಮೋದಿಯ ಅಭೂತಪೂರ್ವ ಗೆಲುವನ್ನು ಕುಟುಂಬದ ಜೊತೆ, ಅಡುಗೆ ಮನೆಯಲ್ಲಿ ಸೆಲಬ್ರೇಟ್ ಮಾಡಿದ್ದಾರೆ. 

ಕಂಗಾನಾ ಟೀಂ ಅವರ ಫೋಟೋಗಳನ್ನು ಶೇರ್ ಮಾಡಿ,  ಮೋದಿ ಜಿಯವರು ಸ್ಟ್ರಾಂಗ್ ಐಡಿಯಾಗಳು, ಮುನ್ನೋಟ, ಜನರ ಆಶೋತ್ತರಗಳನ್ನು ಈಡೇರಿಸಲು ಬದ್ಧರಾಗಿರಲಿ. ನಾವೆಲ್ಲಾ ಮೋದಿಯವರ ಜೊತೆಗಿದ್ದೇವೆ. ನಾನು ಖುಷಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

 

ಮೋದಿ ಗೆಲುವನ್ನು ಕಂಗನಾ ಅಡುಗೆ ಮಾಡಿ ಕುಟುಂಬದವರ ಜೊತೆ ಕಳೆದು ಸೆಲಬ್ರೇಟ್ ಮಾಡಿದ್ದಾರೆ. ಬಿಸಿ ಬಿಸಿ ಚಹಾ ಮಾಡಿ, ಪಕೋಡಾ ಮಾಡಿ ಖುಷಿ ಖುಷಿಯಾಗಿ ಕಳೆದಿದ್ದಾರೆ. 

ಕಂಗನಾ ತಂಗಿ ರಂಗೋಲಿ ಫೋಟೋ ಶೇರ್ ಮಾಡಿ ಕಂಗನಾ ಅಪರೂಪಕ್ಕೆ ಅಡುಗೆ ಮಾಡುತ್ತಾರೆ. ಅವಳಿಂದು ಮೋದಿ ಜಿ ಗೆಲುವಿನಿಂದ ಖುಷಿಯಾಗಿದ್ದಾಳೆ. ಹಾಗಾಗಿ ಚಾಯ್ ವಿತ್ ಪಕೋಡಾ ಮಾಡಿದ್ದಾಳೆ ಎಂದು ಬರೆದುಕೊಂಡಿದ್ದಾರೆ.