ಬಾಲಿವುಡ್ ನಟ ರಾಹುಲ್ ಬೋಸ್ ಗೆ 2 ಬಾಳೆಹಣ್ಣಿಗೆ 442 ರೂ ಬಿಲ್ ಕೊಟ್ಟ ಹೊಟೇಲ್ ಜೆ ಡಬ್ಲೂ ಮ್ಯಾರಿಯೆಟ್ ಗೆ ತೆರಿಗೆ ಇಲಾಖೆ 25 ಸಾವಿರ ರೂ ದಂಡ ವಿಧಿಸಿದೆ. 

 

ರಾಹುಲ್ ಬೋಸ್ ಗೆ 2 ಬಾಳೆಗಹಣ್ಣಿಗೆ ಹೊಟೇಲ್ ಮ್ಯಾರಿಯೆಟ್ ದುಬಾರಿ ಬಿಲ್ ನೀಡಿ ಶಾಕ್ ನೀಡಿತ್ತು. ಿದರ ವಿಡಿಯೋವನ್ನು ರಾಹುಲ್ ಟ್ವಟರ್ ನಲ್ಲಿ ಶೇರ್ ಮಾಡಿದ್ದರು. ಇದು ಚರ್ಚೆಗೆ ಒಳಗಾಗಿತ್ತು. ಬಿಲ್ ನಲ್ಲಿ ತಾಜಾ ಹಣ್ಣುಗಳಿಗೆ ಜಿಎಸ್ ಟಿ ವಿಧಿಸಲಾಗಿತ್ತು. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಲಾಗಿತ್ತು.   

ವಿಡಿಯೋ ನೋಡಿದ ಚಂಡೀಗಢ ತೆರಿಗೆ ಅಧಿಕಾರಿ ಮಂದೀಪ್ ಸಿಂಗ್ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು.