ಗೆಳೆಯನ ತಂಗಿ ಜೊತೆ ಪ್ರೇಮಾಂಕುರವಾಯ್ತು; ತಮ್ಮ ಲವ್ ಸ್ಟೋರಿಯನ್ನು ಸಂತೋಷ್ ಹೆಗ್ಡೆ ಬಿಚ್ಚಿಟ್ಟಿದ್ದು ಹೀಗೆ

Justice Santosh Hegde Love Story
Highlights

ಅದು 16 ರ ಹರೆಯ. ಎಸ್‌ಎಸ್‌ಎಲ್‌ಸಿ ಮುಗಿಸಿ ಸೆಂಟ್ ಜೋಸೆಫ್ ಕಾಲೇಜ್‌ಗೆ ಇಂಟರ್‌ಮಿಡಿಯೆಟ್ ವಿದ್ಯಾಭ್ಯಾಸಕ್ಕೆ ಸೇರಿಕೊಂಡಿದ್ದೆ. ನನ್ನ ಕ್ಲಾಸ್‌ಮೇಟ್  ಪಂಜಾಬಿ ಮೂಲದವರಾದರು. ಅವನ ಜೊತೆ ಗೆಳೆತನ
ಶುರುವಾಯಿತು.

ಬೆಂಗಳೂರು (ಫೆ.14): ಅದು 16 ರ ಹರೆಯ. ಎಸ್‌ಎಸ್‌ಎಲ್‌ಸಿ ಮುಗಿಸಿ ಸೆಂಟ್ ಜೋಸೆಫ್ ಕಾಲೇಜ್‌ಗೆ ಇಂಟರ್‌ಮಿಡಿಯೆಟ್ ವಿದ್ಯಾಭ್ಯಾಸಕ್ಕೆ ಸೇರಿಕೊಂಡಿದ್ದೆ. ನನ್ನ ಕ್ಲಾಸ್‌ಮೇಟ್  ಪಂಜಾಬಿ ಮೂಲದವರಾದರು. ಅವನ ಜೊತೆ ಗೆಳೆತನ
ಶುರುವಾಯಿತು.

ಆತ್ಮೀಯತೆ ಬೆಳೆದ ಬಳಿಕ ಆತನ ಮನೆಗೆ ಆಗಾಗ್ಗೆ ಹೋಗುತ್ತಿದ್ದೆ. ಈ ವೇಳೆ ಸ್ನೇಹಿತನ ತಂಗಿ ಶಾರದಾಳ ಪರಿಚಯವಾಯಿತು. ಸಹಜ ಮಾತುಗಳು ಮನಕ್ಕೆ ತಾಗಿ ಸ್ನೇಹಕ್ಕೆ ತಿರುಗಿತು. ಇದೇ ಸ್ನೇಹದ ಮೇಲೆ ಹೊಟೇಲ್‌ನಲ್ಲಿ ಚಹಾ ಸೇವನೆ ಆರಂಭ. ಮನದ ಭಾವನೆಗಳು ಮಿಲನವಾಗಿ ಪ್ರೇಮಾಂಕುರವಾಯಿತು. ಇಬ್ಬರ ಮನದಲ್ಲಿ ಪ್ರೇಮ ಇದ್ದರೂ ನಿವೇದನೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದೇವು. ಕೊನೆಗೆ ನಾನೇ ಹೃದಯಾಂತರದಲ್ಲಿ ಅಡಗಿದ ಪ್ರೀತಿಯನ್ನು ಬಿಚ್ಚಿಟ್ಟೆ. ಹೇಗಿದ್ದರೂ ನನ್ನ ಮೇಲೆ ಆಕೆಗೆ ಪ್ರೀತಿ ಇರುವ ಬಗ್ಗೆ ಗೊತ್ತಿದ್ದರಿಂದ ನಿರಾಕರಿಸುವುದಿಲ್ಲ ಎಂದು ಗೊತ್ತಿತ್ತು. ಅದೇ ಧೈರ್ಯದ ಮೇಲೆ ಮನದಾಳದ ಭಾವನೆಗಳನ್ನು ಮುಂದಿಟ್ಟೆ. ನನ್ನ ಪ್ರೇಮಕ್ಕೆ ಹಸಿರು ನಿಶಾನೆ ಸಿಕ್ಕಿತು.

ಅವರು  ಪಂಜಾಬ್ ಮೂಲದವರಾಗಿದ್ದು, ನಮ್ಮ ಪ್ರೀತಿಗೆ ಅಡ್ಡಿಯಾಗುವ ಆತಂಕ ಇತ್ತು. ಆದರೆ, ನನ್ನ ಬಗ್ಗೆ ಸ್ನೇಹಿತ ಮತ್ತು ಅವರ ಕುಟುಂಬದವರಿಗೆ ಗೊತ್ತಿದ್ದರಿಂದ ನಮ್ಮ ಪ್ರೀತಿಗೆ ಶಾರದಾ ಮನೆಯವರಿಗೆ ಯಾವುದೇ ಅಡ್ಡಿಯಾಗಲಿಲ್ಲ.
ನಮ್ಮ ಕುಟುಂಬದವರು ಸಹ ಪ್ರೀತಿಗೆ ನೀರೆರೆದರು. ಮನ ತಟ್ಟಿದಾಕೆ ಮನೆಗೂ ಬರಲು ಸಮಸ್ಯೆಗಳು ಎದುರಾಗಲಿಲ್ಲ. ಆದರೆ, ಕಾಸಿಲ್ಲದ ಕಾರಣ ನಮ್ಮ ಮದುವೆ ಮಾತ್ರ ಮುಂದೂಡುತ್ತಲೇ ಇತ್ತು. ಅಷ್ಟರಲ್ಲಿ ಆಕೆಯು ಕಾನೂನು
ಪದವಿ ಪಡೆದಳು. ನಾನು ಕಾನೂನು ಪದವಿ ಗಳಿಸಿ ಲಾ ಪ್ರಾಕ್ಟೀಸ್ ಮಾಡುತ್ತಿದ್ದೆ. ಕೇವಲ 500 ರೂ. ಸಿಗುತ್ತಿತ್ತು. ಹೇಗಿದ್ದರೂ ಬಿಟ್ಟಿ ಮನೆ ಇತ್ತು. ಅಂದರೆ ತಂದೆಯ ಮನೆ ಇದ್ದ ಕಾರಣ ಬಾಡಿಗೆ ಸಮಸ್ಯೆ ಇರಲಿಲ್ಲ. ನನಗೆ ಬರುವ ಆದಾ
ಯದಲ್ಲಿ ಸಂಸಾರ ಹೇಗೆ ಮಾಡುತ್ತೆ ಅಂತಾ ತಂದೆಯವರು ಸುಮಾರು ಬಾರಿ ಕೇಳಿದ್ದರು. ಅಂತೂ ನನಗೆ 29 ವರ್ಷ, ಆಕೆಗೆ 25  ವರ್ಷವಾದಾಗ ಗೃಹಸ್ಥಾಶ್ರಮಕ್ಕೆ ಕಾಲಿಟ್ಟೆವು. ಕೆಲವೇ ಕೆಲವು ಮಂದಿಯ ಸಮ್ಮುಖದಲ್ಲಿ ಪಂಜಾಬಿ
ಶೈಲಿಯನಲ್ಲಿ ವಿವಾಹ ನೆರೆವೇರಿತು. ಕುದುರೆ ಮೇಲೆ ಬರುವಂತೆ ವರನಾದ ನನಗೆ ಹೇಳಿದರು. ಆದರೆ, ಅದೇಕೋ ನನಗೆ ಮುಜಗರವಾದರಿಂದ ಹಿಂದೇಟು ಹಾಕಿದೆ. ಪಂಜಾಬಿ  ಶೈಲಿ ಬಳಿಕ ಆರತಕ್ಷತೆ ನಡೆಸಲಾಯಿತು. ತಂದೆಯ ಮೇಲೆ ಅವಲಂಬಿತವಾಗದೆ ನನಗೆ ಬರುವ ಆದಾಯದಲ್ಲಿಯೇ ಸಂಸಾರ ನಡೆಸಲಾಗುತ್ತಿತ್ತು. ದಾಂಪತ್ಯಕ್ಕೆ ಈಗ ಅರ್ಧ ಶತಕ. 50 ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದೇವೆ. 

loader